ಗಂಗಾವಳಿ ನದಿ ಆಳದಲ್ಲಿ ತಿಂಗಳ ಹಿಂದೆಯೇ ಕೇರಳದ ಅರ್ಜುನನ ಲಾರಿಯನ್ನು ಪತ್ತೆ ಮಾಡಿದ್ದ ಮುಳುಗು ತಜ್ಞ ಈಶ್ವರ ಮಲ್ಪೆ ಇದೀಗ ಎರಡು ಟೈಯರನ್ನು ಮೇಲೆತ್ತುವಲ್ಲಿ ಸಹಕರಿಸಿದ್ದಾರೆ. ಆದರೆ, ಇದು ಅರ್ಜುನನ ಲಾರಿಯದ್ದೇ ಎಂದು ಖಚಿತವಾಗಿಲ್ಲ. ನದಿ ಪಾಲಾಗಿದ್ದ ಗ್ಯಾಸ್ ಟ್ಯಾಂಕರಿನ ಟೈಯರ್ ಸಹ ಆಗಿರುವ ಶಂಕೆಯಿದೆ.
ಇದರೊಂದಿಗೆ ವಾಹನದ ಕೆಲ ಬಿಡಿಭಾಗಗಳು ಸಹ ನದಿಯಿಂದ ಹೊರ ಬಂದಿದೆ. ನದಿಯ ಒಳಗೆ ಮೊಬೈಲ್ ಕ್ಯಾಮರಾ ಹಿಡಿದು ಸಂಚರಿಸಿದ ಈಶ್ವರ ಮಲ್ಪೆ ನದಿ ಆಳದಲ್ಲಿರುವುದನ್ನು ಲೈವ್ ಮೂಲಕ ಕಾಣಿಸಿದ್ದಾರೆ. ನದಿ ಆಳದಲ್ಲಿ ಕಂಡ ವಾಹನದ ಬಿಡಿಭಾಗ ಹಾಗೂ ಟೈಯರನ್ನು ಹಗ್ಗ ಕಟ್ಟಿ ಎಳೆದು ಮೇಲೆತ್ತಲಾಗಿದೆ.
ಗಂಗಾವಳಿ ನದಿ ಆಳದಿಂದ ವಾಹನದ ಬಿಡಿಭಾಗಗಳನ್ನು ಮೇಲೆತ್ತಿದ ವಿಡಿಯೋ ಇಲ್ಲಿ ನೋಡಿ..



