6
  • Latest

ಅವ ನಾನಲ್ಲ.. ಅವ ನಾನಲ್ಲ.. ದಾಖಲೆ ಕಳ್ಳತನಕ್ಕೆ ಅಧಿಕಾರಿ ಕುಮ್ಮಕ್ಕು!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಅವ ನಾನಲ್ಲ.. ಅವ ನಾನಲ್ಲ.. ದಾಖಲೆ ಕಳ್ಳತನಕ್ಕೆ ಅಧಿಕಾರಿ ಕುಮ್ಮಕ್ಕು!

AchyutKumar by AchyutKumar
in ವಿಡಿಯೋ

ಯಲ್ಲಾಪುರ: ಪಟ್ಟಣ ಪಂಚಾಯತ ದಾಖಲೆ ಕಳ್ಳತನವಾದ ವಿಷಯದ ಬಗ್ಗೆ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದಿದ್ದು, `ದಾಖಲೆ ಕಳವು ವಿಚಾರದಲ್ಲಿ ಅಧಿಕಾರಿಗಳ ಕುಮ್ಮಕ್ಕು ಇದೆ’ ಎಂದು ಪ ಪಂ ಸದಸ್ಯ ಸೈಯ್ಯದ್ ಕೈಸರ್ ಆರೋಪಿಸಿದರು. ತಕ್ಷಣ ಇದನ್ನು ನಿರಾಕರಿಸಿದ ಪ ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ `ಅಧಿಕಾರಿಗಳ ವಿರುದ್ಧ ಸುಳ್ಳು ಸುದ್ದಿ ಹಬ್ಬಿದೆ’ ಎಂದು ಸ್ಪಷ್ಠನೆ ನೀಡಿದರು.

ಯಲ್ಲಾಪುರ ಪಟ್ಟಣ ಪಂಚಾಯತದಲ್ಲಿನ ದಾಖಲೆಗಳು ಕಳ್ಳತನವಾದ ಬಗ್ಗೆ ಕೆಲ ದಿನದ ಹಿಂದೆ ಪ ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ ಪೊಲೀಸ್ ದೂರು ನೀಡಿದ್ದರು. ಈ ಪ್ರಕರಣದ ಕುರಿತು ಮಾತನಾಡಿದ ಸದಸ್ಯ ಸೈಯದ್ ಕೈಸರ್ `ಅಧಿಕಾರಿಗಳು ಸೂಚಿಸಿದ ಕಾರಣ ಇಬ್ಬರು ಕಚೇರಿಗೆ ಬಂದು ದಾಖಲೆ ಒಯ್ದಿದ್ದಾರೆ. ನಂತರ ಮರಳಿ ಕೊಡುವಂತೆ ತಿಳಿಸಿದ ಕಾರಣ ಅದನ್ನು ಮರಳಿಸಿದ್ದಾರೆ. ಹೀಗಿದ್ದರೂ ಅವರ ವಿರುದ್ಧ ದಾಖಲೆ ಕದ್ದ ಆರೋಪದ ಅಡಿ ಪೊಲೀಸ್ ದೂರು ದಾಖಲಿಸಲಾಗಿದೆ’ ಎಂದು ದೂರಿದರು. `ಆರೋಪಿ ಸ್ಥಾನದಲ್ಲಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲಾದ ಹಿನ್ನಲೆ ಅವರು ಮಾನಸಿಕ ತೊಂದರೆ ಅನುಭವಿಸುತ್ತಿದ್ದಾರೆ. ಅವರ ಮಕ್ಕಳು ಶಾಲೆಗೆ ಹೋದಾಗ ಅಲ್ಲಿಯೂ ಮಕ್ಕಳ ಬಳಿ ಈ ಬಗ್ಗೆ ಜನ ಪ್ರಶ್ನಿಸುತ್ತಿದ್ದಾರೆ. ಈ ರೀತಿಯ ವರ್ತನೆ ಸರಿಯಲ್ಲ’ ಎಂದು ಆಕ್ಷೇಪಿಸಿದರು.

