ಸೇವೆ ಜೊತೆ ಸಂಬಳ: ಇಡಗುಂಜಿ ದೇಗುಲ ಉದ್ಯೋಗಕ್ಕೆ ಇನ್ನೊಂದು ಅವಕಾಶ!
ಹೊನ್ನಾವರ: ಪ್ರಸಿದ್ಧ ಇಡಗುಂಜಿ ದೇವಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಯೋಗ್ಯರ ಹುಡುಕಾಟ ನಡೆದಿದ್ದು, ಈವರೆಗೂ ಅರ್ಜಿ ಸಲ್ಲಿಸದೇ ಇರುವವರಿಗೆ ಇನ್ನೊಂದು ಅವಕಾಶ ನೀಡಲಾಗಿದೆ. ವಿನಾಯಕ ದೇವಾಲಯದಲ್ಲಿ ತಾತ್ಕಾಲಿಕವಾಗಿ ಗೌರವಧನದ ಮೇಲೆ ಕೆಲಸ ಮಾಡಲು ಮಣಿಗಾರರು, ಗುಮಾಸ್ತರು, ಮುಖ್ಯ ಅಡುಗೆ ತಯಾರಕರು, ಸಹಾಯಕ…
ಹೋರಾಟಗಾರರಿಗೆ ಪ್ರತಿಭಟನೆಯ ಹಕ್ಕಿಲ್ಲ!
`ವಿವಿಧ ಕಚೇರಿಗಳಲ್ಲಿ 10 ವರ್ಷಗಳಿಂದ ಬೀಡು ಬಿಟ್ಟಿರುವ ಸರ್ಕಾರಿ ನೌಕರರನ್ನು ಕೂಡಲೇ ವರ್ಗಾಯಿಸಬೇಕು’ ಎಂದು ಆಗ್ರಹಿಸಿ ಭಟ್ಕಳದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರಿಗೆ ತಾಲೂಕು ಆಡಳಿತ ನೋಟಿಸ್ ನೀಡಿದೆ. ಇಲ್ಲಿನ ಹಳೆ ತಹಶೀಲ್ದಾರ್ ಕಚೇರಿ ಎದುರು ರಾಜ್ಯ ಮಾಹಿತಿ ಹಕ್ಕು ಕಾಯ್ದೆ ಪದಾಧಿಕಾರಿಗಳು…
ಜಿಂಕೆ ಹಿಂದೆ ಹೋದವನಿಗೆ ಜೈಲು: ಅರಣ್ಯ ಸಿಬ್ಬಂದಿಗೆ ಸಿಕ್ಕಿದ್ದು ಕೊಂಬು!
ದಾoಡೇಲಿ: ಗಾಂಧಿ ನಗರದಲ್ಲಿನ ಮನೆ ಮೇಲೆ ಶುಕ್ರವಾರ ದಾಳಿ ನಡೆಸಿದ ಅರಣ್ಯ ಸಿಬ್ಬಂದಿ ಪಕ್ರುಸಾಬ ಎಂಬಾತನನ್ನು ಬಂಧಿಸಿದ್ದು, ಆತ ದಾಸ್ತಾನು ಇರಿಸಿಕೊಂಡಿದ್ದ ವನ್ಯಜೀವಿ ಉತ್ಪನ್ನಗಳನ್ನು ವಶಕ್ಕೆ ಪಡೆದಿದ್ದಾರೆ. ಪಕ್ರುಸಾಬನ ಮನೆಯಲ್ಲಿ ಜಿಂಕೆ ಹಾಗೂ ಕಾಡು ಕೋಣದ ಕೊಂಬುಗಳು ದೊರೆತಿವೆ. ಆರೋಪಿಯನ್ನು ಅರಣ್ಯ…
ಶಿವಾಜಿ ಶಾಲೆ ಮಕ್ಕಳು ಓದಿನಲ್ಲಿಯೂ ಮುಂದೆ.. ಓಡುವುದರಲ್ಲಿಯೂ ಮುಂದೆ!
ಕಾರವಾರ: ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಶಿವಾಜಿ ಬಾಲ ಮಂದಿರ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕರ ವಿಭಾಗದಲ್ಲಿ ಅನುಷ್ ಎ ನಾಯ್ಕ 200 ಮೀ ಓಟದಲ್ಲಿ ದ್ವಿತೀಯ, ಚಕ್ರ ಎಸೆತದಲ್ಲಿ ತೃತೀಯ ಬಹುಮಾನ…
ಕಿರಾಣಿ ಅಂಗಡಿಯಲ್ಲಿಯೂ ಸಿಗುತ್ತೆ ಸರಾಯಿ!
ಸಿದ್ದಾಪುರ: ಬಳ್ಪಟ್ಟೆಯ ಕಿರಾಣಿ ಅಂಗಡಿಯಲ್ಲಿ ಸರಾಯಿ ಮಾಡುತ್ತಿದ್ದ ಸುಧಾಕರ ದ್ಯಾವಾ ನಾಯ್ಕ ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಸೆ 20ರಂದು ಪಿಐ ಕುಮಾರ ಕೆ ಬಳ್ಪಟ್ಟೆಗೆ ಹೋದಾಗ ಸುಧಾಕರ್ ನಾಯ್ಕ ಅಲ್ಲಿ ಸರಾಯಿ ಮಾರಾಟ ಮಾಡುತ್ತಿದ್ದ. ಆಗ ಪೊಲೀಸರು `ಸರಾಯಿ…
ಕಿಡ್ನಿ ಕೈ ಕೊಟ್ಟಾಗ ಹೆದರಲಿಲ್ಲ.. ಲಿವರ್ ಹಾಳಾದಾಗ ಬಗ್ಗಲಿಲ್ಲ.. ಜ್ವರಕ್ಕೆ ಬೆದರಿ ಜೀವಬಿಟ್ಟ ಸತೀಶ!
