ವೃಥಾ ಆರೋಪ ಮಾಡುವ ಎಂ.ಎಲ್.ಸಿ ಯಾರು? ಹೆಸರೇ ಹೇಳದೇ ಅಧ್ಯಕ್ಷರು ಪ್ರತಿಕ್ರಿಯೆ ನೀಡಿದ್ದು ಯಾರಿಗೆ?
ಯಲ್ಲಾಪುರ ತಾ.ಪಂ ಸಭಾಭವನದಲ್ಲಿ ನಡೆದ ತಾಲೂಕು ಗ್ಯಾರಂಟಿ ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ಬೆಲ್ತರಗದ್ದೆಯ ಬುಡಕಟ್ಟು ಸಮುದಾಯದ ಮಹಿಳೆ ಸಾವಿನ ವಿಚಾರ ಪ್ರತಿಧ್ವನಿಸಿತು. ಹಿಂದೊಮ್ಮೆ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಎಂ.ಎಲ್.ಸಿ ವಿಷಯವನ್ನು ಅಧ್ಯಕ್ಷ ಉಲ್ಲಾಸ ಶಾನಭಾಗ ಮತ್ತೆ ಪ್ರಸ್ತಾಪಿಸಿದರು. ಎಂ.ಎಲ್.ಸಿ ಅವರು…
ಬೆಂಗಳೂರಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಅಧ್ಯಯನ ಸಮಿತಿಯ ಸಭೆ
ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಅಧ್ಯಯನ ಸಮಿತಿಯ ಸಭೆಯು ಬೆಂಗಳೂರಿನ ವಿಧಾನ ಸೌಧದಲ್ಲಿ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಚಿವರು ಸಮಿತಿಯ ಅಂತಿಮ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಕೆಲವು ಸಲಹೆಗಳನ್ನು ನೀಡಿದರು. ಜಿಲ್ಲಾ ಸಮಿತಿಯ…
ತಾಲೂಕಾ ಮಟ್ಟದ ಕ್ರೀಡಾಕೂಟ: ಬಿಸಗೋಡ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಧನೆ
ಯಲ್ಲಾಪುರ ಪಟ್ಟಣದ ಕಾಳಮ್ಮಾನಗರ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ತಾಲೂಕಿನ ಬಿಸಗೋಡ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಬಾಲಕಿಯರ ವಿಭಾಗದ ಬಾಲ್ ಬ್ಯಾಡ್ಮಿಂಟನ್ ನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ಬಾಲ್ ಬ್ಯಾಡ್ಮಿಂಟನ್…
ಹಾವು ಕಚ್ಚಿ ಅರ್ಚಕ ಸಾವು
ಹಾವು ಕಚ್ಚಿ ಅರ್ಚಕ ಮೃತಪಟ್ಟ ಘಟನೆ ಯಲ್ಲಾಪುರ ತಾಲೂಕಿನ ಸಹಸ್ರಳ್ಳಿ ಸಮೀಪದ ಮೂಡೆಬೈಲಿನಲ್ಲಿ ನಡೆದಿದೆ. ಮೂಡೆಬೈಲಿನ ಶಂಕರ ರಾಮಕೃಷ್ಣ ಭಟ್ಟ (67) ಮೃತ ವ್ಯಕ್ತಿ. ಇವರು ತೋಟದಲ್ಲಿ ಕೆಲಸ ಮಾಡುತ್ತಿರುವ ವೇಳೆ ವಿಷಕಾರಿ ಹಾವು ಕಚ್ಚಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ…
ಮಾವಿನಮನೆ ಸಹಕಾರಿ ಸಂಘಕ್ಕೆ 52.28 ಲಕ್ಷ ರೂ ಲಾಭ
ಮಾವಿನಮನೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ಕಳೆದ ಸಾಲಿನಲ್ಲಿ 52.28 ಲಕ್ಷ ರೂ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುಬ್ರಾಯ ಕೃಷ್ಣ ಬೋಳ್ಮನ ಹೇಳಿದರು. ಅವರು ಯಲ್ಲಾಪುರ ತಾಲೂಕಿನ ಮಲವಳ್ಳಿಯ ಶ್ರೀ ರಾಮಲಿಂಗೇಶ್ವರ ಸಭಾಭವನದಲ್ಲಿ ಸಂಘದ ವಾರ್ಷಿಕ…