ಇದಕ್ಕೆ ಸ್ಪಷ್ಠೀಕರಣ ನೀಡಿದ ಪ ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ `ಸಾರ್ವಜನಿಕರು ಕಚೇರಿಗೆ ನೀಡಿದ ಯಾವುದೇ ದಾಖಲೆಯನ್ನು ಮರಳಿ ಒಯ್ಯಲು ಸಾಧ್ಯವಿಲ್ಲ. ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ದಾಖಲೆ ಕಳ್ಳತನ ನಡೆದ ಬಗ್ಗೆ ದೂರು ನೀಡಲು ಅಧಿಕಾರವಿದ್ದು, ಸಾರ್ವಜನಿಕರ ಜಾಗೃತಿಗಾಗಿ ಈ ಕ್ರಮ ಜರುಗಿಸಲಾಗಿದೆ’ ಎಂದು ಹೇಳಿದರು.

`ಹಲಸ್ಕಂಡ ಭಾಗದ ಪೈಪ್ ಲೈನ್ ಕಾಮಗಾರಿಗೆ ಸಂಬಧಿಸಿ ಪಟ್ಟಣ ಪಂಚಾಯಗೆ ನೀಡಿದ ದಾಖಲೆಗಳು ಸಹ ಕಳ್ಳತನವಾಗಿದೆ. ಆದರೆ, ಆ ಬಗ್ಗೆ ಏಕೆ ಪೊಲೀಸ್ ದೂರು ನೀಡಿಲ್ಲ?’ ಎಂದು ಸದಸ್ಯೆ ಪುಷ್ಪಾ ನಾಯ್ಕ ಪ್ರಶ್ನಿಸಿದರು. `ಪೈಪ್‌ಲೈನ್ ಕಾಮಗಾರಿಯ ದಾಖಲೆ ಕಳ್ಳತನವಾಗಿಲ್ಲ. ಕಚೇರಿಯಲ್ಲಿಯೇ ಅದಲು ಬದಲಾಗಿದ್ದು, ಆ ಕಾಮಗಾರಿಗೆ ಸಂಬ0ಧಿಸಿದ ಬಿಲ್ ಪಾವತಿ ಮಾಡಲಾಗುತ್ತದೆ. ಆತಂಕ ಬೇಡ’ ಎಂದು ಮುಖ್ಯಾಧಿಕಾರಿ ಸುನೀಲ ಗಾವಡೆ ಸಮಜಾಯಿಶಿ ನೀಡಿದರು.
ಪ ಪಂ ಸಿಬ್ಬಂದಿ ಮೇಲೆ ಕೆಲವರು ದಬ್ಬಾಳಿಕೆ ನಡೆಸುತ್ತಿರುವ ಬಗ್ಗೆ ಚರ್ಚೆ ನಡೆದಿದ್ದು, ಸಾರ್ವಜನಿಕ ಕೆಲಸಕ್ಕೆ ಅಡ್ಡಿ ಪಡಿಸಿದವರ ವಿರುದ್ಧವೂ ದೂರು ದಾಖಲಿಸುವುದಾಗಿ ಮುಖ್ಯಾಧಿಕಾರಿ ಎಚ್ಚರಿಸಿದರು.

ದಾಖಲೆ ಕಳ್ಳತನ ವಿಷಯದಲ್ಲಿ ಪ ಪಂ ಸಭೆಯಲ್ಲಿ ನಡೆದ ಚರ್ಚೆಯ ವಿಡಿಯೋ ಇಲ್ಲಿ ನೋಡಿ…

 

ShareSendTweetShare
Previous Post

ಸರಳ ಉಸಿರಾಟಕ್ಕೆ ಸುಲಭ ಸೂತ್ರಗಳು..

Next Post

ಬಿಜೆಪಿಗೆ ಬೇಡವಂತೆ ಅಭಿವೃದ್ಧಿಯ ಹಣ!

Next Post

ಬಿಜೆಪಿಗೆ ಬೇಡವಂತೆ ಅಭಿವೃದ್ಧಿಯ ಹಣ!

ಅಕ್ರಮ ಮದ್ಯ ಮಾರಾಟ ತಡೆದ ಮಹಿಳಾ ಅಧಿಕಾರಿ

ರಿಕ್ಷಾಗೆ ಗುದ್ದಿದ ಬೈಕ್: ಸಹ ಸವಾರನಿಗೆ ಗಾಯ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.