ಯಲ್ಲಾಪುರ: ಬಿಸಗೋಡು ರಸ್ತೆಯಲ್ಲಿನ ಬೀಡಾಡಿ ದನಕ್ಕೆ ಬೆದರಿದ ತಳ್ಳಿಗೇರಿಯ ಮಶಾಕಸಾಬ್ ಕಾನಳ್ಳಿ ತನ್ನ ಪತ್ನಿ ತಾರಾಬಿ ಜೊತೆ ಸ್ಕೂಟಿಯಿಂದ ಬಿದ್ದು ಗಾಯಗೊಂಡಿದ್ದಾನೆ. ಬಿದ್ದ ರಭಸಕ್ಕೆ ಬೈಕ್ ಜಖಂ ಆಗಿದೆ.
ಸೆ 9ರಂದು ಮಶಾಕಸಾಬ್ ಬಿಸಗೋಡು ರಸ್ತೆಯಲ್ಲಿ ವೇಗವಾಗಿ ತನ್ನ ಟಿವಿಎಸ್ ಸ್ಕೂಟಿ ಓಡಿಸುತ್ತಿದ್ದ. ಆತನ ಪತ್ನಿ ಸಹ ಸ್ಕೂಟಿಯ ಹಿಂದೆ ಕೂತಿದ್ದಳು. ಹಿಂದೂ ರುದ್ರಭೂಮಿ ಬಳಿ ಆತನಿಗೆ ಅಡ್ಡಲಾಗಿ ದನ ಬಂದಿದ್ದು, ಆಗ ಆತನ ವಾಹನ ನಿಯಂತ್ರಣ ತಪ್ಪಿತು. ಹದಗೆಟ್ಟ ಡಾಂಬರ್ ರಸ್ತೆ ಮೇಲೆ ಆತ ಬಿದ್ದಿದ್ದರಿಂದ ಪೆಟ್ಟಾಗಿದ್ದು, ಆತನ ಪತ್ನಿ ಕಾಲಿನ ಮಂಡಿ ಹಾಗೂ ಮುಖಕ್ಕೆ ಗಾಯ ಮಾಡಿಕೊಂಡಿದ್ದಾರೆ.