6
  • Latest

ಮಾನವ ಜನ್ಮ ದೊಡ್ಡದು: ನ್ಯಾ ದಿವ್ಯಾಶ್ರಿ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಾನವ ಜನ್ಮ ದೊಡ್ಡದು: ನ್ಯಾ ದಿವ್ಯಾಶ್ರಿ

AchyutKumar by AchyutKumar
in ಸ್ಥಳೀಯ

ಕಾರವಾರ: `ಮಾನವ ಜನ್ಮ ದೊಡ್ಡದು. ಅದನ್ನು ಹಾನಿ ಮಾಡಬೇಡಿ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಎಂ ಹೇಳಿದರು.

ಕ್ರಿಮ್ಸ್ ವಿಜ್ಞಾನ ಸಂಸ್ಥೆಯಲ್ಲಿ ನಡೆದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

`ಭಗವಂತ ಯಾರನ್ನು ಸುಮ್ಮನೆ ಸೃಷ್ಠಿಸುವುದಿಲ್ಲ. ನಾವು ಭೂಮಿ ಮೇಲೆ ಜನಿಸಿದ್ದೇವೆ ಎಂದರೆ ಅದಕ್ಕೆ ಒಂದು ದ್ಯೇಯ ಮತ್ತು ಕಾರಣವಿರುತ್ತದೆ. ಬೇರೆ ಯಾವುದೇ ಜೀವಿಗೆ ಸಿಗದಿರುವ ಸವಲತ್ತು ಮನುಷ್ಯನಿಗೆ ಸಿಕ್ಕಿದೆ ಅದರ ಉದ್ದೇಶವನ್ನು ಅರಿಯಾದೆ ಆತ್ಮಹತ್ಯೆಯಂಥ ತಪ್ಪುಗಳನ್ನು ಮಾಡುತ್ತಿದ್ದೇವೆ’ ಎಂದವರು ಹೇಳಿದರು.

ಕಸ್ತೂರಿ ರಂಗನ್ ವರದಿ: ಜನಪ್ರತಿನಿಧಿಗಳೇ.. ಹೋರಾಟಗಾರರ ಮನವಿ ಆಲಿಸಿ

ಶಿರಸಿ: `ಕಸ್ತೂರಿ ರಂಗನ್ ವರದಿಗೆ ಕೇಂದ್ರ ಸರ್ಕಾರಕ್ಕೆ ಅಂತಿಮ ಅಭಿಪ್ರಾಯ ಸಲ್ಲಿಸುವ ಹಿನ್ನಲೆಯಲ್ಲಿ ಜನಪ್ರತಿನಿಧಿಗಳು ಅಭಿಪ್ರಾಯ ಸಲ್ಲಿಸುವ ಮುನ್ನ ಹೋರಾಟಗಾರರ ಮನವಿಯನ್ನು ಆಲಿಸಬೇಕು. ಭೌತಿಕ ಸರ್ವೇ ಪಡೆಯದೇ ರಾಜ್ಯ ಸರ್ಕಾರ ಈ ವರದಿ ಒಪ್ಪಬಾರದು’ ಎಂದು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

`ವಿವಿಧ ಯೋಜನೆಯಡಿಯಲ್ಲಿ ಈಗಾಗಲೇ ಘೋಷಿಸಿದ 16.114 ಚದರ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶವನ್ನು ಪುನಃ ಕಸ್ತೂರಿರಂಗನ್ ವರದಿಯಲ್ಲಿ ಮಿತಿಗೊಳಿಸುವ ಅಭಿಪ್ರಾಯ ಸಮಂಜಸವಲ್ಲ’ ಎಂದವರು ಹೇಳಿದ್ದಾರೆ. `ಕರ್ನಾಟಕದಲ್ಲಿ ಅಭಯಾರಣ್ಯ ರಾಷ್ಟೀಯ ಉದ್ಯಾನವನ, ಹುಲಿ ಸಂರಕ್ಷಣಾ ಯೋಜನೆ ಮುಂತಾದ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ 16,114 ಚದರ.ಕಿ.ಮೀ ವ್ಯಾಪ್ತಿಯಲ್ಲಿ ಸೂಕ್ಷ್ಮ ಪ್ರದೇಶಗಳಿದೆ. ಈಗಾಗಲೇ ಘೋಷಿಸಿದ ಈ ಕ್ಷೇತ್ರಕ್ಕೆ ಪುನ: ಕಸ್ತೂರಿ ರಂಗನ್ ವರದಿ ಘೋಷಿಸುವ ಅಗತ್ಯವಿಲ್ಲ’ ಎಂದವರು ಹೇಳಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯಲ್ಲಿ ಶರಾವತಿ ಅಭಯಾರಣ್ಯ, ಕಾಳಿ- ಹುಲಿ ಸಂರಕ್ಷಣಾ, ದಾಂಡೇಲಿ ವನ್ಯ ಜೀವಿ ತಾಣ, ಅಣಶಿ ರಾಷ್ಟೀಯ ಉದ್ಯಾನವನ ಪರಿಸರ ಸೂಕ್ಷ್ಮ ಸಂರಕ್ಷಿತ ಪ್ರದೇಶವೆಂದು ಘೋಷಿಸಲ್ಟಟ್ಟಿದೆ’ ಎಂದವರು ಮಾಹಿತಿ ನೀಡಿದರು

