6
ಈತನಿಗೆ ಜೂಜಾಟವೂ ಒಂದು ವ್ಯಾಪಾರ!

ಶಿರಸಿ: ಬಚಗಾಂವ್ ಬಸ್ ನಿಲ್ದಾಣದ ಎದುರು ಮಟ್ಕಾ ಆಡಿಸುತ್ತಿದ್ದ ಈಶ್ವರ ಬೋವಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಹುಸುರಿ ಬಸಳೆಕೊಪ್ಪದ ಈಶ್ವರ ಪಕ್ಕೀರಪ್ಪ ಬೋವಿ ನ 16ರಂದು ಬಸ್ ನಿಲ್ದಾಣದ ಬಳಿ ಬರುವವರ ಬಳಿ ಮಟ್ಕಾ ಆಡುವಂತೆ ಹೇಳುತ್ತಿದ್ದ. ಅದೃಷ್ಟದ ಆಟ…

ಅಧಿಕಾರಿಗಳ ಅಸಡ್ಡೆ ವಿರುದ್ಧ ಆಕ್ರೋಶ!

ಯಲ್ಲಾಪುರ: ಜೋಡುಕೆರೆ ಬಳಿ ಅನಧಿಕೃತ ಮೀನು ಮಾರಾಟದ ಬಗ್ಗೆ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಮನವಿ ನೀಡಿದ ಒಂದೇ ದಿನದಲ್ಲಿ ಅಧಿಕಾರಿಗಳು ಅದನ್ನು ತೆರವು ಮಾಡಿದ್ದಾರೆ. ಆದರೆ, ನಾಲ್ಕು ತಿಂಗಳ ಹಿಂದೆಯೇ ತಟಗಾರ ಕ್ರಾಸಿನ ಬಳಿ ಅನಧಿಕೃತ ಮೀನು ಮಾರಾಟದ…

ಹಳೆ ದ್ವೇಷ: ಹೊಸ ಹೊಡೆದಾಟ!

ಹೊನ್ನಾವರ: ಮಾಳ್ಕೊಡ್ ಹರಕನಳ್ಳಿಯ ಗಜೇಂದ್ರ ಅಂಬಿಗ ಹಾಗೂ ಗಣಪತಿ ಅಂಬಿಗರ ನಡುವೆ ಜಗಳವಾಗಿದೆ. ಈ ಜಗಳ ಹೊಡೆದಾಟಕ್ಕೂ ಕಾರಣವಾಗಿದೆ. ನ 1ರಂದು ಗಜೇಂದ್ರ ಕುಪ್ಪಯ್ಯ ಅಂಬಿಗ ತಮ್ಮ ತಾಯಿ ಜೊತೆ ನಡೆದು ಹೋಗುತ್ತಿದ್ದಾಗ ಅವರನ್ನು ಅಡ್ಡಗಟ್ಟಿದ ಗಣಪತಿ ನಾಗಪ್ಪ ಅಂಬಿಗ ನಿಂದಿಸಿದ್ದಾರೆ.…

ಬಳಕೆಗೆ ಬಾರದ ಬೋರ್‌ವೆಲ್’ಗೆ ಮರು ಜೀವ

ಯಲ್ಲಾಪುರ: ರವೀಂದ್ರನಗರದಲ್ಲಿ ಉಪಯೋಗಕ್ಕಿಲ್ಲದ ಬೋರ್‌ವೆಲ್’ಗೆ ಪ ಪಂ ಅಧಿಕಾರಿಗಳು ಮರುಜೀವ ನೀಡಿದ್ದಾರೆ. ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಬೋರ್‌ವೆಲ್ ಬಳಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಮುಂಡಗೋಡ ರಸ್ತೆಯ ಆಂಜಿನೇಯ ದೇವಾಲಯ ಪಕ್ಕ ಹಳೆಯ ಕಾಲದಿಂದಲೂ ಬೋರ್‌ವೆಲ್ ಇದ್ದು, ಅದು ಸುಸ್ಥಿತಿಯಲ್ಲಿರಲಿಲ್ಲ. ಅಲ್ಲಿನ…

ಕಲಕೇರಿ ಶಾಲೆ ಬಳಿ ಮಟ್ಕಾ ಜೋರು!

ಕುಮಟಾ: ವಾಲಗಳ್ಳಿಯ ಕಲಕೇರಿ ಶಾಲೆ ಬಳಿ ಮಟ್ಕಾ ಆಡಿಸುತ್ತಿದ್ದ ಬೇಟೆ ಮಾದೇವ ಗೌಡ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದು, ಪ್ರಕರಣ ದಾಖಲಾಗಿದೆ. ಇಲ್ಲಿನ ಅಂಗಡಿಯಲ್ಲಿ ಕೆಲಸ ಮಾಡುವ ಬೇಟೆ ಗೌಡ ಅದೃಷ್ಟದ ಆಟ ಎಂದು ಜನರಿಂದ ಹಣ ಸಂಗ್ರಹಿಸುತ್ತಿದ್ದ. ಪೊಲೀಸ್ ನಿರಿಕ್ಷಕಿ ಸಾವಿತ್ರಿ…

ನಗರಸಭೆ ನೌಕರನಿಗೂ ಮಟ್ಕಾ ಆಡಿಸುವ ಚಟ!

