ಶಿರೂರು ಗುಡ್ಡ ಕುಸಿತ ಉಂಟಾದಾಗ ಅಲ್ಲಿನ ಶಾಲೆ ಬಗ್ಗೆ ಹೆಚ್ಚಿನವರು ಯೋಚಿಸಿಲ್ಲ. ಆದರೆ, ಉಳುವರೆ ಶಾಲೆಯಲ್ಲಿ ಶಿಕ್ಷಕರಾಗಿದ್ದ ಸಂದ್ಯಾ ನಾಯ್ಕ ಅವರು ತಮ್ಮ ಶಾಲಾ ಮಕ್ಕಳ ಭವಿಷ್ಯಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ.
ಪಾಠ ಬೋಧನೆಗೆ ಸೀಮಿತವಾಗದೆ ತನ್ನ ಶಾಲೆಯ ಮಕ್ಕಳಿಗೆ, ಅವರ ಕುಟುಂಬದವರ ಸಂಕಷ್ಟದ ಸಮಯದಲ್ಲಿ ಶಿಕ್ಷಕಿಯ ನೆರವು ಅಪಾರ. ಶಿರೂರು ಗುಡ್ಡ ಕುಸಿತದ ನಂತರ ಗಂಗಾವಳಿ ನದಿ ಉಕ್ಕೇರಿದ್ದರಿಂದ ಉಳುವರೆಯ ಮಕ್ಕಳಿಗೆ ಧೈರ್ಯ ತುಂಬಿದವರು ಸಂದ್ಯಾ ಟೀಚರ್. ಊರಿನವರಿಗೆ ಸಹ ಅವರು ನಿರಂತರವಾಗಿ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ.
ಕುಮಟಾ ತಾಲೂಕಿನ ಅಘನಾಶಿನಿ ಗ್ರಾಮದ ಸಂಧ್ಯಾ ನಾಯ್ಕ ಉಳುವರೆ ಶಾಲೆಯಲ್ಲಿ ನಾಲ್ಕೂವರೆ ವರ್ಷದಿಂದ ಶಿಕ್ಷಕಿಯಾಗಿದ್ದಾರೆ. ಗ್ರಾಮವು ಸಂಕಷ್ಟದಲ್ಲಿದ್ದಾಗ ಶಿಕ್ಷಕಿ ಸಂಧ್ಯಾ ನಾಯ್ಕ ನೆರವಿಗೆ ನಿಂತಿದ್ದು, ತಮಗೆ ಪರಿಚಯವಿದ್ದವರಿಗೆ – ಸಂಬ0ಧಿಕರಿಗೆ ಶಾಲೆಯ ಬಗ್ಗೆ ವಿವರಿಸಿದ್ದಾರೆ. ಜೊತೆಗೆ ಹಲವು ಸಂಘ ಸಂಸ್ಥೆಗಳಿಗೆ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿ ಜನರ ಕಷ್ಟಕ್ಕೆ ಸ್ಪಂದಿಸುವoತೆ ಕೋರಿಕೊಂಡಿದ್ದಾರೆ. ಅವರ ಹಲವರು ಸ್ಪಂದಿಸಿ ಸಂತ್ರಸ್ತರಿಗೆ ನೆರವಾದರು.
ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿದ ಬಳಿಕ ಉಳುವರೆಯ ಆರು ಮನೆಗಳು ಸಂಪೂರ್ಣ ನೆಲಸಮವಾಗಿದ್ದವು. 20ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿತ್ತು. ಹತ್ತಾರು ಮಕ್ಕಳು ಗಾಯಗೊಂಡು ಆಕ್ರಂದಿಸುತ್ತಿದ್ದರು. ದುರಂತದ ಭಯ ಮಕ್ಕಳನ್ನು ಆವರಿಸಿದ್ದರಿಂದ ಅವರು ಧೃತಿಗೆಟ್ಟಿದ್ದರು. ಅಂಥ ಸಂದರ್ಭದಲ್ಲಿ ಮಕ್ಕಳಲ್ಲಿ ಶಿಕ್ಷಕಿ ಮಕ್ಕಳ ಜೊತೆಯಿದ್ದು ಧೈರ್ಯ ತುಂಬಿದ್ದರು. ಶಾಲೆಯಲ್ಲಿರುವ 56 ಮಕ್ಕಳು ತಮ್ಮ ಮಕ್ಕಳು ಎಂದು ಭಾವಿಸಿ ಅವರು ಅಲ್ಲಿ ಸೇವೆಯಲ್ಲಿದ್ದಾರೆ.
ಈ ಕಾರಣಕ್ಕೆ ಉಳುವರೆಯ ಗ್ರಾಮಸ್ಥರು ತಮ್ಮೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಂಧ್ಯಾ ನಾಯ್ಕ ಅವರನ್ನು ಸದಾ ಶ್ಲಾಘಿಸುತ್ತಾರೆ. ಅವರು ಮಾಡುತ್ತಿರುವ ಸೇವೆ ಸಹ ಅಷ್ಟೇ ದೊಡ್ಡದು.