ಗುರುಶ್ರೇಷ್ಠ ಪ್ರಶಸ್ತಿಗೆ ಹಿರೇಗುತ್ತಿ ಶಿಕ್ಷಕ

ಕುಮಟಾ: ಹಿರೇಗುತ್ತಿಯ ಮಹಾತ್ಮಾಗಾಂಧಿ ವಿದ್ಯಾವರ್ಧಕ ಸಂಘದ ಸೆಕೆಂಡರಿ ಹೈಸ್ಕೂಲ್‌ನಲ್ಲಿ 17 ವರ್ಷದಿಂದ ಕನ್ನಡ ಮತ್ತು ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಎನ್ ರಾಮು ಅವರಿಗೆ ರಾಜ್ಯ ಮಟ್ಟದ ಗುರುಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸುಂಕಸಾಳ ಬಳಿ ಲಾರಿ ಪಲ್ಟಿ: ಕ್ಲಿನರ್’ಗೆ ಗಾಯ

ಅಂಕೋಲಾ: ಯಲ್ಲಾಪುರದಿಂದ ಅಂಕೋಲಾ ಕಡೆ ಹೋಗುತ್ತಿದ್ದ ಲಾರಿ ಸುಂಕಸಾಳದ ಬಳಿ ಪಲ್ಟಿಯಾಗಿದ್ದರಿಂದ ಲಾರಿ ಚಾಲಕನಿಗೆ ಗಾಯವಾಗಿದೆ.

ಅರಬೈಲ್ ಗಣೇಶ ಮುನಿಯಪ್ಪಾ ಸಿದ್ದಿ ಅಪಘಾತವಾದ ಲಾರಿಯಲ್ಲಿ ಚಾಲಕನಾಗಿದ್ದ. ಗಾಯಗೊಂಡ ಈತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸೆ 18ರ ರಾತ್ರಿ ಕಲಘಟಗಿಯ ಶಿವಾನಂದ ಚಿಕ್ಕಮ್ಮನವರ್ ಎಂಬಾತ ಈ ಲಾರಿ ಓಡಿಸುತ್ತಿದ್ದ. ವಾಹನವನ್ನು ಅತಿಯಾದ ವೇಗದಿಂದ ಓಡಿಸಿದ್ದು ಅಪಘಾತಕ್ಕೆ ಕಾರಣ.

ರಾಜ್ಯಮಟ್ಟದ ಸ್ಪರ್ಧೆಗೆ ಓಂಕಾರ

ಕುಮಟಾ: ಪಟ್ಟಣದ ನೆಲ್ಲಿಕೇರಿಯಲ್ಲಿರುವ ಪಬ್ಲಿಕ್ ಸ್ಕೂಲ್’ನಲ್ಲಿ ನಡೆದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸರಸ್ವತಿ ವಿದ್ಯಾಕೇಂದ್ರದ 6ನೇ ತರಗತಿಯ ವಿದ್ಯಾರ್ಥಿ ಓಂಕಾರ ಭಾಗ್ವತ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕೆ ಎಸ್ ಹೆಗಡೆ ಆಸ್ಪತ್ರೆಯವರಿಂದ ಉಚಿತ ಶಿಬಿರ

ಯಲ್ಲಾಪುರ: ದರಳಕಟ್ಟೆಯ ಕೆ ಎಸ್ ಹೆಗಡೆ ಆಸ್ಪತ್ರೆಯ ವೈದ್ಯರು ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆ ಆವಾರದಲ್ಲಿ ಸೆ 22ರಂದು ಆರೋಗ್ಯ ಶಿಬಿರ ನಡೆಸಲಿದ್ದಾರೆ.

