OTP ಕೊಟ್ಟು ಹಣ ಕಳೆದುಕೊಂಡ ರಿಕ್ಷಾ ಚಾಲಕ!
ಜೊಯಿಡಾ: ಕೆನರಾ ಬ್ಯಾಂಕ್ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯ ಮಾತು ಕೇಳಿದ ರಿಕ್ಷಾ ಚಾಲಕ ರಾಮದಾಸ ಮಿರಾಶಿ OTP ಹೇಳಿ 62 ಸಾವಿರ ರೂ ಹಣ ಕಳೆದುಕೊಂಡಿದ್ದಾರೆ. ರಾಮನಗರದ ಕೃಷ್ಣಾಗಲ್ಲಿರ ರಾಮದಾಸ ಮಿರಾಶಿ ಅವರ ಮೊಬೈಲಿಗೆ ಅಕ್ಟೊಬರ್ 18ರಂದು ಬ್ಯಾಂಕ್ ಖಾತೆ…
ಖಾಲಿ ಚೆಕ್ ಕೊಡುವ ಮುನ್ನ ಹುಷಾರು: ಕಾಸು ಕಿತ್ತು ಕೇಸು ಹಾಕಿಸಿಕೊಂಡ ವ್ಯಾಪಾರಿ!
ಕುಮಟಾ: ಬರ್ಗಿಯ ಸಂಕೇತ ನಾಯ್ಕ ಟಿಪ್ಪರ್ ಖರೀದಿಗಾಗಿ ಅದೇ ಊರಿನ ರವಿಕುಮಾರ ನಾಯ್ಕ ಎಂಬಾತರಿಗೆ 6.20 ಲಕ್ಷ ರೂ ಹಣ ನೀಡಿದ್ದು, ಭದ್ರತೆಗೆ ನೀಡಿದ ಚೆಕ್ ದುರುಪಯೋಗವಾದ ಕಾರಣ ಕೋರ್ಟು-ಕಚೇರಿ ಅಲೆದಾಟ ನಡೆಸುತ್ತಿದ್ದಾರೆ. ಸಂಕೇತ ನಾಗೇಶ ನಾಯ್ಕ ಅವರು ರವಿಕುಮಾರ ಪಾಂಡುರoಗ…
ರಸ್ತೆ ಸುರಕ್ಷತೆಗೆ ಅಧಿಕಾರಿಗಳ ಅಸಡ್ಡೆ: ಜಿಲ್ಲಾಧಿಕಾರಿಗೆ ದೂರು
ಕುಮಟಾ: ನಿತ್ಯ ಅಪಘಾತವಾಗುವ ಸ್ಥಳದ ಬಗ್ಗೆ ಮುನ್ನಚ್ಚರಿಕೆವಹಿಸಿ ನಾಮಫಲಕ ಅಳವಡಿಸುವಂತೆ ಮನವಿ ಮಾಡಿದರೂ ನಿರ್ಲಕ್ಷಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರವರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದಾರೆ. ಅಘನಾಶಿನಿ ಬಳಿಯ ಜನತಾ ಪ್ಲಾಟಿನ ಶಾಲಾ ಆವರಣ ಹಾಗೂ ರಸ್ತೆ…
ಬಸ್ ಪಂಚರ್ ತೆಗೆದ ಗಸ್ತು ಪೊಲೀಸರು!
ಕುಮಟಾ: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ಸು ಪಂಚರ್ ಆಗಿದ್ದು, ಅದೇ ಮಾರ್ಗದಲ್ಲಿ ಸಂಚರಿಸುತ್ತ ಪೊಲೀಸರು ಬಸ್ಸಿನ ಚಕ್ರ ಬದಲಿಸಿ ಮಕ್ಕಳು ಕತ್ತಲಾಗುವ ಮುನ್ನ ಮನೆ ಸೇರುವಂತೆ ಮಾಡಿದರು. ಆ ಕ್ಷಣಕ್ಕೆ ಪೊಲೀಸರು ಬಾರದೇ ಇದ್ದಿದ್ದರೆ ರಾತ್ರಿ 9 ಗಂಟೆ ಆದರೂ ಮಕ್ಕಳು…
ಬೀದಿ ದೀಪಕ್ಕಾಗಿ ಬೀದಿಗಿಳಿದ ಬಿಜೆಪಿಗರು!
ದಾಂಡೇಲಿ: ಬೀದಿ ದೀಪಗಳ ನಿರ್ವಹಣೆ ಸರಿಯಾಗಿಲ್ಲ ಎಂದು ಆರೋಪಿಸಿ ನಗರಸಭೆ ಬಿಜೆಪಿ ಸದಸ್ಯರಿಬ್ಬದು ನಗರಸಭೆ ಪ್ರವೇಶ ದ್ವಾರದಲ್ಲಿ ಬುಧವಾರ ಪ್ರತಿಭಟಿಸಿದರು. ನಗರಸಭೆಯ ಸದಸ್ಯ ಬುದವಂತಗೌಡ ಪಾಟೀಲ್ ಮತ್ತು ದಶರಥ ಬಂಡಿವಡ್ಡರ ಪ್ರತಿಭಟಿಸಿದವರು. `ನಗರದಲ್ಲಿ ಬೀದಿ ದೀಪಗಳ ನಿರ್ವಹಣೆ ಸರಿಯಾಗಿಲ್ಲ. ರಾತ್ರಿ ವೇಳೆ…
ಕೊಲೆಗೆ ಯತ್ನಿಸಿದವನಿಗೆ ಜೈಲು
ಮುಂಡಗೋಡು: ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದವನಿಗೆ ನ್ಯಾಯಾಲಯ 3 ವರ್ಷ ಜೈಲು ಹಾಗೂ 8 ಸಾವಿರ ರೂ ದಂಡ ವಿಧಿಸಿದೆ. ಸಂತ್ರಸ್ತರಿಗೆ 5 ಸಾವಿರ ರೂ ಪರಿಹಾರ ವಿತರಿಸುವಂತೆಯೂ ಸೂಚಿಸಿದೆ. 2022ರ ಅಗಸ್ಟ 18ರಂದು ಶ್ಯಾಮಪ್ರಸಾದ ಕುಟ್ಟಪ್ಪ ಎಂಬಾತ ದಿವಾಕರನ್ ರಾಘವನ್ ಎಂಬಾತರ…
ಸುಂದರ ಗೂಡಿಗೆ ಕೊಳ್ಳಿ ಇಟ್ಟವರಾರು? ಅಭಿಜಿತ್ ಮೇಲೆ ಎಲ್ಲರ ಅನುಮಾನ!
