ರಸ್ತೆಯೇ ಮಾಯ.. ಎಲ್ಲವೂ ಹೊಂಡಮಯ..!
ಸದಾಶಿವಗಡ-ಔರಾದ ರಾಜ್ಯ ಹೆದ್ದಾರಿಯ ಕುಂಬಾರವಾಡಾ-ಜೋಯಿಡಾ ಅಣಶಿವರಗೆ ಮಳೆಯಿಂದಾಗಿ ಸಂಪೂರ್ಣ ಹಾಳಾಗಿದೆ. ಇದರಿಂದ ನಿತ್ಯ ಓಡಾಡುವವರಿಗೆ ಸಮಸ್ಯೆಯಾಗಿದೆ. ರಸ್ತೆಯ ಯಾವ ಕಡೆ ನೋಡಿದರೂ ಹೊಂಡ ಕಾಣುತ್ತಿದ್ದು ಬೈಕ್ ಸವಾರರು ಒಂದು ಹೊಂಡ ತಪ್ಪಿಸಿದರೆ ಇನ್ನೊಂದು ಹೊಂಡಕ್ಕೆ ಬೀಳುತ್ತಿದ್ದಾರೆ. ರಾತ್ರಿ ವೇಳೆ ಸಂಚರಿಸುವವರ ಬೈಕಿನಿಂದ…
ಲೋಕಾಯುಕ್ತ ಅಧಿಕಾರಿಗಳ ಬಸ್ ಸಂಚಾರ!
ಅoಕೋಲಾ: ಬಸ್ ನಿಲ್ದಾಣ ಗಬ್ಬೆದ್ದಿರುವ ಬಗ್ಗೆ ಸಾರ್ವಜನಿಕರು ದೂರಿದ ಹಿನ್ನಲೆ ಲೋಕಾಯುಕ್ತ ಅಧಿಕಾರಿಗಳು ಬಸ್ ನಿಲ್ದಾಣಕ್ಕೆ ಆಗಮಿಸಿ ಅಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿಯ ವರ್ತನೆ ಗಮನಿಸಿದ್ದಾರೆ. ಬಸ್ ನಿಲ್ದಾಣದ ಒಳ ಹಾಗೂ ಹೊರಗೆ ಎಲ್ಲಡೆ ತ್ಯಾಜ್ಯ ಬಿದ್ದಿರುವ ಬಗ್ಗೆ ಸಾರ್ವಜನಿಕರು ದೂರಿದ್ದರು.…
ಗುಡ್ಡ ಕುಸಿದು ಎರಡು ತಿಂಗಳಾದರೂ ತೆರವಾಗದ ಮಣ್ಣು: ಜಿಲ್ಲಾಡಳಿತದ ವಿರುದ್ಧ ಜನಾಕ್ರೋಶ
ಕುಮಟಾ – ಅಂಕೋಲಾ ಮಾರ್ಗದ ಬರ್ಗಿಯಲ್ಲಿ ಗುಡ್ಡ ಕುಸಿದು ಎರಡು ತಿಂಗಳಾದರೂ ಮಣ್ಣು ತೆರವು ಕಾರ್ಯ ನಡೆದಿಲ್ಲ. ಆ ಭಾಗದ ಸಂಚಾರಕ್ಕೆ ಅವಕಾಶ ಕಲ್ಪಿಸದ ಹಿನ್ನಲೆ ಜನಾಕ್ರೋಶ ವ್ಯಕ್ತವಾಗಿದೆ. ಜು 16ರಂದು ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿತ ಉಂಟಾಗಿ ಒಟ್ಟು 8…
ಅಸ್ತಮಾದಿಂದ ಸಾವನಪ್ಪಿದ ಹೋಟೆಲ್ ಕಾರ್ಮಿಕ
ಅಂಕೋಲಾ: ಹೋಟೆಲ್ ಕೆಲಸ ಮಾಡಿಕೊಂಡಿದ್ದ ಕಂತ್ರಿಯ ನಾಗರಾಜ ವೆಂಕಟೇಶ ಶೆಟ್ಟಿ (65) ಅಸ್ತಮಾ ಖಾಯಿಲೆಯಿಂದ ಸಾವನಪ್ಪಿದ್ದಾರೆ. ಕಳೆದ ಒಂದುವರೆ ವರ್ಷದ ಹಿಂದೆ ಅವರಿಗೆ ಅಸ್ತಮಾ ಕಾಣಿಸಿಕೊಂಡಿತ್ತು. ಅದಾದ ನಂತರ ಅವರು ಅನಾರೋಗ್ಯದ ಹಿನ್ನಲೆ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಖಾಸಗಿ ಆಸ್ಪತ್ರೆಗೆ ದಾಖಲಾದ…
ಸಾಧಕ ಕೃಷಿಕರಿಗೆ ಮಲೆನಾಡು ಸಂಘದ ಗೌರವ
ಯಲ್ಲಾಪುರ: ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರದಲ್ಲಿ ವಿವಿಧ ರೀತಿ ಸಾಧನೆ ಮಾಡಿದವರನ್ನು ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಸ್ಥೆಯವರು ಗುರುತಿಸಿ ಅಡಿಕೆ ಭವನದಲ್ಲಿ ನಡೆದ ಸಭೆಯಲ್ಲಿ ಸನ್ಮಾನಿಸಿದ್ದಾರೆ. ನಂತರ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ `ರೈತರ ಹಿತಕ್ಕಾಗಿ ಸಂಘ ಸ್ಥಾಪನೆಯಾಗಿದ್ದು,…
ಪ್ರಾಣಿಪ್ರಿಯ ಪೊಲೀಸರಿಗೆ ಗೋ ಪ್ರೇಮಿಗಳ ಜೈಕಾರ: ಅಕ್ರಮ ಸಾಗಾಟದ ಸುಳಿವು ನೀಡಿದ ಸಗಣಿ ವಾಸನೆ!
