ಕಾರವಾರದ ಸಂಕಲ್ಪ ಕಮ್ಯುನಿಕೇಶನ್ ಪರಿಸರಕ್ಕೆ ಪೂರಕವಾದ ಮಣ್ಣಿನ ಗಣಪತಿ ವಿಗ್ರಹ ಪೂಜಿಸುವುದನ್ನು ಉತ್ತೇಜಿಸುವುದಕ್ಕಾಗಿ `ಸೆಲ್ಪಿ ವಿತ್ ಗಣೇಶ’ ಎಂಬ ಸ್ಪರ್ಧೆ ಆಯೋಜಿಸಿದೆ.
ಕಳೆದ 5 ವರ್ಷಗಳಿಂದ ಈ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಗಣೇಶ ಉತ್ಸವದ ಅಂಗವಾಗಿ ಮಣ್ಣಿನ ಗಣಪನೊಂದಿಗೆ ನಿಂತು ಪಡೆದ ಸೆಲ್ಪಿ ಫೋಟೋಗಳನ್ನು ಕಳುಹಿಸಬೇಕು. ಹೆಸರು ಹಾಗೂ ವಿಳಾಸ ನಮೂದಿಸುವುದು ಕಡ್ಡಾಯ. ಒಬ್ಬರು ಒಂದು ಫೋಟೋ ಮಾತ್ರ ಕಳುಹಿಸಲು ಅವಕಾಶ.
ಈ ಫೋಟೋವನ್ನು ND Plus ಮಾಧ್ಯಮದ ಫೇಸ್ಬುಕ್ ಪುಟದಲ್ಲಿ ಹಂಚಿಕೊಳ್ಳಲಿದ್ದು, ಅಲ್ಲಿ ಬರುವ ಲೈಕ್ ಆಧರಿಸಿ 3 ಬಹುಮಾನಗಳನ್ನು ನೀಡಲಾಗುತ್ತದೆ. ಲೈಕ್ ಬರದೇ ಇದ್ದರೂ ಆಯೋಜಕರು ಉತ್ತಮ 5 ಫೋಟೋಗಳಿಗೆ ಬಹುಮಾನ ನೀಡಲಿದ್ದಾರೆ.
ಸೆ. 19 ಫೋಟೋ ಕಳುಹಿಸಲು ಕೊನೆ ದಿನ. ಸೆ 29ರಂದು ವಿಜೇತರ ವಿವರ ಘೋಷಿಸಲಾಗುತ್ತದೆ. ಫೋಟೋ ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ: 9141823262.
ಮಣ್ಣಿನ ಗಣಪನನ್ನು ಪೂಜಿಸಿ. ಪೃಕೃತಿಯನ್ನು ಉಳಿಸಿ.. ಪರಿಸರವನ್ನು ಆರಾಧಿಸಿ!