ದಾಂಡೇಲಿ: ನಗರಸಭೆಯಲ್ಲಿ ಕೆಲಸ ಮಾಡುವ ದತ್ತಾತ್ರೇಯ ನಾಯ್ಕ ಬಿಡುವಿನ ವೇಳೆ ಮಟ್ಕಾ ಆಡಿಸಿ ಹಣಗಳಿಸುತ್ತಾರೆ! ಹಳೆದಾಂಡೇಲಿಯ ಫಾರೆಸ್ಟರ್ ಏರಿಯಾದಲ್ಲಿ ಮನೆ ಮಾಡಿಕೊಂಡಿರುವ ದತ್ತಾತ್ರೇಯ ಗಂಗಾಧರ ನಾಯ್ಕ ನಗರಸಭೆ ಕೆಲಸ ಮುಗಿಸಿ ಮಧ್ಯಾಹ್ನ ಊಟದ ವೇಳೆ ಮಟ್ಕಾ ಆಡಿಸುವಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ.…

ರಸ್ತೆ ಮೇಲೆ ಹರಿದ ಮನೆ ತ್ಯಾಜ್ಯ: ಜಡೆ ಜಗಳದಲ್ಲಿ ಹೊಡೆತ ತಿಂದವ ಅಮಾಯಕ!

ಭಟ್ಕಳ: ಮನೆಯಲ್ಲಿ ಬಳಸಿದ ನೀರನ್ನು ರಸ್ತೆ ಬಿಡುತ್ತಿದ್ದ ಬಗ್ಗೆ ಪ್ರಶ್ನಿಸಿದ ಕಾರಣ ಎದುರು ಮನೆಯವರು ಹೊಡೆತ ತಿಂದಿದ್ದಾರೆ! ಮುಟ್ಟಳ್ಳಿ ಬಳಿಯ ತೆಲಂದದಲ್ಲಿ ವಸಂತ ಮಾಸ್ತಪ್ಪ ನಾಯ್ಕ ಅವರ ಮನೆಯಲ್ಲಿ ಬಳಸಿದ ನೀರನ್ನು ಜನ ಓಡಾಡುವ ರಸ್ತೆ ಮೇಲೆ ಬಿಡುತ್ತಾರೆ. ಈ ಬಗ್ಗೆ…

ಭೂ ವಿವಾದ: ಅಕ್ಕ-ಪಕ್ಕದವರ ನಡುವೆ ಹೊಡೆದಾಟ!

ಹೊನ್ನಾವರ: ಕೆಳಗನೂರು ಗ್ರಾಮದಲ್ಲಿ ಭೂಮಿ ಹೊಂದಿದ ನಿತೇಶ ನಾಗೇಶ ನಾಯ್ಕ ಹಾಗೂ ನಾಜಗಾರದ ವಿವೇಕ ವಿಠ್ಠೋಬ ನಾಯ್ಕ, ಕಿರಣ ವಿಠ್ಠೋಬ ನಾಯ್ಕ ನಡುವೆ ಹೊಡೆದಾಟ ನಡೆದಿದೆ. ಭೂಮಿಯ ಸುತ್ತಲು ಕಪೌಂಡ್ ನಿರ್ಮಾಣ ಹಾಗೂ ಕಾಲವೆ ವಿಷಯವಾಗಿ ನಡೆದ ವಾಗ್ವಾದ ಹೊಡೆದಾಟಕ್ಕೆ ತಿರುಗಿದೆ.…

ಮತ್ಸ್ಯಕನ್ಯೆಯರ ವಿರುದ್ಧ ಉಗ್ರ ಹೋರಾಟ: ಅನಧಿಕೃತ ಮೀನು ಮಾರಾಟಕ್ಕೆ ತಡೆ!

ಯಲ್ಲಾಪುರ: ಜೋಡಕೆರೆ ಬಳಿ ಅನಧಿಕೃತವಾಗಿ ಮೀನು ಮಾರಾಟ ನಡೆಯುತ್ತಿರುವ ಬಗ್ಗೆ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆ ಶನಿವಾರ ಮೀನು ಮಾರಾಟಗಾರರನ್ನು ಅಲ್ಲಿಂದ ಎಬ್ಬಿಸಿದ ಪ ಪಂ ಸಿಬ್ಬಂದಿ ಆ ಪ್ರದೇಶವನ್ನು ಸ್ವಚ್ಛಗೊಳಿಸಿದರು. ಯಲ್ಲಾಪುರ ಪಟ್ಟಣದಲ್ಲಿ…

ತರಬೇತಿ ವೇಳೆ ಕುಸಿದುಬಿದ್ದ ಶಿಕ್ಷಕ: ಆಂಬುಲೆನ್ಸ್ ಸೇವೆಗಾಗಿ ಎಂಟು ಕಡೆ ಅಲೆದಾಟ!

ಕಾರವಾರ: ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದ ಸಮೂಹ ಸಂಪನ್ಮೂಲ ವ್ಯಕ್ತಿ ನಾಸೀರ ಖಾನ್ ಅಬ್ದುಲ್ ಕರಂ ಎದೆನೋವಿನಿಂದ ಕುಸಿದುಬಿದ್ದಿದ್ದು, ಎಂಟು ಆಂಬುಲೆನ್ಸ್’ಗೆ ಕರೆ ಮಾಡಿದರೂ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಕ್ಕಿಲ್ಲ. ಅರ್ದ ತಾಸು ಕಳೆದ ನಂತರ 9ನೇ ಆಂಬುಲೆನ್ಸ್ ಮೂಲಕ ನಾಸೀರ್ ಖಾನ್…

You cannot copy content of this page