ಕುಮಟಾ: ಕಾರು ಹಾಗೂ ಬೈಕು ಸೇರಿ ವಿವಿಧ ಸರಕು ಸಾಗಾಣಿಕೆ ಮಾಡುವ ಕಂಟೇನರ್ ವಾಹನದಲ್ಲಿ ಕದ್ದುಮುಚ್ಚಿ ಜಾನುವಾರು ಸಾಗಿಸುತ್ತಿದ್ದವರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಮಹಾರಾಷ್ಟ್ರ ಕೊಲ್ಲಾಪುರದಿಂದ ಕೇರಳದ ಪಲಕ್ಕಾಡ್’ಗೆ ಕಂಟೇನರ್ ವಾಹನ ತೆರಳುತ್ತಿದ್ದು, ಶನಿವಾರ ಬೆಳಗ್ಗೆ ಕುಮಟಾ ಪೊಲೀಸರು ಆ ವಾಹನಕ್ಕೆ…
ರೈತರಿಗೆ ನೆರವಾದ ಸವಣಗೇರಿ ಹಾಲು ಉತ್ಪಾದಕ ಸಂಘ
ಯಲ್ಲಾಪುರ: 15 ವರ್ಷಗಳ ಹಿಂದೆ 10 ಹೈನುಗಾರರಿಂದ ಶುರುವಾದ ಸವಣಗೆರಿಯ ಹಾಲು ಉತ್ಪಾದಕ ಸಂಘ ಕಳೆದ ವರ್ಷ ಎಲ್ಲಾ ಖರ್ಚುಗಳನ್ನು ಕಳೆದು 1.60 ಲಕ್ಷ ರೂ ಆದಾಯ ಪಡೆದಿದೆ. ಹಾಲು ಮಾರಾಟ ವಿಷಯದಲ್ಲಿ ಗುಣಮಟ್ಟ ಕಾಯ್ದುಕೊಂಡಿರುವುದೇ ಇದಕ್ಕೆ ಕಾರಣ. `ಸಂಘ ಶುರುವಾದಾಗ…
ಗಾಂಧೀಜಿ ಮಹಾತ್ಮೆ ಸಾರಿದ ವಾರ್ತಾ ಇಲಾಖೆ: ಸ್ಪರ್ಧಾ ವಿಜೇತರ ಯಾದಿ ಬಿಡುಗಡೆ
ಕಾರವಾರ: ಮಹಾತ್ಮ ಗಾಂಧೀಜಿಯವರ 155ನೇ ಜಯಂತಿಯ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ 841 ಜನ ಭಾಗವಹಿಸಿದ್ದರು. ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಮಹಾತ್ಮ ಗಾಂಧೀಜಿ ಅವರ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಅಸ್ಪೃಶ್ಯತೆ…
ಕಸ ಸಹ ಸಂಪನ್ಮೂಲ: ಸ್ವಚ್ಛತೆಯ ಪಾಠ ಮಾಡಿದ ಸಂಸದ ಕಾಗೇರಿ
`ಕಸವನ್ನು ಸಂಪನ್ಮೂಲವನ್ನಾಗಿ ಪರಿವತಿಸುವ ಬಗ್ಗೆ ಸ್ವ ಸಹಾಯ ಸಂಘದ ಸದಸ್ಯರಿಗೆ ಜಿಲ್ಲಾಡಳಿತ ಅರಿವು ಮೂಡಿಸಬೇಕು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು `ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಆರೋಗ್ಯ ಇಲಾಖೆ…
ಅಮಾನತು ಆದವರಿಗೂ ಅಧಿಕಾರದ ಭಾಗ್ಯ!
ಹೊನ್ನಾವರ: ಮುರುಡೇಶ್ವರದ ಲಾಡ್ಜವೊಂದರಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆ ತಡೆಯುವಲ್ಲಿ ವಿಫಲವಾಗಿ ಅಮಾನತುಗೊಂಡಿದ್ದ ಪಿಎಸ್‌ಐ ಮಂಜುನಾಥ ಅವರಿಗೆ ಹೊನ್ನಾವರದಲ್ಲಿ ಅಧಿಕಾರದ ಭಾಗ್ಯ ದೊರೆತಿದೆ. ಮಂಜುನಾಥ ಅವರ ಮೇಲೆ ಇಲಾಖಾ ವಿಚಾರಣೆ ಬಾಕಿಯಿರುವಾಗಲೇ ಹೊನ್ನಾವರದ ಪಿಎಸ್‌ಐ ಆಗಿ ಅಧಿಕಾರವಹಿಸಿಕೊಳ್ಳುವಂತೆ ದಿಡೀರ್ ಆದೇಶವಾಗಿದೆ. ಹೊನ್ನಾವರ ಠಾಣೆಯಲ್ಲಿ…








