6

ಅಕ್ಕಸಾಲಿಗನ ಜೊತೆ ಚಾಲಕನ ಅಂದರ್ ಬಾಹರ್: ಜೊತೆಗೆ ಸಿಕ್ಕಿಬಿದ್ದ ಕೆಲಸದ ಆಳು!

ಮುಂಡಗೋಡ: ಓಣಿಕೇರಿಯ ಮಾರುತಿ ದೇವಸ್ಥಾನದ ಬಳಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಪೊಲೀಸರಿಗೆ 52 ಇಸ್ಪಿಟ್ ಎಲೆಗಳ ಜೊತೆ ಅಲ್ಲಿ ಹರಡಿಕೊಂಡಿದ್ದ 7400ರೂ ಹಣ ಸಿಕ್ಕಿದೆ.

ಬೆಳಗಾವಿಯಲ್ಲಿ ಬಂಗಾರದ ಕೆಲಸ ಮಾಡುವ ಅರುಣ ಅಕ್ಕಸಾಲಿಗ ಜನವರಿ 14ರಂದು ರಾತ್ರಿ 8 ಗಂಟೆಗೆ ಅಂದರ್ ಬಾಹರ್ ಆಟಕ್ಕೆ ಆಮಂತ್ರಿಸಿದ್ದರು. ಅದರ ಪ್ರಕಾರ ಓಣಿಕೇರಿಯ ಚಾಲಕ ಸೋಮನಗೌಡ ಪಾಟೀಲ, ಕೂಲಿ ಕೆಲಸ ಮಾಡುವ ಸಂತೋಷ ಬಾಳಬಿಂಡ, ಪಾಂಡುರoಗ ಕೋಣನಕೇರಿ ಹಾಗೂ ಬುಡ್ಡೆಸಾಬ ಮುನಿಯಾರ ಅಲ್ಲಿಗೆ ಬಂದಿದ್ದರು.

ಎಲ್ಲರೂ ಸೇರಿ ಇಸ್ಪಿಟ್ ಆಡುತ್ತಿರುವಾಗ ಪಿಎಸ್‌ಐ ಪರಶುರಾಮ ಮಿರ್ಚಗಿ ದಾಳಿ ಮಾಡಿದರು. ಪೊಲೀಸರನ್ನು ನೋಡಿದ ಪಾಂಡುರoಗ ಕೋಣನಕೇರಿ ಹಾಗೂ ಬುಡ್ಡೆಸಾಬ ಮುನಿಯಾರ ಓಡಿ ಪರಾರಿಯಾದರು. ಉಳಿದ ಮೂವರು ಸಿಕ್ಕಿ ಬಿದ್ದರು. ಇಸ್ಪಿಟ್ ಸಲಕರಣೆ ಹಾಗೂ ಹಣ ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿದರು. ಸಿಕ್ಕಿ ಬಿದ್ದವರನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page