6
ಬೈಕಿಗೆ ಗುದ್ದಿ ಬಸ್ಸಿಗೂ ಡಿಕ್ಕಿ ಹೊಡೆದ ಕಾರು!

ಕುಮಟಾದಿಂದ ಅಂಕೋಲಾ ಕಡೆ ಬರುತ್ತಿದ್ದ ಕಾರು ಶಿರೂರಿನಲ್ಲಿ ಬೈಕಿಗೆ ಡಿಕ್ಕಿಯಾಗಿದೆ. ಅದಾದ ನಂತರ ಎದುರಿನಿಂದ ಬರುತ್ತಿದ್ದ ಬಸ್ಸಿಗೂ ಗುದ್ದಿದೆ. ಫೆ 23ರ ಮಧ್ಯಾಹ್ನ ಧಾರವಾಡದ ಅಂಕಿತಕುಮಾರ (26) ಆ ಕಾರು ಓಡಿಸುತ್ತಿದ್ದರು. ವೇಗವಾಗಿ ಕಾರು ಓಡಿಸಿದ ಅವರು ಮೊದಲು ಶಿರೂರು ಗ್ರಾಮದ…

ಬಂಗಾರಮಕ್ಕಿ ಗುಡ್ಡಕ್ಕೂ ಬೆಂಕಿ!

ಭಟ್ಕಳ ಬೇಂಗ್ರೆಯ ಬಂಗಾರಮಕ್ಕಿ ಗುಡ್ಡಕ್ಕೂ ಆಕಸ್ಮಿಕ ಬೆಂಕಿ ತಗುಲಿದೆ. ಇಲ್ಲಿ ಮೇವಿಗೆ ತೆರಳಿದ್ದ ಜಾನುವಾರುಗಳು ಕಂಗಾಲಾಗಿ ಓಡಿವೆ. ಬಂಗಾರಮಕ್ಕಿಯ ಸುಮಾರು 15 ಎಕರೆ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿದೆ. ಪರಿಣಾಮ ಅಲ್ಲಿದ್ದ ಹುಲ್ಲುಗಾವಲು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಸೋಮವಾರ ಬೆಂಕಿ ತಗುಲಿದ ಅವಧಿಯಲ್ಲಿ…

ನೆಲಕ್ಕೆ ಬಿದ್ದ ವಿದ್ಯುತ್ ತಂತಿ: ಅಗ್ನಿ ಅನಾಹುತಕ್ಕೆ ನಾಲ್ಕು ಎಕರೆ ತೋಟ ನೆಲಸಮ!

ಯಲ್ಲಾಪುರ ತಾಲೂಕಿನ ಸವಣಗೇರಿ ಬಳಿಯ ಯರಕಿನಬೈಲಿನಲ್ಲಿ ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ತೋಟಕ್ಕೆ ಅಗ್ನಿ ಸ್ಪರ್ಶವಾದ ಕಾರಣ 4 ಎಕರೆಯ ಬೆಳೆ ಭಸ್ಮವಾಗಿದೆ. ಇಲ್ಲಿನ ಈಶ್ವರ ಪಟಗಾರ ಹಾಗೂ ಮಹದೇವ ಪಾಠಣಕರ್ ತಮ್ಮ ಭೂಮಿಯಲ್ಲಿ ಅಡಿಕೆ, ತೆಂಗಿನ ಜೊತೆ ಕಬ್ಬು ಬೆಳೆದಿದ್ದರು. ಅಲ್ಲಲ್ಲಿ…

ಹೊನ್ನಾವರ: ಇಲ್ಲಿಯೂ ನಿಷೇಧದ ಗುಮ್ಮ!

ಬಂದರು ಕಾಮಗಾರಿ ಹಿನ್ನಲೆ ಫೆ 25ರಂದು ಹೊನ್ನಾವರದ ಹಿರೇಮಠ ಸ್ಮಶಾನದಿಂದ ಕಾಸರಕೋಡ ಗ್ರಾಮದ ಸಮುದ್ರಗುಂಟ ಪ್ರದೇಶದವರೆಗೆ ನಿಷೇಧಾಜ್ಞೆ ಹೊರಡಿಸಲಾಗಿದೆ. ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66 ಹತ್ತಿರದಲ್ಲಿರುವ ಹಿರೇಮಠ ಸ್ಮಶಾನದಿಂದ ಕಾಸರಕೋಡ ಗ್ರಾಮದಲ್ಲಿ ಸಮುದ್ರಗುಂಟದ ರಸ್ತೆಯನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಫೆ 25ರಂದು ಸರ್ವೇ ಕಾರ್ಯ…

ಗೋಕರ್ಣ: ಈ ಎರಡೂ ದಿನ ಸಿಗಲ್ಲ ಸರಾಯಿ!

ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಶಿವರಾತ್ರಿ ಹಿನ್ನಲೆ ಗೋಕರ್ಣದಲ್ಲಿ ಎರಡು ದಿನಗಳ ಕಾಲ ಸರಾಯಿ ಮಾರಾಟ ನಿಷೇಧಿಸಲಾಗಿದೆ. ಮಹಾಶಿವರಾತ್ರಿ ಉತ್ಸವ ಮತ್ತು ಮಹಾರಥೋತ್ಸವದ ಅಂಗವಾಗಿ ಫೆ.26 ಮತ್ತು ಫೆ. 28 ರಂದು ನಡೆಯಲಿದೆ. ಈ ಹಿನ್ನಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ…

ಫಿನೈಲ್ ಕುಡಿದ ಸಾರಿಗೆ ಸಿಬ್ಬಂದಿ!

