6
ಮೀಸೆ ಮೂಡದ ಮಾಣಿಗೂ ಗಾಂಜಾ ಗುಂಗು!

ಶಿರಸಿ: ಮಾರಿಕಾಂಬಾ ನಗರದಲ್ಲಿ ಅಲೆದಾಡುತ್ತಿದ್ದ ಸೋಹನ ಭಂಡಾರಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಆತ ಗಾಂಜಾ ಸೇವಿಸಿರುವುದು ಖಚಿತವಾಗಿದೆ. ಗುರುವಾರ ಬೆಳಗ್ಗೆ ಸೋಹನ ಭಂಡಾರಿ ಮಾರಿಕಾಂಬಾ ನಗರದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ. ಆತನನ್ನು ನೋಡಿದ ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಆಗ, ಪೊಲೀಸರ ಬಳಿ…

ಕೃಷಿಕ ಸಮಾಜಕ್ಕೆ ನಾರಾಯಣ ಹೆಗಡೆ ಅಧ್ಯಕ್ಷ!

ಉತ್ತರ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿ ಕರಿಕಲ್ ನಾರಾಯಣ ಹೆಗಡೆ ಅಧ್ಯಕ್ಷರಾಗಿದ್ದಾರೆ. ಗುರುವಾರ ಕೃಷಿ ಇಲಾಖೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೃಷಿಕರ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸುವುದು,…

ಇನ್ನೂ ಬಾರದ ಬೆಳೆವಿಮೆ ಪರಿಹಾರ: ಮುಂಡಗೋಡದಲ್ಲಿಯೂ ರಸ್ತೆ ತಡೆ!

ಮುಂಡಗೋಡ: ಬೆಳೆ ವಿಮೆ ಪರಿಹಾರಕ್ಕೆ ಆಗ್ರಹಿಸಿ ಶಿರಸಿಯಲ್ಲಿ ಪ್ರತಿಭಟನೆ ಬೆನ್ನಲ್ಲೆ ಮುಂಡಗೋಡಿನ ರೈತರು ಸಹ ರಸ್ತೆ ತಡೆ ನಡೆಸಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಗುರುವಾರ ರಾಜ್ಯ ರೈತ ಸಂಘದವರು ಮಳಗಿಯಲ್ಲಿ ಧರಣಿ ನಡೆಸಿದ್ದು, ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿ ತಡೆದು ಪರಿಹಾರಕ್ಕಾಗಿ ಪಟ್ಟು ಹಿಡಿದರು. `ಅತಿವೃಷ್ಟಿಯಿಂದ…

ಹಾಸ್ಟೇಲ್ ಮಕ್ಕಳ ಬಗ್ಗೆ ಜಿಲ್ಲಾಧಿಕಾರಿಗೆ ವಿಶೇಷ ಕಾಳಜಿ

ಕಾರವಾರ: `ವಿವಿಧ ಹಾಸ್ಟೇಲ್‌ಗಳಲ್ಲಿ ಓದುತ್ತಿರುವ ಮಕ್ಕಳಿಗೆ ಯಾವುದೇ ಸಮಸ್ಯೆ ಆಗದಂತೆ ಅಧಿಕಾರಿಗಳು ಮುನ್ನಚ್ಚರಿಕೆವಹಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಹೇಳಿದ್ದಾರೆ. `ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಸೂಕ್ತ ರಕ್ಷಣೆ ಒದಗಿಸಬೇಕು. ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಅಲ್ಲಿರುವ ಮಕ್ಕಳಿಗೆ ಕುಡಿಯುವ ನೀರು,…

ಮುರುಡೇಶ್ವರ | ಈ ದಿನ ಮದ್ಯ ಮಾರಾಟ ನಿಷೇಧ!

ಭಟ್ಕಳ: ಮುರುಡೇಶ್ವರದ ದೇವಸ್ಥಾನದ ಮಹಾರಥೋತ್ಸವ ಜನವರಿ 19ರಂದು ನಡೆಯಲಿದೆ. ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆಯಿದ್ದು, ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಎಚ್ಚರಿಕೆವಹಿಸಿದೆ. ಈ ಹಿನ್ನೆಲೆ ಆ ದಿನ ಮದ್ಯ ಮಾರಾಟವನ್ನು ಸಹ ನಿಷೇಧಿಸಲಾಗಿದೆ. ಜನವರಿ 19ರ ಬೆಳಗ್ಗೆ 6 ಗಂಟೆಯಿoದ ಮರುದಿನ…

ಅಕ್ಕಸಾಲಿಗನ ಜೊತೆ ಚಾಲಕನ ಅಂದರ್ ಬಾಹರ್: ಜೊತೆಗೆ ಸಿಕ್ಕಿಬಿದ್ದ ಕೆಲಸದ ಆಳು!

