ಜಡೆ ಜಗಳ | ಬೈಗುಳ ತಪ್ಪಿಸಲು ಬಂದ ಅತ್ತೆಗೆ ಬಡಿಗೆ ಏಟು!
ಕೋಳಿ ಆಹಾರವನ್ನು ಬಿಸಲಿಗೆ ಒಣಗಿಸುವ ವಿಷಯವಾಗಿ ಮೂವರು ಮಹಿಳೆಯರ ನಡುವೆ ಕಚ್ಚಾಟ ನಡೆದಿದೆ. ಈ ವಿಷಯ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ರಾಜಿ-ಸಂದಾನ ಬಗೆಹರಿಯದ ಕಾರಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಳಿಯಾಳದ ತತ್ವಣಗಿಯ ಸರಸ್ವತಿ ಮೇತ್ರಿ ಅವರು ಅದೇ ಊರಿನ ಅಲಬಂದ…
ರಸ್ತೆ ಅಂಚಿನಲ್ಲಿ ನಿಲ್ಲಿಸಿದ ಬೈಕ್ ಮಾಯ
ರಸ್ತೆ ಪಕ್ಕ ನಿಲ್ಲಿಸಿದ್ದ ವೀರಭದ್ರ ಬೋಗುರಕರ ಅವರ ಬೈಕ್ ಕಾಣೆಯಾಗಿದೆ. ಅದನ್ನು ಹುಡುಕಿಕೊಡುವಂತೆ ಅವರು ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ. ಹಳಿಯಾಳದ ಕಾಳಗಿನಕೊಪ್ಪದ ವೀರಭದ್ರ ಬೋಗುರಕರ (27) ವ್ಯಾಪಾರಿ. ಜನವರಿ 22ರಂದು ಅವರು ಮಲವಡಿ ಗ್ರಾಮದ ಬಳಿ ಎತ್ತುಗಳನ್ನು ನೋಡಿ ಬರಲು ಹೋಗಿದ್ದರು.…
ಹುಲ್ಲಿನ ಲಾರಿಗೆ ಹೊಗೆ!
ಜಾನುವಾರುಗಳ ಮೇವಿಗಾಗಿ ಹುಲ್ಲು ತುಂಬಿಕೊoಡು ಹೊರಟಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಪರಿಣಾಮ ಹುಲ್ಲಿನ ಜೊತೆ ಲಾರಿಯೂ ಭಸ್ಮವಾಗಿದೆ. ಸಿದ್ದಾಪುರ ತಾಲೂಕಿನ ಕುಮಟಾ ಮುಖ್ಯ ರಸ್ತೆಯಲ್ಲಿ ಶನಿವಾರ ಹುಲ್ಲು ತುಂಬಿದ ಲಾರಿ ಚಲಿಸುತ್ತಿತ್ತು. ಸಿದ್ದಾಪುರ ಕಡೆಯಿಂದ ದೊಡ್ಮನೆ ಕಡೆಗೆ ಸಾಗುತ್ತಿದ್ದಾಗ ಕುಂಬ್ರಿಗದ್ದೆ…
ಹೃದಯ ಸಮಸ್ಯೆ: ನೇಣಿಗೆ ಶರಣಾದ ಶ್ರಮಿಕ
ಕಳೆದ ಒಂದು ವರ್ಷದಿಂದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಮಾದೇವ ನಾಯ್ಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಟ್ಕಳದ ಬೈಲೂರಿನ ತುಂಬೇಬೀಳುವಿನಲ್ಲಿ ಮಾದೇವ ನಾಯ್ಕ (55) ವಾಸಿಸುತ್ತಿದ್ದರು. ದಿನವಿಡೀ ಮನೆ ಕೆಲಸ ಮಾಡಿಕೊಂಡು ಅವರು ಆರೋಗ್ಯವಾಗಿಯೇ ಇದ್ದರು. ಹೀಗಿರುವಾಗ ಕಳೆದ ವರ್ಷ ಅವರಿಗೆ ಏಕಾಏಕಿ ಎದೆ…
ವೃದ್ಧನ ಪಾಲಿಗೆ ಯಮನ ರೀತಿ ಬಂದ ಪೆಪರ್ ತುಂಬಿದ ಲಾರಿ!
ನಿಧಾನವಾಗಿ ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್’ಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರಿನಲ್ಲಿದ್ದ ಗುರುಪ್ಪಾ ಕೊಟಗಿ ಸಾವನಪ್ಪಿದ್ದಾರೆ. ದಾಂಡೇಲಿ ಸುಭಾಷ ನಗರದ ಗುರುಪ್ಪಾ ಕೊಟಗಿ (75) ಹೊಸದಾಗಿ ಎಲೆಕ್ಟ್ರಿಕ್ ಸ್ಕೂಟಿ ಖರೀದಿಸಿದ್ದರು. ಜನವರಿ 24ರ ಸಂಜೆ ಅವರು ಹಳಿಯಾಳ ಕಡೆಯಿಂದ ದಾಂಡೇಲಿ ಕಡೆ…
ಅಪರೂಪದ ಆಲೆಮನೆ | ಮಿರ್ಜಿ ಮಂಡಕ್ಕಿ ಜೊತೆ ಕಬ್ಬಿನ ಹಾಲಿನ ಸವಿ!
