ಟಿಪ್ಪರಿನ ಬ್ಯಾಟರಿ ಕಳ್ಳರ ಪಾಲು
ಯಲ್ಲಾಪುರ: ಕಾಳಮ್ಮನಗರದ ಸಂಕೇತ ನಾಯಕ ಹಾಗೂ ಚೇತನ ಭಟ್ಟ ಎಂಬಾತರಿಗೆ ಸೇರಿದ ಟಿಪ್ಪರ್’ಗಳ ಬ್ಯಾಟರಿ ಕಳ್ಳರ ಪಾಲಾಗಿದೆ. 40 ಸಾವಿರ ರೂಪಾಯಿಯ ಬ್ಯಾಟರಿ ಹಾಗೂ 2500ರೂ ಮೌಲ್ಯದ ಹೈಡ್ರಾಲಿಕ್ ಜಾಕ್ ಕದ್ದವರನ್ನು ಹಿಡಿದು ಆ ವಸ್ತುಗಳನ್ನು ನಮಗೆ ಮರಳಿಸಿ ಎಂದು ಸಂಕೇತ…
ಮಹಿಳೆಯರ ನಡುವೆ ಪಿಸುಮಾತು: ಸಂಕಷ್ಟಗಳಿಗೆ ಸ್ಪಂದಿಸುವoತೆ ಹಕ್ಕೊತ್ತಾಯ
ಕಾರವಾರ: ನೆರೆ ಪ್ರವಾಹದ ಪರಿಹಾರ ವಿತರಣೆ, ಹದಗೆಟ್ಟ ರಸ್ತೆ ದುರಸ್ತಿ, ಸರ್ಕಾರಿ ಕಚೇರಿಗಳ ಶುದ್ಧೀಕರಣ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಬುಧವಾರ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರನ್ನು ಭೇಟಿ ಮಾಡಿ ಚರ್ಚಿಸಿದರು. `ಚೆಂಡಿಯಾ, ತೋಡೂರು, ಅಮದಳ್ಳಿ,…
ಮನೆಗೆ ಬಂದ ಮೊಸಳೆ ಮರಳಿ ನದಿಗೆ
ದಾಂಡೇಲಿ ಅಂಬೇವಾಡಿಯ ಅರುಣಾದ್ರಿ ರಾವ್ ಅವರ ಮನೆಗೆ ಜುಲೈ 31ರ ಬೆಳಗ್ಗೆ ಮೊಸಳೆ ಆಗಮಿಸಿದ್ದು, ಉರಗ ತಜ್ಞರು ಆಗಮಿಸಿ ಅದನ್ನು ಹಿಡಿದು ನದಿ ದಡಕ್ಕೆ ಬಿಟ್ಟರು. ಮನೆಗೆ ಬಂದ ಮೊಸಳೆ ನೋಡಲು ನೂರಾರು ಜನ ಜಮಾಯಿಸಿದ್ದರು. ಇಂಡಿಯನ್ ಗ್ಯಾಸ್ ಕಚೇರಿ ಬಳಿ…
ಅಂಕಿ ಸಂಖ್ಯೆಗಳ ಆಟಕ್ಕೆ ಕಡಿವಾಣ: ಮಟ್ಕಾ ಬುಕ್ಕಿಗಳಿಗೆ ನಡುಕ!
ಉತ್ತರ ಕನ್ನಡ ಜಿಲ್ಲೆಯ ಮೂಲೆ ಮೂಲೆಯಲ್ಲಿಯೂ ಜೂಜು ಅಡ್ಡೆಗಳಿದ್ದು, ಪೊಲೀಸರು ಅದರ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ. ಇದರಿಂದ ಮಟ್ಕಾ ಹಾಗೂ ಇಸ್ಪಿಟ್ ಆಟಗಾರರಿಗೆ ನಡುಕ ಹುಟ್ಟಿದೆ. ಜಿಲ್ಲೆ ಹಲವು ಗೂಡಂಗಡಿಗಳಲ್ಲಿ ಮಟ್ಕಾ ಆಟ ನಡೆಯುತ್ತಿದೆ. 1 ರೂಪಾಯಿ ಹೂಡಿಕೆ ಮಾಡಿದರೆ…
ಕುಸಿಯುವ ಆತಂಕದಲ್ಲಿ ಪುಟ್ಟ ಸೇತು: ಮೂರು ಗ್ರಾಮವರಿಗೆ ಆತಂಕ
ಯಲ್ಲಾಪುರ: ಕುಂದೂರಿನ ರಾಮಚಂದ್ರ ನಾರಾಯಣ ಜೋಶಿ ಅವರ ಮನೆ ಎದುರಿಗಿದ್ದ ಸೇತುವೆಯ ಅಡಿ ಭಾಗದ ಮಣ್ಣು ನೀರು ಪಾಲಾಗಿದೆ. ಇದರಿಂದ ಸೇತುವೆ ಸಹ ಕುಸಿಯುವ ಆತಂಕ ಎದುರಾಗಿದೆ. ಸೇತುವೆಯ ಒಂದು ಭಾಗದ ಪಿಚ್ಚಿಂಗ್ ಸಹ ನೆಲಕಚ್ಚಿದೆ. ಈ ಪುಟ್ಟ ಸೇತುವೆ ಮದ್ಲುಗಾರ್,…
ಮಾದಕ ವ್ಯಸನದ ವಿರುದ್ಧ ಜಿಲ್ಲಾಡಳಿತದ ಆಂದೋಲನ
ಕಾರವಾರ: ಮಾದಕ ವ್ಯಸನಗಳ ದುಷ್ಪರಿಣಾಮಗಳ ಕುರಿತಂತೆ ಸಾರ್ವಜನಿಕರಿಗೆ ಡಾ ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸುವ ವ್ಯಸನ ಮುಕ್ತ ದಿನಾಚರಣೆ ಮೂಲಕ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಿ, ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳಿಗೆ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್…
ವಾಹನ ಸವಾರರ ಮೇಲೆ ಹದ್ದಿನ ಕಣ್ಣು!
ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಹನ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ನಿರ್ಲಕ್ಷ್ಯ ಚಾಲನೆ ಮಾಡುವವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಶಿರಸಿ, ಕಾರವಾರ, ಭಟ್ಕಳ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಇದೀಗ ರೆಡಾರ್ ಗನ್ ಮೂಲಕ ವಾಹನ ಸವಾರರನ್ನು ನಿಯಂತ್ರಿಸುವ ಕೆಲಸ ನಡೆಯುತ್ತಿದೆ. ವೇಗದ ವಾಹನ…
ಕೆಸರಾಟದಲ್ಲಿ ಖುಷಿ ಕಂಡ ಗ್ರಾಮೀಣ ಜನ!
ಕೆರವಡಿ ಹಾಗೂ ದೇವಳಮಕ್ಕಿಯ ಯುವ ಜನ ಗದ್ದೆಗೆ ಇಳಿದು ಪರಸ್ಪರ ಕೆಸರು ಎರೆಚಿಕೊಂಡರು. ಅವರು ಯಾವುದೋ ದ್ವೇಷಕ್ಕಾಗಿ ಕೆಸರಾಟ ನಡೆಸಿದ್ದಲ್ಲ, ಪರಸ್ಪರ ಪ್ರೀತಿ-ವಿಶ್ವಾಸಕ್ಕಾಗಿ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಿ ಉತ್ಸಾಹದಿಂದ ಭಾಗವಹಿಸಿದ್ದರು. ಕಳೆದ ಮೂರು ವರ್ಷಗಳಿಂದ ಕಾರವಾರದ ದೇವಳಮಕ್ಕಿಯಲ್ಲಿ ಕೆಸರುಗದ್ದೆ ಕ್ರೀಡಾಕೂಟ…
ಅಪಾಯಕಾರಿಯಾದ ಗಣಿ ಹೊಂಡ: ಭೂ ಕುಸಿತದ ಆತಂಕ
ಯಲ್ಲಾಪುರ: ಗಣಿಗಾರಿಕೆ ನಡೆಸಿದ ನಂತರ ಆ ಪ್ರದೇಶದಲ್ಲಿ ನಿರ್ಮಿಸಿದ ಹೊಂಡವನ್ನು ಸಮದಟ್ಟಾಗಿ ಮುಚ್ಚಬೇಕು ಎಂಬುದು ನಿಯಮ. ಆದರೆ, ಬಿಸಯೋಡಿನಲ್ಲಿ 1996ರ ಆಸುಪಾಸಿನಲ್ಲಿ ನಡೆದ ಗಣಿಕಾರಿಕೆಯ ಹೊಂಡಗಳನ್ನು ಈವರೆಗೂ ಮುಚ್ಚಿಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ಈ ಹೊಂಡಗಳು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. `ಈ ಹಿಂದೆ…
ಜುಲೈ 31ರ ತುರ್ತು ಘೋಷಣೆ: ಕರಾವಳಿ ಶಾಲೆಗಳಿಗೆ `ಮಳೆ ರಜೆ’
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ ಹಿನ್ನಲೆಯಲ್ಲಿ ಜುಲೈ 31ರ ಬುಧವಾರ ಕರಾವಳಿ ಭಾಗದ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಬುಧವಾರ ಬೆಳಗ್ಗೆ 7.20ಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಈ ನಿರ್ಧಾರ ಪ್ರಕಟಿಸಿದ್ದಾರೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ…