ಹಳೆ ದಾಂಡೇಲಿಯ ಕೆಎಸ್‌ಆರ್‌ಟಿಸಿ ಚಾಲಕ ಆರ್ ಬಿ ಗಿಡಜಾಡರ್ ಫಿನೈಲ್ ಸೇವಿಸಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಸಹದ್ಯೋಗಿಗಳು ತುರ್ತಾಗಿ ಆಸ್ಪತ್ರೆಗೆ ದಾಖಲಿಸಿದರು. ಆರ್ ಬಿ ಗಿಡಜಾಡರ್ ಅವರು ದಾಂಡೇಲಿ ಸಿಟಿ ಬಸ್ಸಿನ ಚಾಲಕರಾಗಿದ್ದರು. ಸೋಮವಾರ ಅವರು ಸಾಕಷ್ಟು ಮಂಕಾಗಿದ್ದರು. ಈ ದಿನ ಸಹದ್ಯೋಗಿಗಳ…

ನಿರುದ್ಯೋಗಿ ಮಹಿಳೆಯರಿಗೆ ವಸ್ತ್ರ ವಿನ್ಯಾಸ ತರಬೇತಿ

ಕುಮಟಾದ ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯೂ ಮಾರ್ಚ 5ರಿಂದ ಮಹಿಳೆಯರಿಗೆ ವಸ್ತ್ರ ವಿನ್ಯಾಸ ತರಬೇತಿ ನಡೆಸಲು ನಿರ್ಧರಿಸಿದೆ. 30 ದಿನಗಳ ಕಾಲ ಈ ತರಬೇತಿ ನಡೆಯಲಿದೆ. ಗ್ರಾಮೀಣ ಪ್ರದೇಶದ ಬಿಪಿಎಲ್ ಅಭ್ಯರ್ಥಿಗಳಿಗೆ ಇಲ್ಲಿ ಮೊದಲ ಆದ್ಯತೆ. ತರಬೇತಿಯು…

ಅಕ್ರಮ ಮಸೀದಿ ವಿರುದ್ಧ ಹೋರಾಟಗಾರರ ಕಿಡಿ!

ಸಾರ್ವಜನಿಕ ಕುಡಿಯುವ ನೀರು ಪೂರೈಕೆ ಸ್ಥಳದಲ್ಲಿ ಮಸೀದಿ ನಿರ್ಮಿಸುತ್ತಿರುವುದನ್ನು ನೂತನ ನಗರ (ಜಡ್ಡಿ)ದ ಜನ ವಿರೋಧಿಸಿದ್ದಾರೆ. ಯಲ್ಲಾಪುರ ಪಟ್ಟಣದ ನೂತನ ನಗರದಲ್ಲಿ (ಜಡ್ಡಿ) ಹಜರತ್ ಖಾಜಾ ಗರಿಬನ್ ನವಾಜ್ ಮಸೀದಿ ಕಾಮಗಾರಿ ನಡೆಯುತ್ತಿದೆ. ಅಧಿಕೃತ ಪರವಾನಿಗೆ ಇಲ್ಲದಿದ್ದರೂ ಇಲ್ಲಿ ಮಸೀದಿ ಕೆಲಸ…

ಹಣ್ಣಿನ ಅಂಗಡಿ ಮೇಲೆ ಕಳ್ಳರ ಕಣ್ಣು!

ಎರಡು ವಾರದ ನಂತರ ಮುಂಡಗೋಡಿನ ಹಣ್ಣಿನ ಅಂಗಡಿಗಳ ಮೇಲೆ ಮತ್ತೆ ಕಳ್ಳರು ಕಣ್ಣಾಯಿಸಿದ್ದಾರೆ. ಟಿಬೆಟಿಯನ್ ಕಾಲೋನಿಯ ಕ್ಯಾಂಪ್ ನಂಬರ್ 1ರಲ್ಲಿಯ ಹಣ್ಣಿನ ಅಂಗಡಿಯಲ್ಲಿ ಮತ್ತೆ ಕಳ್ಳತನವಾಗಿದೆ. ಇಲ್ಲಿ ಇಮಾಮಸಾಬ ಸೈಯದಲಿ ಇಂದೂರ ಹಾಗೂ ಭಾಷಾಸಾಬ ರಾಜೇಸಾಬ ಇಂದೂರ ಎಂಬಾತರು ಹಣ್ಣುಗಳ ವ್ಯಾಪಾರ…

ಸತ್ಯವನ್ನೇ ಹೇಳುತ್ತೇನೆ.. ಸತ್ಯವನ್ನು ಬಿಟ್ಟು ಬೇರೆನೂ ಹೇಳುವುದಿಲ್ಲ!

ಮುಚ್ಚಿಟ್ಟ ಸತ್ಯವನ್ನು ಜನರ ಎದುರು ತೆರೆದಿಟ್ಟು ರಾಷ್ಟ್ರೀಯತೆಯ ಕುರಿತು ಜನ ಜಾಗೃತಿ ಮೂಡಿಸುವ `ಸತ್ಯವನ್ನೇ ಹೇಳುತ್ತೇನೆ’ ನಾಟಕ ಮಾರ್ಚ 2ರಂದು ಯಲ್ಲಾಪುರ ಮಂಚಿಕೇರಿಯಲ್ಲಿ ಪ್ರದರ್ಶನವಾಗಲಿದೆ. ಮಂಚಿಕೇರಿಯ ರಂಗ ಮಂದಿರದಲ್ಲಿ ಅಂದು ಸಂಜೆ 6.30ಕ್ಕೆ ಈ ನಾಟಕ ಪ್ರದರ್ಶನ ನಡೆಯಲಿದೆ. ಅನಂತಮೂರ್ತಿ ಹೆಗಡೆ…

You cannot copy content of this page