ಅಂದು ಬೆಳಗ್ಗೆ 8.30ರಿಂದ ಮಧ್ಯಾಹ್ನ 1ಗಂಟೆಯವರೆಗೆ ಈ ಶಿಬಿರ ನಡೆಯಲಿದೆ. ಕದಂಬ ಪೌಂಡೇಶನ್ ಸಹಯೋಗದಲ್ಲಿ ಉಚಿತ ತಪಾಸಣೆ ನಡೆಯಲಿದ್ದು, ಎಲುವು ಮತ್ತು ಕೀಲು ವೈದ್ಯ ಡಾ ವಿಕ್ರಮ ಶೆಟ್ಟಿ, ಡಾ ವಿನಯಕುಮಾರ ಸಿ, ಡಾ ಭಾರ್ಗವ ಚಕ್ರವರ್ತಿ ಭಾಗವಹಿಸಲಿದ್ದಾರೆ. ಜೊತೆಗೆ ಜನರಲ್ ವಿಭಾಗದ ಡಾ ಅಭಿಜಿತ್ ಶೆಟ್ಟಿ ಶಿಬಿರದಲ್ಲಿ ಭಾಗವಹಿಸುವರು.

ಕಾರವಾರ – ಹೊನ್ನಾವರದಲ್ಲಿ ವಿದ್ಯುತ್ ಅದಾಲತ್

ಕಾರವಾರ: ಕಾರವಾರ ಕಾರ್ಯ ಮತ್ತು ಪಾಲನಾ ಉಪ-ವಿಭಾಗ ಕಚೇರಿಯಲ್ಲಿ ಸೆ 21ರಂದು ಮಧ್ಯಾಹ್ನ 3.30ರಿಂದ ಸಂಜೆ 5.30 ಗಂಟೆಯವರೆಗೆ ಗ್ರಾಹಕರ ಸಂವಾದ ಸಭೆ ನಡೆಯಲಿದೆ. ಗ್ರಾಹಕರು ತಮ್ಮ ವಿದ್ಯುತ್ ಸಂಬAಧಿತ ಸಮಸ್ಯೆಗಳ ಬಗ್ಗೆ ಅಲ್ಲಿ ದೂರು ನೀಡಬಹುದು.
ಹೊನ್ನಾವರ ಉಪ-ವಿಭಾಗ ವ್ಯಾಪ್ತಿಯಲ್ಲಿ ಸಹ ಸೆ 21ರಂದು ಬೆಳಗ್ಗೆ 11 ಗಂಟೆಗೆ ವಿದ್ಯುತ್ ಅದಾಲತ್ ಹಾಗೂ ಮಧ್ಯಾಹ್ನ 3.30 ಗಂಟೆಗೆ ಗ್ರಾಹಕರ ಸಂವಾದ ಸಭೆ ನಡೆಯಲಿದೆ.

ಕಟ್ಟಡ ಕಾರ್ಮಿಕರಿಗೆ ಸಿಗಲಿದೆ ಸುರಕ್ಷಾ ಕಿಟ್

ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಿಸಲು ಕಾರ್ಮಿಕ ಇಲಾಖೆ ಮುಂದಾಗಿದ್ದು ಗೌಂಡಿ ಕೆಲಸ ಮಾಡುವವರು ಇದನ್ನು ಪಡೆಯಲು ಅರ್ಹರು.

2020ನೇ ಇಸ್ವಿಗಿಂತ ಮೊದಲು ನೋಂದಣಿಯಾದ ಮತ್ತು ಪ್ರಸ್ತುತ ಅವಧಿಯವರೆಗೆ ನವೀಕರಣಗೊಂಡಿರುವ ಅರ್ಹ ಗೌಂಡಿ ಅಥವಾ ಮೇಸನ್ ಕೆಲಸದದವರು ತಮ್ಮ ಗುರುತು ಚೀಟಿಗಳೊಂದಿಗೆ ಅರ್ಜಿ ಸಲ್ಲಿಬಹುದು. ಮಾಹಿತಿಗೆ ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಿ.

 

 

 

ShareSendTweetShare
Previous Post

ನಡುರಾತ್ರಿವರೆಗೂ ಇಸ್ಪಿಟ್ ಆಟ: 11 ಎಲೆಮಾನವರ ಮೇಲೆ ಪೊಲೀಸರ ಬಾಣ!

Next Post

ಹುಡುಗಿ ಚುಡಾಯಿಸಿ ಸಿಕ್ಕಿಬಿದ್ದ ಬ್ಯಾಟರಿ ಕಳ್ಳರು!

Next Post

ಹುಡುಗಿ ಚುಡಾಯಿಸಿ ಸಿಕ್ಕಿಬಿದ್ದ ಬ್ಯಾಟರಿ ಕಳ್ಳರು!

ಜನ ವಿರೋಧದ ನಡುವೆಯೂ ಕಸ್ತೂರಿ ರಂಗನ್ ಜಾರಿ!

ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಆಗುವ ಪ್ರಯೋಜನಗಳೇನು?

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.