ಕುಮಟಾ: ಪುರಸಭೆ ಅಧಿಕಾರಿಗಳ ಬೇಜವಬ್ದಾರಿಯಿಂದ ವನ್ನಳ್ಳಿ ಹೆಡ್ ಬಂದರಿನಲ್ಲಿರುವ ಮಕ್ಕಳ ಆಟಿಕೆಗಳು ಹಾಳಾಗಿದೆ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಮುಖ್ಯಮಂತ್ರಿಗೆ ದೂರು ಸಲ್ಲಿಸಿದ್ದಾರೆ.
`ಕಳೆದ 1 ವರ್ಷದಿಂದ ಮಕ್ಕಳ ಆಟಿಕೆಗಳ ನಿರ್ವಹಣೆ ಸರಿಯಾಗಿಲ್ಲ. ಈ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ವರದಿಯಾದರೂ ಪುರಸಭೆ ಅಧಿಕಾರಿಗಳು ಗಮನಿಸಿಲ್ಲ. ಸಾರ್ವಜನಿಕ ತೆರಿಗೆ ಹಣದಿಂದ ಸಂಬಳ ಪಡೆಯುವ ಅಧಿಕಾರಿಗಳು ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಕೇಂದ್ರದ ಆಗ್ನೇಲ್ ರೋಡ್ರಿಗ್ಸ್ ದೂರಿದ್ದಾರೆ.
ಪ್ರವಾಸೋದ್ಯಮ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎಸ್ ಎಸ್ ಬೋಸ್ ರಾಜು ಅವರಿಗೂ ಪತ್ರ ಬರೆದಿರುವ ಅವರು `ಲಕ್ಷಾಂತರ ರೂ ಹಣ ಬಿಡುಗಡೆ ಆದರೂ ಮಕ್ಕಳ ಆಟಿಕೆಗಳು ಸರಿಯಾಗಿಲ್ಲ. ಮಕ್ಕಳ ಹಕ್ಕುಗಳನ್ನು ಸರ್ಕಾರ ಕಿತ್ತುಕೊಂಡಿದೆ’ ಎಂದು ಆರೋಪಿಸಿದ್ದಾರೆ. ನೊಂದಾಯಿತ ಅಂಚೆ ಮೂಲಕ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಕಾರ್ಯಕರ್ತ ಸುಧಾಕರ ನಾಯ್ಕ ದೂರಿನ ಪತ್ರವನ್ನು ರವಾನಿಸಿದ್ದಾರೆ. ಲಕ್ಷಿö್ಮÃ ನಾಯ್ಕ ಈ ವೇಳೆ ಇದ್ದರು.