ಶೌಚಕ್ಕೆ ಹೋಗುವಾಗ ಹುಷಾರು: ಇಲ್ಲಿ ಹಾವುಗಳಿವೆ!
ಶಿರಸಿ: ಶೌಚಾಲಯದ ಒಳಗೆ ಅಡಗಿ ಕೂತಿದ್ದ ನಾಗರಹಾವನ್ನು ಉರಗ ತಜ್ಞರು ಕಾಡಿಗೆ ಬಿಟ್ಟಿದ್ದಾರೆ. ಶಿರಸಿ ನಾರಾಯಣಗುರು ನಗರಕ್ಕೆ ಬಂದ ನಾಗರಹಾವು ಉಮೇಶ ಬಂಕಾಪುರ ಅವರ ಮನೆ ಹಿಂದಿನ ಶೌಚಾಲಯದಲ್ಲಿ ಅಡಗಿತ್ತು. ಗುರುವಾರ ಹಾವು ನೋಡಿದ ಕುಟುಂಬದವರು ಕಕ್ಕಾಬಿಕ್ಕಿಯಾದರು. ಶೌಚಾಲಯದ ಒಳಗೆ ಹಾವು…
ಅನಧಿಕೃತ ಗೈರು-ಕರ್ತವ್ಯದ ವೇಳೆ ಮದ್ಯಪಾನ: ಶಿಕ್ಷಕನಿಗೆ ಅಮಾನತು ಶಿಕ್ಷೆ!
ಯಲ್ಲಾಪುರ: ಈ ಹಿಂದೆ ನೌಕರರ ಸಂಘದ ತಾಲೂಕು ಅಧ್ಯಕ್ಷ, ಯುವಜನ ಸೇವಾ ಕ್ರೀಡಾಧಿಕಾರಿಯಾಗಿ ಸೇರಿ ವಿವಿಧ ಚಟುವಟಿಕೆಗಳಿಂದ ಗುರುತಿಸಿಕೊಂಡಿದ್ದ ಪ್ರಕಾಶ ನಾಯಕ ಅವರನ್ನು ವಿವಿಧ ಕಾರಣ ನೀಡಿ ಶಿಕ್ಷಣ ಇಲಾಖೆ ಅಮಾನತು ಮಾಡಿದೆ. ಕರ್ತವ್ಯದ ಅವಧಿಯಲ್ಲಿ ಮದ್ಯಪಾನ, ಶಾಲೆ ಒಳಗೆ ವ್ಯಸನಿಗಳ…
ಕಾಲು ಎಡವಿ ಬಿದ್ದು ಸಾವನಪ್ಪಿದ ವಿಕಲಚೇತನ
ಶಿರಸಿ: ಎಡಗಾಲಿನ ಅಂಗವಿಕಲತೆಯಿoದ ಬಳಲುತ್ತಿದ್ದ ಗಣಪತಿ ಸಿದ್ದಿ ಕಾಲು ಎಡವಿ ಬಿದ್ದು ಸಾವನಪ್ಪಿದ್ದಾರೆ. ಶಿರಸಿ ತಾಲೂಕಿನ ಕಕ್ಕಳ್ಳಿ ಕಾನಬಾಗಿಲುವಿನಲ್ಲಿ ವಾಸವಾಗಿದ್ದ ಗಣಪ ನಾಗು ಸಿದ್ದಿ (65) ಅಂಗವಿಕಲರು. ಅವರ ಕಾಲು ಸರಿಯಿಲ್ಲದ ಕಾರಣ ದೊಡ್ಡ ಪ್ರಮಾಣದ ಕೆಲಸ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ…
ತಂದೆ ಕೊಂದ ಮಗನಿಗೆ 5 ವರ್ಷ ಜೈಲು!
ಹೊನ್ನಾವರ: ತಂದೆ ಕೊಂದ ಮಗನಿಗೆ ಕಾರವಾರ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಕಾರವಾರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಡಿ ಎಸ್ ವಿಜಯಕುಮಾರ್ ಅವರು ತಮ್ಮ ಆದೇಶ ಪ್ರಕಟಿಸಿದರು. ಹೊನ್ನಾವರ ಕರ್ಕಿಗ್ರಾಮದ ತೊಪ್ಪಲಕೇರಿಯಲ್ಲಿ…
ಆ ಅಂಗವಿಕಲೆ ಅಪ್ರಾಪ್ತೆ: ಅದಾಗಿಯೂ ಕನಿಕರ ತೋರದ ವಿಕೃತ ಕಾಮಿಗೆ ಕಠಿಣ ಶಿಕ್ಷೆ!
ದಾಂಡೇಲಿ: ಅಪ್ರಾಪ್ತ ಅಂಗವಿಕಲೆಯ ಅಶ್ಲೀಲ ಫೋಟೋ ತೆಗೆದು ಅದನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಅತ್ಯಾಚಾರ ಮಾಡಿದ ಕ್ರೂರಿಗೆ ನ್ಯಾಯಾಲಯ 21 ವರ್ಷ ಜೈಲು ಹಾಗೂ 1.5 ಲಕ್ಷ ರೂ ದಂಡ ವಿಧಿಸಿದೆ. ಅಶ್ಲೀಲ ಫೋಟೋಗಳನ್ನು ಹಲವರಿಗೆ ರವಾನಿಸಿದಲ್ಲದೇ ವಾಟ್ಸಪ್ ಸ್ಟೇಟಸ್ ಹಾಕಿ ವಿಕೃತಿ…
ಸಂತ್ರಸ್ತ ಬಾಲಕಿಗೆ ನ್ಯಾಯ ಕೊಡಿಸಿದ ಸರ್ಕಾರಿ ವಕೀಲೆ: ಅತ್ಯಾಚಾರಿಗೆ 20 ವರ್ಷ ಜೈಲು!
