ಊರಿನವರ ಮೌನ.. ಪರ ಪ್ರದೇಶದವರ ಆಕ್ರಂದನ: ಬೆಂಬಿಡದೇ ಕಾಡುತ್ತಿದೆ ಗುಡ್ಡದ ಭೂತ!
ಯಲ್ಲಾಪುರದ ಹುಟಕಮನೆಯಲ್ಲಿನ ಗುಡ್ಡ ಕಟಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. `ಕೆಲವರು ದ್ವೇಷ ಮನೋಭಾವನೆಯಿಂದ ತನ್ನ ಕೃಷಿ ಕಾಯಕಕ್ಕೆ ತೊಂದರೆ ಮಾಡುತ್ತಿದ್ದಾರೆ’ ಎಂದು ಅಲ್ಲಿ ಭೂಮಿ ಖರೀದಿಸಿದ ದೀಪಕ ನಾಯ್ಕ ಇದೀಗ ಹೇಳಿಕೆ ನೀಡಿದ್ದಾರೆ. `ಹುಟಕಮನೆಯಲ್ಲಿ ಅವೈಜ್ಞಾನಿಕವಾಗಿ ಗುಡ್ಡ ಕುಸಿತ ನಡೆಸಿದ್ದರಿಂದ…
ಬಿಜೆಪಿ ನೋಟಿಸಿಗೆ ಉತ್ತರಿಸಿದ ಶಾಸಕ: ಪತ್ರದ ವಿಷಯ ಇನ್ನೂ ರಹಸ್ಯ!
ಬಿಜೆಪಿ ಕೇಂದ್ರ ಸಮಿತಿಯಿಂದ ನೋಟಿಸ್ ಬಂದಿರುವುದನ್ನು ಒಪ್ಪಿಕೊಂಡ ಯಲ್ಲಾಪುರ ವಿಧಾನಸಭಾ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ `ಆ ನೋಟಿಸಿಗೆ ತಕ್ಕ ಉತ್ತರ ಕೊಟ್ಟಿದ್ದೇನೆ’ ಎಂದು ಹೇಳಿದ್ದಾರೆ. ಆದರೆ, ಆ ಉತ್ತರ ಏನು? ಎಂಬ ರಹಸ್ಯವನ್ನು ಬಿಟ್ಟುಕೊಟ್ಟಿಲ್ಲ. ಶಿರಸಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ…
ಶಿರಸಿಯಲ್ಲಿ ಇನ್ನೂ ಜೀವಂತ.. ಈ ವರದಕ್ಷಿಣೆ ಭೂತ!
ವರದಕ್ಷಿಣೆಗಾಗಿ ಪೀಡಿಸಿದ ಪತಿಯ ವಿರುದ್ಧ ಮಹಿಳೆ ಸಿಡಿದೆದ್ದಿದ್ದಾರೆ. `ತನಗೆ ನ್ಯಾಯ ಕೊಡಿಸಿ’ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಶಿರಸಿ ತಾಲೂಕಿನ ಬಸಳೆಕೊಪ್ಪ ಗ್ರಾಮದ ಹಿತ್ಲಗದ್ದೆಯ ಪವಿತ್ರ ನಾಯ್ಕ ಅವರು ತಮ್ಮ ಪತಿ ಉದಯ ನಾಯ್ಕ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ.…
ಮಕ್ಕಳಾಗದ ಕೊರಗು: ಸರಾಯಿ ಜೊತೆ ಟಿಮೇಟ್ ತಿಂದ HIV ಪೀಡಿತ ಸಾವು!
ಬನವಾಸಿಯ ಕಾಳಸ್ವಾಮಿ ಮಾಗರಯ್ಯ (ಹೆಸರು ಬದಲಿಸಿದೆ) ಎಂಬಾತರು ಸರಾಯಿ ಜೊತೆ ಟಿಮೆಟ್ ಸೇವಿಸಿ ಸಾವನಪ್ಪಿದ್ದಾರೆ. ಶಿರಸಿ ತಾಲೂಕಿನ ಬನವಾಸಿ ಬಳಿಯ ವಡಗೇರಿಯಲ್ಲಿ ಕಾಳಸ್ವಾಮಿ ಮಾಗರಯ್ಯ (38) ಅವರು ವಾಸವಾಗಿದ್ದರು. ಎಚ್‌ಐವಿ ಸೇರಿ ವಿವಿಧ ರೋಗಗಳಿಂದ ಅವರು ಬಳಲುತ್ತಿದ್ದರು. ವಾಸಿಯಾಗದ ರೋಗ ಬಂದ…
ಪ್ರೆಂಡ್ಸ ಕ್ಲಬ್ ಹೆಸರಿನಲ್ಲಿ ಜೂಜಾಟ: 17 ಎಲೆಮಾನವರಿಗೆ ಸೆರೆಮನೆವಾಸ!
ಹೊನ್ನಾವರದ ಇಸ್ಪಿಟ್ ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು ಅಲ್ಲಿದ್ದ ಟೇಬಲ್-ಖುರ್ಚಿಗಳನ್ನು ಜಪ್ತು ಮಾಡಿದ್ದಾರೆ. ಜೊತೆಗೆ ಅಂದರ್ ಬಾಹರ್ ಆಡುತ್ತಿದ್ದ 17 ಜನರನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಹೊನ್ನಾವರದ ಕಂತಾಲಕರಕೇರಿಯಲ್ಲಿರುವ ಹೆಗಡೆ ಕಾಂಪ್ಲೆಕ್ಸಿನಲ್ಲಿ ಪ್ರೆಂಡ್ಸ ಕ್ಲಬ್ ಎಂಬ…
ಬ್ಯಾಂಕ್ ಮ್ಯಾನೇಜರ್’ಗೆ ಮಕ್ಮಲ್ ಟೋಪಿ!