ಅಂಕೋಲಾ-ಯಲ್ಲಾಪುರ ಗಡಿ ಗ್ರಾಮವಾದ ಹಳವಳ್ಳಿಯಲ್ಲಿ ಊರಿನವರೆಲ್ಲ ಒಟ್ಟಾಗಿ ಜನವರಿ 26ರಂದು `ಆಲೆಮನೆ ಉತ್ಸವ’ ಆಯೋಜಿಸುತ್ತಿದ್ದಾರೆ. ಸಂಜೆ 6 ಗಂಟೆಯಿoದ ರಾತ್ರಿ 10ಗಂಟೆಯವರೆಗೆ ಈ ಉತ್ಸವ ನಡೆಯಲಿದೆ. ಕಳೆದ ವರ್ಷವೂ ಇಲ್ಲಿ ಆಲೆಮನೆ ಉತ್ಸವವನ್ನು ಆಯೋಜಿಸಲಾಗಿತ್ತು. ಅದು ಯಶಸ್ವಿಯಾದ ಹಿನ್ನಲೆ ಇದೀಗ 2ನೇ…
ಮಹಿಳೆ ಜೊತೆ ಅನುಚಿತ ವರ್ತನೆ: ಆಸ್ಪತ್ರೆ ಆವರಣದಲ್ಲಿಯೇ ಹೊಡೆದಾಟ!
10 ದಿನದ ಹಿಂದೆ ನಡೆದ ಭರತನಾಟ್ಯ ಕಾರ್ಯಕ್ರಮದಲ್ಲಿ ಮಹಿಳೆ ಜೊತೆ ಅನುಚಿತ ವರ್ತನೆ ಮಾಡಿದ ಕಾರಣಕ್ಕೆ ಔಷಧ ಪೂರೈಕೆದಾರ ಹಾಗೂ ವ್ಯಾಪಾರಿ ನಡುವೆ ಹೊಡೆದಾಟ ನಡೆದಿದೆ. ಹೊಡೆದಾಡಿಕೊಂಡ ಇಬ್ಬರೂ `ತನ್ನದೇನೂ ತಪ್ಪಿಲ್ಲ’ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಜನವರಿ 14ರಂದು ಶಿರಸಿಯ…
ಗ್ರಾಮ ಆಡಳಿತಾಧಿಕಾರಿಗಳಿಗೆ ಕಿವಿಮಾತು: ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಲು ಡೀಸಿ ಕರೆ
`ಸರ್ಕಾರ ಹಾಗೂ ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸುವ ಗ್ರಾಮ ಆಡಳಿತಾಧಿಕಾರಿಗಳು ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಹೇಳಿದ್ದಾರೆ. `ಪರಸ್ಪರ ಸಹಕಾರ ಮನೋಭಾವನೆಯಿಂದ ಮಾತ್ರ ಉತ್ತಮ ಆಡಳಿತ ಸಾಧ್ಯ’ ಎಂದವರು ಪ್ರತಿಪಾದಿಸಿದ್ದಾರೆ. ಕರ್ನಾಟಕ ರಾಜ್ಯ ಗ್ರಾಮಡಳಿತ…
ಅರಣ್ಯ ಹಕ್ಕು | ಮಲ್ಲಾಪುರದಲ್ಲಿ ನಡೆದ ಅತಿಕ್ರಮಣದಾರರ ಸಭೆ
`ಅರಣ್ಯ ಹಕ್ಕು ಕಾನೂನು ಅರಣ್ಯ ಅತಿಕ್ರಮಣದಾರರ ಪರವಾಗಿದ್ದರೂ ಇಚ್ಚಾಶಕ್ತಿ ಕೊರತೆಯಿಂದ ಅತಿಕ್ರಮಣದಾರರಿಗೆ ಸಮಸ್ಯೆಯಾಗುತ್ತಿದೆ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ. ಕಾರವಾರದ ಮಲ್ಲಾಪುರದಲ್ಲಿ ಅತಿಕ್ರಮಣದಾರರ ಸಭೆಯಲ್ಲಿ ಮಾತನಾಡಿದ ಅವರು `ಹಕ್ಕಿಗಾಗಿ ಹೋರಾಟ ಮಾಡುವದು ಸಂವಿಧಾನಬದ್ಧ…
ರಜೆ ದಿನವೂ ಕೆಲಸಕ್ಕೆ ಬಂದ ನೌಕರನಿಗೆ ಐಸ್ ಕ್ರೀಂ ಭಾಗ್ಯ!
ಸರ್ಕಾರಿ ರಜಾ ದಿನವೂ ಕೆಲಸಕ್ಕೆ ಹಾಜರಾಗಿ ಗಣರಾಜ್ಯೋತ್ಸವ ಸಿದ್ಧತೆ ನಡೆಸುತ್ತಿದ್ದ ಹೊರಗುತ್ತಿಗೆ ನೌಕರರಿಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ಐಸ್ ಕ್ರೀಂ ವಿತರಿಸಿ ಅವರ ದಾಹ ನೀಗಿಸಿದ್ದಾರೆ. `ಸರ್ಕಾರಿ ರಜಾ ದಿನಗಳಲ್ಲಿಯೂ ದುಡಿಯುವ ಶ್ರಮಿಕ ವರ್ಗದವರ ನೌಕರಿ ಖಾಯಂ ಮಾಡಬೇಕು’ ಎಂದು ಈ ವೇಳೆ…








