ಕುಮಟಾ: ಅಂಕೋಲಾ ಅವರ್ಸಾ ಸಕಲಬೇಣದ ಶ್ಯಾಮು ಕೃಷ್ಣ ಆಚಾರಿ ಎಂಬಾತರಿಗೆ ಮೀನು ಲಾರಿ ಗುದ್ದಿದೆ.
ಸೆ 9ರಂದು ಸಂಜೆ ಅವರು ಅಂಕೋಲಾದಿoದ ಕುಮಟಾ ಕಡೆ ಬೈಕ್ ಮೇಲೆ ಹೋಗುತ್ತಿದ್ದರು. ಬರ್ಗಿ ರಸ್ತೆಯ ಘಟ್ಟದಲ್ಲಿ ಕುಮಟಾ ಕಡೆಯಿಂದ ಜೋರಾಗಿ ಲಾರಿ ಓಡಿಸಿಕೊಂಡು ಬಂದ ಉಡುಪಿಯ ಮುಸ್ತಪ ಶೇಖ್ ಅವರ ಬೈಕಿಗೆ ಎದುರಿನಿಂದ ತನ್ನ ಲಾರಿ ಗುದ್ದಿದ್ದಾನೆ. ಮುಂದಿದ್ದ ವಾಹನ ಓವರ್‌ಟೆಕ್ ಮಾಡುವ ಬರದಲ್ಲಿ ಆಚಾರಿ ಅವರಿಗೆ ಆತ ಪೆಟ್ಟು ಮಾಡಿದ್ದಾನೆ.
ಈ ಅಪಘಾತದಿಂದ ಹೊಟ್ಟೆ, ಕೈ ಬುಜಕ್ಕೆ ಗಾಯ ಮಾಡಿಕೊಂಡ ಶ್ಯಾಮು ಅವರು ಆಸ್ಪತ್ರೆ ಸೇರಿದ್ದಾರೆ. ಗೋಕರ್ಣ ತಾರಿಮಕ್ಕಿಯ ಶ್ಯಾಮು ಕೃಷ್ಣ ಆಚಾರಿ ಈ ಬಗ್ಗೆ ಗೋಕರ್ಣ ಪೊಲೀಸರಿಗೆ ದೂರು ನೀಡಿದ್ದು, ಲಾರಿ ಚಾಲಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.