6

ತಂಗಿಮನೆಗೆ ಹೊರಟವನಿಗೆ ಕಾಣಿಸಿತು ರಕ್ತಸಿಕ್ತ ಶವ!

ಸಿದ್ದಾಪುರ: ಸ್ನೇಹಿತರ ಜೊತೆ ತಂಗಿ ಮನೆಗೆ ಹೊರಟಿದ್ದ ಚಂದ್ರಶೇಖರ ನಾಯ್ಕ ಅವರಿಗೆ ರಸ್ತೆ ಪಕ್ಕ ರಕ್ತ ಗೋಚರಿಸಿದ್ದು, ಅದನ್ನು ಬೆನ್ನತ್ತಿ ಹೋದಾಗ ರಕ್ತದ ಮಡವಿನಲ್ಲಿ ಬಿದ್ದ ವ್ಯಕ್ತಿಯ ಶವ ಕಾಣಿಸಿದೆ.

ಮಾವಿನಗುಂಡಿ ಬಸವನಬೈಲಿನ ಚಂದ್ರಶೇಖರ ನಾಯ್ಕ ಅವರು ಜನವರಿ 14ರ ರಾತ್ರಿ 10.30ಕ್ಕೆ ಕಾರಿನಲ್ಲಿ ಹೋಗುತ್ತಿದ್ದರು. ಮೆಟ್ಟಿನಗದ್ದೆಯಲ್ಲಿರುವ ಅವರ ತಂಗಿ ಮನೆಗೆ ತೆರಳುತ್ತಿರುವಾಗ ಮಲೆಮನೆ ರಸ್ತೆಯಂಚಿನಲ್ಲಿ ಅವರಿಗೆ ರಕ್ತ ಕಾಣಿಸಿತು. ಕಾರಿನಲ್ಲಿದ್ದ ಸ್ನೇಹಿತರ ಜೊತೆ ಅವರು ಸುತ್ತಲು ಹುಡುಕಾಟ ನಡೆಸಿದರು.

ಆಗ, ಅಪರಿಚಿತ ವ್ಯಕ್ತಿಯೊಬ್ಬ ರಸ್ತೆ ಅಂಚಿನಲ್ಲಿ ಬಿದ್ದಿರುವುದು ಗೋಚರಿಸಿತು. ಆತನ ಹತ್ತಿರ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದು ಆತ ಸಾವನಪ್ಪಿರುವುದು ಗೊತ್ತಾಯಿತು. ನಡೆದು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ಅಪರಿಚಿತ ವಾಹನ ಗುದ್ದಿ ಪರಾರಿಯಾಗಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದರು. ಅಪಘಾತದ ಪರಿಣಾಮ ಆತ ಸಾವನಪ್ಪಿರುವ ಅನುಮಾನದ ಹಿನ್ನಲೆ ಪೊಲೀಸ್ ಪ್ರಕರಣ ದಾಖಲಿಸಿದರು.

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page