ಡೋಮಗೇರಿ ದುರ್ಘಟನೆ: ಗೌಳಿವಾಡಾದಲ್ಲಿ ಅಂಗನವಾಡಿಯಿಲ್ಲದಿರುವುದೇ ಇಂತಹ ಘಟನೆಗೆ ಕಾರಣ
ಯಲ್ಲಾಪುರ ತಾಲೂಕಿನ ಡೋಮಗೇರಿ ಬಳಿ ಮರ ಬಿದ್ದು ಇಬ್ಬರು ಮೃತಪಟ್ಟು, ಮೂವರು ಮಕ್ಕಳು ಗಾಯಗೊಂಡ ಘಟನೆ ಎಲ್ಲರನ್ನು ಆಘಾತಗೊಳಿಸಿದೆ. ಈ ನಡುವೆ ಡೊಮಗೇರಿ ಗೌಳಿವಾವಡಾದಲ್ಲಿ ಅಂಗನವಾಡಿಯಂತಹ ಅಗತ್ಯ ಸೌಕರ್ಯ ಇಲ್ಲದಿರುವುದೇ ಇಂತಹ ಅವಾಂತರಗಳಿಗೆ ಕಾರಣವೆಂಬ ಆರೋಪ ಕೇಳಿ ಬಂದಿದೆ. ಡೋಮಗೇರಿಯ ಗೌಳಿಡಾದಲ್ಲಿ…
ವಿಮಾನ ಚಿಟ್ಟೆ ಹಾಗೂ ಜಲಬದ್ಧ ಕೀಟಗಳ ವೈವಿಧ್ಯತೆ ಕುರಿತು ವಿಶೇಷ ಅಧ್ಯಯನ
ಯಲ್ಲಾಪುರ ತಾಲೂಕಿನ ಆನಗೋಡ ಗ್ರಾಮದ ಚಿಕ್ಕೊರಗಿಯಲ್ಲಿ ವಿಮಾನ ಚಿಟ್ಟೆ (ಡ್ರಾಗನ್‌ಫ್ಲೈಗಳು) ಮತ್ತು ಜಲಬದ್ಧಕೀಟಗಳು (ಡ್ಯಾಮ್‌ಸೆಲ್‌ಫ್ಲೈಗಳು)ಗಳ ವೈವಿಧ್ಯತೆಯ ಕುರಿತಂತೆ ವಿಶೇಷ ಅಧ್ಯಯನ ನಡೆಸಲಾಗಿದೆ. ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಕೆ. ನಾಗರಾಜ ಅವರು…
ಯಶಸ್ವಿಯಾಗಿ ನಡೆದ ಯಕ್ಷಗಾನ ಕಾರ್ಯಾಗಾರ
ಯಲ್ಲಾಪುರ ತಾಲೂಕಿನ ಚಂದಗುಳಿಯ ಯುಕೆ ನೇಚರ್ ಸ್ಟೇಯಲ್ಲಿ ನಾದಾವಧಾನ ಸಂಸ್ಥೆ ಹಾಗೂ ಯಕ್ಷಗಾನ ಅಕಾಡೆಮಿಯ ಸಹಯೋಗದೊಂದಿಗೆ ಮೂರು ದಿನಗಳ ಯಕ್ಷಗಾನ ಕಾರ್ಯಗಾರ ನಡೆಯಿತು. ನಾದಾವಧಾನದ ವಿದ್ಯಾರ್ಥಿಗಳು ಮತ್ತು ಸ್ಥಳೀಯವಾಗಿ ಬೆಳೆಯುವ ಪ್ರತಿಭೆಗಳಿಗಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಅರ್ಥಧಾರಿ ಎಂ.ಎನ್ ಹೆಗಡೆ…
ಸರಣಿ ಅಪಘಾತ: 7 ಜನರಿಗೆ ಗಾಯ
ಕೆ.ಎಸ್.ಆರ್.ಟಿ.ಸಿ ಬಸ್, ಟ್ಯಾಂಕರ್ ಹಾಗೂ ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿ, 7 ಜನರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಪಟ್ಟಣದ ಜೋಡುಕೆರೆ ಬಳಿಯ ಪೆಟ್ರೊಲ್ ಪಂಪ್ ಎದುರು ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ…
ಮುರಿದ ಬಿದ್ದ ಆಲದ ಮರ: ಗರ್ಭಿಣಿ ಸಾವು, ನಾಲ್ವರಿಗೆ ಗಾಯ
ಬ್ರಹತ್ ಆಲದ ಮರ ಮುರಿವೊಂದು ಮುರಿದು ಬಿದ್ದು, ಗರ್ಭಿಣಿ ಸ್ಥಳದಲ್ಲೇ ಮೃತಪಟ್ಟು, ನಾಲ್ಕು ಜನರು ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಪಂ ವ್ಯಾಪ್ತಿಯ ಡೋಮಗೆರೆ ಬಳಿ ನಡೆದಿದೆ. ಸಾವಿತ್ರಿ ಬಾಬು ಖರಾತ್ (28) ಐದು ತಿಂಗಳ ಗರ್ಭಿಣಿ ಸ್ಥಳದಲ್ಲಿಯೇ ಮೃತಪಟ್ಟ…
















