6
  • Latest

ಮನುಷ್ಯರನ್ನು ಬಿಟ್ಟಿಲ್ಲ ಭಯಾನಕ ರೋಗ: ಹುಚ್ಚು ನಾಯಿಗಳಿವೆ ಎಚ್ಚರ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮನುಷ್ಯರನ್ನು ಬಿಟ್ಟಿಲ್ಲ ಭಯಾನಕ ರೋಗ: ಹುಚ್ಚು ನಾಯಿಗಳಿವೆ ಎಚ್ಚರ!

AchyutKumar by AchyutKumar
in ಸ್ಥಳೀಯ

ನಾಯಿ ಹಾಗೂ ಬೆಕ್ಕುಗಳ ಮೂಲಕ ಹರಡುವ ರೋಗ ಮನುಷ್ಯನ ಮೆದುಳಿನ ಮೇಲೆ ನೇರವಾಗಿ ಆಕ್ರಮಣ ನಡೆಸುತ್ತಿದೆ. ಆಗ ನೀರು ಬೆಳಕು ಕಂಡರೂ ಹೆದರುವ ಮನುಷ್ಯ ಪುಟ್ಟ ಪುಟ್ಟ ಶಬ್ದ ಕೇಳಿದರೂ ಸಹಿಸಿಕೊಳ್ಳುವುದಿಲ್ಲ. ಈ ರೋಗ ತಗುಲಿದ ನಂತರ ಎಲ್ಲಿ ಚಿಕಿತ್ಸೆ ಕೊಡಿಸಿದರೂ ಬದುಕಿಸಿಕೊಳ್ಳುವುದು ಕಷ್ಟ.

ಯಲ್ಲಾಪುರ ತಾಲೂಕಿನ ಮದನೂರು ಬಳಿಯ ಮಾದೇವಕೊಪ್ಪದಲ್ಲಿ ರೇಬಸ್ ರೋಗ ವ್ಯಾಪಕವಾಗಿ ಕಾಡುತ್ತಿದೆ. ಈ ಭಾಗದಲ್ಲಿ ಓಡಾಡಿಕೊಂಡಿರುವ ಹುಚ್ಚು ನಾಯಿ 20ಕ್ಕೂ ಅಧಿಕ ಜಾನುವಾರುಗಳಿಗೆ ಕಚ್ಚಿದ್ದು, ಆ ಜಾನುವಾರುಗಳಲ್ಲಿ ಸಹ ರೋಗದ ಲಕ್ಷಣಗಳು ಕಂಡು ಬಂದಿವೆ. ಜಾನುವಾರುಗಳಿಂದ ಮನುಷ್ಯರಿಗೆ ಸಹ ರೋಗ ಹರಡುವ ಆತಂಕ ಎದುರಾಗಿದೆ.

ನಾಯಿ ಹಾಗೂ ಬೆಕ್ಕು ಸೇರಿದಂತೆ ವಿವಿಧ ಪ್ರಾಣಿಗಳ ಮೂಲಕ ಮೂಲಕ ಹರಡುವ ಈ ರೋಗ ಮನುಷ್ಯರನ್ನು ಬಿಟ್ಟಿಲ್ಲ. ಒಮ್ಮೆ ರೋಗ ತಗುಲಿದರೆ ಅದಕ್ಕೆ ಔಷಧವಿಲ್ಲ. ರೋಗ ಹರಡಿದ ಮನುಷ್ಯನಿಗೆ ನೀರು ಹಾಗೂ ಬೆಳಕು ಕಂಡರೆ ಭಯ ಶುರುವಾಗುತ್ತದೆ. ಶಬ್ದಗಳನ್ನು ಕೇಳಿದರೂ ಸಹ ಸಹಿಸಲು ಸಾಧ್ಯವಾಗುವುದಿಲ್ಲ. ಪ್ಯಾರಲೆಸಸ್ ಹಾಗೂ ಇನ್ನಿತರ ರೋಗಗಳು ಸಾಮಾನ್ಯ. ಕೊನೆಗೆ ಉಸಿರಾಟದ ಸಮಸ್ಯೆಯಿಂದ ರೋಗ ತಗುಲಿದ ಮನುಷ್ಯ ಸಾವನಪ್ಪುವ ಸಾಧ್ಯತೆ ಹೆಚ್ಚಿದೆ. ರೋಗಪೀಡಿತ ಪ್ರಾಣಿ ಕಚ್ಚಿದ 1 ವರ್ಷದ ಒಳಗೆ ರೇಬಿಸ್ ರೋಗ ಮನುಷ್ಯನ ಮೆದುಳನ್ನು ಆಕ್ರಮಿಸುತ್ತದೆ.