ಶಿರಸಿ: ಮದುವೆ ಆಗುವುದಾಗಿ ಪುಸಲಾಯಿಸಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದಲ್ಲದೇ, ಆಕೆಯನ್ನು ಪರರಾಜ್ಯಕ್ಕೆ ಕಳುಹಿಸಲು ಪ್ರಯತ್ನಿಸಿದ್ದ ಸುನೀಲ ಬೋವಿವಡ್ಡರ್’ಗೆ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸಂತ್ರಸ್ತೆಗೆ ನ್ಯಾಯ ಕೊಡಿಸುವುದಕ್ಕಾಗಿ ಸರ್ಕಾರಿ ವಕೀಲೆ ತನಿಜಾ ಬಿ ಹೊಸಪಟ್ಟಣ ಅವರು 27…
ಖರೀದಿ ಆಸ್ತಿ | ಅಭಿವೃದ್ಧಿಗೆ ಹೋದವರಿಗೆ ಪೆಟ್ರೋಲ್ ಪ್ರೋಕ್ಷಣೆ!
ದಾಂಡೇಲಿ: ದಾಂಡೇಲಿ ಅಲೈಡ್ ಏರಿಯಾದಲ್ಲಿ ಭೂಮಿ ಖರೀದಿಸಿದ ಮೂವರಿಗೆ ಆತಂಕ ಎದುರಾಗಿದೆ. ತಾವು ಖರೀದಿಸಿದ ಜಾಗದಲ್ಲಿನ ಗಿಡ-ಗಂಟಿ ಸ್ವಚ್ಛ ಮಾಡಲು ತೆರಳಿದವರಿಗೆ ಅಕ್ಕಪಕ್ಕದ ಜನ ಆಗಮಿಸಿ ಪೆಟ್ರೋಲ್ ಸುರಿದಿದ್ದಾರೆ. `ಈ ಭೂಮಿ ಮೇಲೆ ಕಾಲಿಟ್ಟರೆ ಬೆಂಕಿ ಹಚ್ಚಿ ಕೊಲ್ಲುವೆ’ ಎಂದು ಬೆದರಿಕೆ…
ಈ ರಸ್ತೆ ತುಂಬಾ ಕಿಡಿಗೇಡಿಗಳ ಕಾಟ: ರಿಪೇರಿಗೆ ಬಂದ ಬೈಕ್ ಮೇಲೆ ಕಲ್ಲು!
ಕುಮಟಾ: ತದಡಿ-ಗಂಗಾವಳಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಲ್ಲಿನ ರಾಶಿ ಕಾಣುತ್ತಿದೆ. ಚೌಡಗೇರಿ ಬಳಿಯ ಗ್ಯಾರೇಜಿನಲ್ಲಿದ್ದ ಬೈಕನ್ನು ಕಿಡಿಗೇಡಿಗಳು ಕಲ್ಲಿನಿಂದ ಕುಟ್ಟಿದ್ದಾರೆ. ಮಂಗಳವಾರ ರಾತ್ರಿ ಕಿಡಿಗೇಡಿಗಳು ಈ ಮಾರ್ಗದಲ್ಲಿ ಸಂಚಾರ ನಡೆಸಿದ್ದು, ತಮ್ಮ ವಿದ್ವಂಸಕ ಕೃತ್ಯಗಳನ್ನು ಪ್ರದರ್ಶಿಸಿದ್ದಾರೆ. ಬುಧವಾರ ಬೆಳಗ್ಗೆ ರಸ್ತೆ ಮೇಲೆ ಚೀರೆಕಲ್ಲುಗಳು…
ಕಾಸು ಕದ್ದ ಕಳ್ಳಿಗೂ ಕನಿಕರ ತೋರಿದ ಶಾಸಕ ದಿನಕರ!
ಕುಮಟಾ: ಶಾಸಕ ದಿನಕರ ಶೆಟ್ಟಿ ಅವರ ಮನೆಯಲ್ಲಿ 80 ಸಾವಿರ ರೂ ಹಣ ಕಳ್ಳತನವಾಗಿರುವುದು ಸತ್ಯ. ಆದರೆ, ಕಾಸು ಕದ್ದ ಕಳ್ಳಿಯನ್ನು ಕ್ಷಮಿಸುವ ಮೂಲಕ ಅವರು ಉದಾರತನ ತೋರಿದ್ದಾರೆ. ಮಹಿಳೆಯೊಬ್ಬರು ಶಾಸಕ ದಿನಕರ ಶೆಟ್ಟಿ ಅವರ ಮನೆಗೆ ಆಗಮಿಸಿದ್ದರು. ಆರ್ಥಿಕ ಸಂಕಷ್ಟವಿರುವ…
ಕಾಸು ಕೊಟ್ಟರೂ ಮುಂದೆ ಚಲಿಸದ ಬೆಂಗಳೂರು ಬಸ್ಸು!
ಶಿರಸಿ: ಶಿರಸಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನ ಟಯರ್ ಸ್ಪೋಟವಾಗಿದೆ. ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಬುಧವಾರ ಬೆಳಗ್ಗೆ 8.30ಕ್ಕೆ ಶಿರಸಿಯಿಂದ ಬೆಂಗಳೂರಿಗೆ ಬಸ್ಸು ಹೊರಟಿತು. ಸಿದ್ದಾಪುರ, ಸಾಗರ, ಕಡೂರು, ಶಿವಮೊಗ್ಗ ಸೇರಿ ನಾನಾ ಭಾಗಗಳಿಗೆ ತೆರಳುವ ಪ್ರಯಾಣಿಕರು ಈ…