ಶಿರಸಿ: ವಿಪರೀತ ಸರಾಯಿ ಕುಡಿಯುತ್ತಿದ್ದ ಸತೀಶ್ ಬೋವಿ ಎಂಬಾತ ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು ಇದರೊಂದಿಗೆ ಜ್ವರವೂ ಬಂದ ಕಾರಣ ಅದನ್ನು ಸಹಿಸಿಕೊಳ್ಳಲಾಗದೇ ಕುತ್ತಿಗೆಗೆ ಚಾಕು ಇರಿದುಕೊಂಡು ಸಾವನಪ್ಪಿದ್ದಾನೆ. ನಿರ್ನಳ್ಳಿ ಹೊಸನಗರದ ಸತೀಶ ಹನುಮಂತ ಬೋವಿ (38) ಎಂಬಾತ ಕೂಲಿ…
ಮಾನವ ಜನ್ಮ ದೊಡ್ಡದು: ನ್ಯಾ ದಿವ್ಯಾಶ್ರಿ
ಕಾರವಾರ: `ಮಾನವ ಜನ್ಮ ದೊಡ್ಡದು. ಅದನ್ನು ಹಾನಿ ಮಾಡಬೇಡಿ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಎಂ ಹೇಳಿದರು. ಕ್ರಿಮ್ಸ್ ವಿಜ್ಞಾನ ಸಂಸ್ಥೆಯಲ್ಲಿ ನಡೆದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ಮತ್ತು ಜಾಗೃತಿ…
ನಡುರಾತ್ರಿವರೆಗೂ ಇಸ್ಪಿಟ್ ಆಟ: 11 ಎಲೆಮಾನವರ ಮೇಲೆ ಪೊಲೀಸರ ಬಾಣ!
ಸಿದ್ದಾಪುರ: ತಾರಿಘಟಕಿಯ ವೆಂಕಟ್ರಮಣ ಪ್ರಭಾಕರ ಹೆಗಡೆ ಅವರ ಮನೆ ಮುಂದೆ ಇಸ್ಪಿಟ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 75 ವರ್ಷದ ವೃದ್ಧನನ್ನು ಸೇರಿ ಒಟ್ಟು 11 ಜನ ಸಿಕ್ಕಿಬಿದ್ದಿದ್ದಾರೆ. ಇಸ್ಪಿಟ್ ಆಟಕ್ಕೆ ಅವಕಾಶ ನೀಡಿದ ಸರ್ಕೋಳ್ಳಿ ತಾರಿಘಟಗಿಯ…
ಕೃಷಿಭೂಮಿ ಅತಿಕ್ರಮಿಸಿ ಲೇಔಟ್ ನಿರ್ಮಾಣ: ರಸ್ತೆ ಅಳತೆ ನಡೆಸಿದ ಲೋಕಾಯುಕ್ತರು!
ವಿವಿಧ ಅಧಿಕಾರಿಗಳ ಮೇಲೆ ದಾಳಿ ನಡೆಸುತ್ತಿದ್ದ ಲೋಕಾಯುಕ್ತರು ಶುಕ್ರವಾರ ಯಲ್ಲಾಪುರದ ಕಲ್ಮಠಕ್ಕೆ ಆಗಮಿಸಿ ಅಲ್ಲಿನ ಕೃಷಿಭೂಮಿ, ಲೇಔಟ್ ಹಾಗೂ ರಸ್ತೆ ಮಾರ್ಗಗಳ ಅಳತೆ ಪಡೆದರು! ನಕ್ಷೆಗೆ ವ್ಯತಿರಿಕ್ತವಾಗಿ ಲೇಔಟ್ ನಿರ್ಮಿಸಿ ಕೃಷಿಭೂಮಿ ಮಾಲಕರಿಗೆ ಅನ್ಯಾಯ ಮಾಡಿದ ಕುರಿತು ದಾಖಲಾದ ದೂರಿಗೆ ಸಂಬoಧಿಸಿ…
ಸುಸಜ್ಜಿತ ಆಸ್ಪತ್ರೆ ಇಲ್ಲದೇ ಇನ್ನೊಂದು ಸಾವು!
ಹೊನ್ನಾವರ: ಬೈಕಿನಿಂದ ಬಿದ್ದು ಗಾಯಗೊಂಡಿದ್ದ ಯಮುನಾ ನಾಯ್ಕ ಎಂಬಾತರು ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನಪ್ಪಿದ್ದಾರೆ. ಸೆ 19ರ ಸಂಜೆ ದತ್ತಾತ್ರೇಯ ಹನುಮಂತ ನಾಯ್ಕ ಎಂಬಾತರು ಕಲ್ಲಾರೆ ಹನುಮಂತಕಟ್ಟೆಯಿoದ ಮಾಗೋಡು ಶಾಲೆ ಕಡೆ ಎಂಬಾತರು ಬೈಕ್ ಓಡಿಸುತ್ತಿದ್ದರು. ಯಮೂನಾ ಮಂಜುನಾಥ…