ಯಲ್ಲಾಪುರ ತಾಲೂಕಿನಲ್ಲಿ ಪ್ರತಿ ವರ್ಷ ಸರಿಸುಮಾರು 10 ಜಾನುವಾರುಗಳು ರೇಬಿಸ್ ರೋಗದಿಂದ ಸಾವನಪ್ಪುತ್ತಿರುವುದು ವರದಿಯಾಗುತ್ತಿದ್ದು, ಈ ರೋಗದಿಂದ ಸಾವನಪ್ಪುವ ನಾಯಿಗಳ ಸಂಖ್ಯೆ ಲೆಕ್ಕವಿಡಲು ಸಾಧ್ಯವಿಲ್ಲ. ರೇಬಿಸ್ ರೋಗ ತಗುಲಿದ ನಾಯಿಗಳನ್ನು ಗುರುತಿಸಲು ವಿಧಾನಗಳಿವೆ. ಆದರೆ, ಇತರೆ ಪ್ರಾಣಿಗಳಲ್ಲಿನ ರೋಗ ಗುರುತಿಸುವಿಕೆ ಸಲೀಸಾಗಿಲ್ಲ. ಕಂಡ ಕಂಡಲ್ಲಿ ಕಚ್ಚುವುದು ಹಾಗೂ ಜೊಲ್ಲು ಸುರಿಸುವುದು ಈ ರೋಗಗೃಸ್ಥ ನಾಯಿಯ ಪ್ರಮುಖ ಲಕ್ಷಣ. ಕೆಲ ನಾಯಿಗಳಲ್ಲಿ ಈ ಲಕ್ಷಣ ಕಾಣಬರದೇ ಶಾಂತ ಸ್ವಭಾವವೂ ಇರುತ್ತದೆ. ಲವಲವಿಕೆಯಿಂದ ಕೂಡಿದ ನಾಯಿ ಸಹ ಏಕಾಏಕಿ ಸಪ್ಪೆಯಾಗುತ್ತದೆ. ನಾಯಿ ಹತ್ತಿರ ಹೋದಾಗ ಪರಿಚಯಸ್ಥರನ್ನು ಸಹ ಗುರುತಿಸದೇ ಕಚ್ಚುವುದು ಇನ್ನೊಂದು ಲಕ್ಷಣ. ರೇಬಿಸ್ ರೋಗವಿರುವ ನಾಯಿಗಳಲ್ಲಿ ಜ್ವರ ಸಾಮಾನ್ಯ.

ಲಸಿಕೆ ಉಚಿತ.. ಶ್ವಾನ ಸುರಕ್ಷಿತ!
ಈ ರೋಗ ಹರಡದಂತೆ ತಡೆಯಲು ಎಲ್ಲಾ ನಾಯಿಗಳಿಗೆ ಲಸಿಕೆ ಹಾಕಿಸುವುದು ಒಂದೇ ದಾರಿ. ರೋಗ ಕಾಣಿಸಿಕೊಂಡ 10 ದಿನದ ಒಳಗೆ ನಾಯಿ ಸಾವನಪ್ಪುತ್ತದೆ. ಆದರೆ, ಸಾವನಪ್ಪುವ ಮುನ್ನ ಇನ್ನಷ್ಟು ನಾಯಿಗಳಿಗೆ ಅದು ರೋಗ ಹರಡಿರುತ್ತದೆ. ನಾಯಿಗಳ ಗರ್ಭಧಾರಣೆ ಅವಧಿಯಲ್ಲಿ ಈ ರೋಗ ಹರಡುವಿಕೆ ಪ್ರಮಾಣ ಜಾಸ್ತಿ. ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚರಿಸುವ ನಾಯಿಗಳು ದೊಡ್ಡ ಪ್ರಮಾಣದಲ್ಲಿ ರೋಗ ಹರಡುವಿಕೆ ನಡೆಸುತ್ತಿದ್ದು, ಸ್ಥಳೀಯ ಸಂಸ್ಥೆಗಳು ನಾಯಿಗಳ ಸಂತಾನಹರಣ ಚಿಕಿತ್ಸೆ ಮಾಡಿಸುವುದು ಸಹ ಅಷ್ಟೇ ಮುಖ್ಯ. `ಪಶು ಸಂಗೋಪನಾ ಇಲಾಖೆಯಲ್ಲಿ ಎಲ್ಲಾ ದಿನಗಳಲ್ಲಿಯೂ ಉಚಿತ ಲಸಿಕೆ ಹಾಕಲಾಗುತ್ತದೆ. ಇದೀಗ ಜನ ಸೇರುವ ಎಲ್ಲಾ ಕಡೆ ತೆರಳಿ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ’ ಎಂದು ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಡಾ ಸುಬ್ರಾಯ ಭಟ್ಟ ತಿಳಿಸಿದರು.

ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ರೇಬಿಸ್ ವಿರುದ್ಧ ಆಂದೋಲನ ನಡೆಯುತ್ತಿದೆ. ಪಶು ವೈದ್ಯರು ಪ್ರತಿ ಊರಿಗೆ ತೆರಳಿ ಜನ ಜಾಗೃತಿ ಮೂಡಿಸುತ್ತಾರೆ. ಆದರೆ, ರೇಬಿಸ್ ರೋಗ ಹರಡುವಿಕೆ ತಡೆಯ ಬಗ್ಗೆ ಜನರಲ್ಲಿ ಇನ್ನೂ ಅರಿವು ಮೂಡಿಲ್ಲ. `ಅನುಮಾನಾಸ್ಪದ ನಾಯಿ ದಾಳಿಗೆ ಒಳಗಾದ ಮನುಷ್ಯ ತಕ್ಷಣ ಚಿಕಿತ್ಸೆ ಪಡೆಯಬೇಕು. ನಿರ್ಲಕ್ಷಿಸಿದರೆ ಅಪಾಯ ಖಚಿತ’ ಎಂಬುದು ವೈದ್ಯರ ಮಾತು. ಪಶು ಇಲಾಖೆ ಹಾಗೂ ವಿವಿಧ ಶಿಬಿರಗಳಲ್ಲಿ ನಾಯಿಗಳಿಗೆ ಉಚಿತವಾಗಿ ಲಸಿಕೆ ಹಾಕಿಸಲಾಗುತ್ತದೆ. ನಾಯಿಗಳ ಜೊತೆ ಮನುಷ್ಯರ ಸುರಕ್ಷತೆ ದೃಷ್ಠಿಯಿಂದಲೂ ಈ ಲಸಿಕೆ ಹಾಕಿಸುವುದು ಉತ್ತಮ.

ShareSendTweetShare
Previous Post

ಕೋವಿಡ್’ಗಿಂತ ಅಪಾಯಕಾರಿಯಾಗಿ ಕಾಡುವ ಎಲೆಚುಕ್ಕಿ ರೋಗ!

Next Post

ಪಾದಚಾರಿಗೆ ಗುದ್ದಿದ ಕಾರು: ಮಣಿಪಾಲಿಗೆ ಹೋದರೂ ಬದುಕದ ಸೋಮು

Next Post

ಪಾದಚಾರಿಗೆ ಗುದ್ದಿದ ಕಾರು: ಮಣಿಪಾಲಿಗೆ ಹೋದರೂ ಬದುಕದ ಸೋಮು

ಹೆದ್ದಾರಿ ಹೊಂಡಕ್ಕೆ ಹೊಣೆಯಾರು? ಚಾಲಕರ ಪ್ರಶ್ನೆಗೆ ಇಲ್ಲ ಉತ್ತರ

Popular award for popular teacher

ಜನಮೆಚ್ಚಿದ ಶಿಕ್ಷಕನಿಗೆ ಜನಪ್ರಿಯ ಪ್ರಶಸ್ತಿ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.