ಮುಂಡಗೋಡ: ಓಣಿಕೇರಿಯ ಮಾರುತಿ ದೇವಸ್ಥಾನದ ಬಳಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಪೊಲೀಸರಿಗೆ 52 ಇಸ್ಪಿಟ್ ಎಲೆಗಳ ಜೊತೆ ಅಲ್ಲಿ ಹರಡಿಕೊಂಡಿದ್ದ 7400ರೂ ಹಣ ಸಿಕ್ಕಿದೆ. ಬೆಳಗಾವಿಯಲ್ಲಿ ಬಂಗಾರದ ಕೆಲಸ ಮಾಡುವ ಅರುಣ ಅಕ್ಕಸಾಲಿಗ…

ತಂಗಿಮನೆಗೆ ಹೊರಟವನಿಗೆ ಕಾಣಿಸಿತು ರಕ್ತಸಿಕ್ತ ಶವ!

ಸಿದ್ದಾಪುರ: ಸ್ನೇಹಿತರ ಜೊತೆ ತಂಗಿ ಮನೆಗೆ ಹೊರಟಿದ್ದ ಚಂದ್ರಶೇಖರ ನಾಯ್ಕ ಅವರಿಗೆ ರಸ್ತೆ ಪಕ್ಕ ರಕ್ತ ಗೋಚರಿಸಿದ್ದು, ಅದನ್ನು ಬೆನ್ನತ್ತಿ ಹೋದಾಗ ರಕ್ತದ ಮಡವಿನಲ್ಲಿ ಬಿದ್ದ ವ್ಯಕ್ತಿಯ ಶವ ಕಾಣಿಸಿದೆ. ಮಾವಿನಗುಂಡಿ ಬಸವನಬೈಲಿನ ಚಂದ್ರಶೇಖರ ನಾಯ್ಕ ಅವರು ಜನವರಿ 14ರ ರಾತ್ರಿ…

ವಾಲಿಬಾಲ್ ಪಂದ್ಯ | ಆಟ ಆಡಿ.. ಬಹುಮಾನ ಗೆಲ್ಲಿ!

ಯಲ್ಲಾಪುರ: ಬೆಡಸಗದ್ದೆಯ ಸಮಾನ ಮನಸ್ಕರೆಲ್ಲರೂ ಸೇರಿ ಜಿಲ್ಲಾ ಮಟ್ಟದ `ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ’ ಆಯೋಜಿಸಿದ್ದಾರೆ. ಜನವರಿ 18ರ ಶನಿವಾರ ಮಧ್ಯಾಹ್ನ 3 ಗಂಟೆಗೆ ವನಶ್ರೀ ಕ್ರೀಡಾಂಗಣದಲ್ಲಿ ಈ ಆಟ ಶುರುವಾಗಲಿದೆ. ಹೀಗಾಗಿ ಜನವರಿ 17ಕ್ಕೆ ಹೆಸರು ನೊಂದಾಯಿಸಲು ಕೊನೆ ದಿನ.…

ಎದೆನೋವು ಎಂದು ಕೈ ಕುಯ್ದುಕೊಂಡ ವ್ಯಕ್ತಿ ಸಾವು!

ಮುಂಡಗೋಡ: 14 ವರ್ಷಗಳಿಂದ ಎದೆನೋವಿನಿಂದ ಬಳಲುತ್ತಿದ್ದ ಮಂಜುನಾಥ ಗೆಜ್ಜೆಹಳ್ಳಿ ಅದೇ ನೋವಿನಲ್ಲಿ ಕೈ ಕೊರೆದುಕೊಂಡಿದ್ದು, ಚಿಕಿತ್ಸೆಗೆ ದಾಖಲಿಸಿದರೂ ಸ್ಪಂದಿಸದೇ ಸಾವನಪ್ಪಿದ್ದಾರೆ. ಮುಂಡಗೋಡಿನ ರಾಮಾಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಗೆಜ್ಜೆಹಳ್ಳಿ (34) ಎದೆನೋವಿನ ಕಾರಣ ಹಲವು ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಆದರೆ, ಎಲ್ಲಿಯೂ…

ಪತ್ನಿ ದೂರವಾದ ಚಿಂತೆ: ನೇಣಿಗೆ ಶರಣಾದ ವ್ಯಸನಿ

ಜೊಯಿಡಾ: ಕಳೆದ 20 ವರ್ಷಗಳಿಂದ ಸರಾಯಿ ಕುಡಿಯುತ್ತಿದ್ದ ಡುಮ್ಮಿಂಗ್ ಫರ್ನಾಂಡಿಸ್ ಹಲಸಿನ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಯರಮುಖದ ಡುಮ್ಮಿಂಗ್ ಫರ್ನಾಂಡಿಸ್’ಗೆ `ಸರಾಯಿ ಕುಡಿಯುವುದು ಒಳ್ಳೆಯದಲ್ಲ’ ಎಂದು ಸಾಕಷ್ಟು ಬಾರಿ ಕುಟುಂಬದವರು ಹೇಳಿದ್ದರು. ಒಮ್ಮೆ ಕಾರವಾರಕ್ಕೆ ಕರೆದೊಯ್ದು ಕುಡಿಯುವ ಚಟವನ್ನು ಬಿಡಿಸಿದ್ದರು. ಅದಾಗಿಯೂ…

You cannot copy content of this page