ಕುಮಟಾ: ಪ್ರವಾಸೋದ್ಯಮ ಚಟುವಟಿಕೆ ನಡೆಸಲು ಜಿಲ್ಲೆಗೆ ಬಂದ ಬೆಂಗಳೂರಿನ ಯುವತಿಯ ಉದ್ದಿಮೆಗೆ ಬೆಂಕಿ ಬಿದ್ದಿದೆ. ಎರಡು ತಿಂಗಳ ಹಿಂದೆ ಹೋಂ ಸ್ಟೇ ಶುರು ಮಾಡಿದ್ದ ಅವರ ಟೆಂಟ್ ಹೌಸ್’ಗಳಿಗೆ ಕಿಡಿಗೇಡಿಯೊಬ್ಬರು ಬೆಂಕಿ ಹಚ್ಚಿದ್ದು, ದುಷ್ಕರ್ಮಿಗಳ ಕಾಟಕ್ಕೆ ಅವರು ನಲುಗಿದ್ದಾರೆ! ಬೆಂಗಳೂರಿನ ಬನ್ನೆರುಘಟ್ಟ…
ದೀಪಾವಳಿ ಆಫರ್ ನೀಡಿದವನ ಮೇಲೆ ಪೊಲೀಸ್ ದೂರು!
ಹಳಿಯಾಳ: 1 ಸಾವಿರ ರೂಪಾಯಿಗೂ ಹೆಚ್ಚು ಖರೀದಿ ಮಾಡಿದವರಿಗೆ `ಲಕ್ಕಿ ಡ್ರಾ’ ಬಹುಮಾನ ಘೋಷಿಸಿದ್ದ `ರಾಯಲ್ ಸಿಟಿ ಮಾರ್ಟಿ’ನ ಮಾಲಕ ಹಾಗೂ ವ್ಯವಸ್ಥಾಪಕರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ಟೊಬರ್ 21ರಂದು ಸಂಜೆ 6 ಗಂಟೆಗೆ `ರಾಯಲ್ ಸಿಟಿ…
ಅರಣ್ಯಾಧಿಕಾರಿ ನಡೆಗೆ ಅತಿಕ್ರಮಣದಾರರ ಆಕ್ರೋಶ
ಸಿದ್ದಾಪುರ: ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಗಳಲ್ಲಿ ಅಸಮರ್ಪಕ ಜಿಪಿಎಸ್ ಆಗಿರುವ ಕುರಿತು ಅತಿಕ್ರಮಣದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡ ರೈತರ ಮೇಲೆ ಅರಣ್ಯ ಸಿಬ್ಬಂದಿ ದಬ್ಬಾಳಿಕೆ ನಡೆಸುತ್ತಿರುವ ಬಗ್ಗೆಯೂ ಅಸಮಧಾನ ವ್ಯಕ್ತಪಡಿಸಿದ್ದಾರೆ. ಗುರುವಾರ ಬಾಲಭವನದಲ್ಲಿ ನಡೆದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಸಭೆಯಲ್ಲಿ…
ಶಿರಸಿಗೂ ವ್ಯಾಪಿಸಿದ ಲಿವಿಂಗ್ ಟೂಗೆದರ್: ಆಂಟಿ ಹಿಂದೆ ಹೋದವ ಆತ್ಮಹತ್ಯೆ!
ಶಿರಸಿ: ವಿದೇಶಗಳಲ್ಲಿ ಸಾಮಾನ್ಯವಾಗಿರುವ ವಿವಾಹವಾಗದೇ ಗಂಡು-ಹೆಣ್ಣು ಒಟ್ಟಿಗೆ ಬದುಕುವ `ಲಿವಿಂಗ್ ಟೂಗೆದರ್’ ಸಂಸ್ಕೃತಿ ಶಿರಸಿಗೂ ವ್ಯಾಪಿಸಿದೆ. ವಯಸ್ಸಿನಲ್ಲಿ ತನಗಿಂದ ದೊಡ್ಡವಳಾದ ಹಾಗೂ ಇಬ್ಬರು ದೊಡ್ಡ ಮಕ್ಕಳನ್ನು ಹೊಂದಿದ ಮಹಿಳೆ ಜೊತೆ ಸಂಬoಧ ಹೊಂದಿದ್ದ ವ್ಯಕ್ತಿಯೊಬ್ಬ ಆಕೆಯ ನೆನಪಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಾರವಾರದ…