ಕಾರವಾರದ IDFC ಬ್ಯಾಂಕ್ ಮ್ಯಾನೇಜರ್ ನಿತೀನ್ ರೇವಣಕರ್ ಅತಿಯಾದ ಹಣದ ವ್ಯಾಮೋಹಕ್ಕೆ ಒಳಗಾಗಿ 14 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ. ಸೈಬರ್ ಕ್ರೆö ಜಾಲಕ್ಕೆ ಸಿಲುಕಿದ ಅವರು ತಮ್ಮ ಸ್ನೇಹಿತರ ಹಣವನ್ನು ಸಹ ನಾಪತ್ತೆ ಮಾಡಿದ್ದಾರೆ! ಕಾರವಾರದ ಪದ್ಮನಾಭನಗರ ಗುರುಮಠದ ಬಳಿ…
ಕೋಳಿ ಅಂಕ: ಹುಂಜದ ಜೊತೆ ಕಿಡಿಗೇಡಿಗಳು ಪರಾರಿ!
ಕುಮಟಾದ ಎಣ್ಣೆಮುಡಿಯಲ್ಲಿ ಕೋಳಿ ಅಂಕ ನಡೆಯುತ್ತಿದ್ದು, ಪೊಲೀಸರನ್ನು ಕಂಡ ಜೂಜುಕೋರರು ಕೋಳಿಯ ಜೊತೆ ಓಡಿ ಪರಾರಿಯಾಗಿದ್ದಾರೆ. ಅದಾಗಿಯೂ ಇಬ್ಬರನ್ನು ಹಿಡಿದ ಪೊಲೀಸರು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಅಂಕೋಲಾ ತಗಡಗೇರಿಯ ಜೋಗೇಶ ಗುನಗಾ ಹಾಗೂ ಕುಮಟಾ ಹಿರೆಗುತ್ತಿಯ ರಾಮದೇವ ಹಳ್ಳೇರ…
ಅರಣ್ಯಾಧಿಕಾರಿ ಜೀಪ್ ಪಲ್ಟಿ: ಚಾಲಕನಿಗೆ ಪೆಟ್ಟು!
ಹೊನ್ನಾವರದ ಗೇರುಸೊಪ್ಪ ವಲಯ ಅರಣ್ಯಾಧಿಕಾರಿ ಕಾರ್ತಿಕ್ ಕಂಬಳಿ ಸಂಚರಿಸುತ್ತಿದ್ದ ಬುಲೆರೋ ವಾಹನ ಪಲ್ಟಿಯಾಗಿದೆ. ಬುಲೆರೋ ಓಡಿಸುತ್ತಿದ್ದ ಶಂಕರ್ ನಾಯ್ಕ ಅವರಿಗೆ ಪೆಟ್ಟಾಗಿದ್ದು, ಸದ್ಯ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಬ್ಬಳ್ಳಿಯ ಆಳಗುಂಡಗಿಯ ಕಾರ್ತಿಕ್ ಕಂಬಳಿ ಅವರು ಕಳೆದ 9…
ಶಿರಸಿ | ನೂತನ ಬಸ್ ನಿಲ್ದಾಣಕ್ಕೆ ಉದ್ಘಾಟನೆ ಭಾಗ್ಯ: ಕೋಟಿ ಲೆಕ್ಕಾಚಾರದ ಭರವಸೆ ನೀಡಿದ ಸಾರಿಗೆ ಸಚಿವ
ಕಳೆದ ನಾಲ್ಕುವರೆ ತಿಂಗಳಿನಿoದ ಉದ್ಘಾಟನೆಗೆ ಕಾದಿದ್ದ ಶಿರಸಿಯ ನೂತನ ಬಸ್ ನಿಲ್ದಾಣ ಶುಕ್ರವಾರದಿಂದ ಸಾರ್ವಜನಿಕ ಬಳಕೆಗೆ ಲಭ್ಯವಾಗಿದೆ. ಸಾರಿಗೆ ಸಚಿವ ರಾಮಲಿಂಗರೆಡ್ಡಿ ಈ ಬಸ್ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. `ಈ ವೇಳೆ 2 ಸಾವಿರ ಹೊಸ ಬಸ್ ಖರೀದಿಗಾಗಿ ಸರ್ಕಾರ ಅನುದಾನ ನೀಡಿದೆ’…
ನಿಂತಿದ್ದ ಲಾರಿಗೆ ಪಿಕಪ್ ಡಿಕ್ಕಿ: ಸಾವು
ಜೊಯಿಡಾದ ತಿನೈಘಾಟ್ ಬಳಿ ನಿಂತಿದ್ದ ಲಾರಿಗೆ ಪಿಕಪ್ ಡಿಕ್ಕಿಯಾಗಿದೆ. ಪರಿಣಾಮ ಪಿಕಪ್ ವಾಹನದಲ್ಲಿದ್ದ ರಾಮ ಕೊಡತಿ ಎಂಬಾತರು ಸಾವನಪ್ಪಿದ್ದಾರೆ. ಬಿಹಾರದ ಗೋಪಾಲ ಸಿಂಗ್ ಎಂಬಾತರು ಬೆಳಗಾವಿ ಪಣಜಿ ಹೆದ್ದಾರಿಯಲ್ಲಿ ತಮ್ಮ ಲಾರಿ ಓಡಿಸುತ್ತಿದ್ದರು. ಮಾರ್ಚ 27ರ ನಸುಕಿನ 3.15ಕ್ಕೆ ತಿನೈಘಾಟಿನಲ್ಲಿ ಅವರು…













