ಭಾರೀ ಮಳೆ: ಮತ್ತೆ 12 ಮನೆಗಳಿಗೆ ಹಾನಿ
ಕರಾವಳಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸೋಮವಾರ ಸಂಜೆಯಿoದ ಮಂಗಳವಾರ ಸಂಜೆಯವರೆಗೆ 12 ಮನೆಗಳಿಗೆ ಹಾನಿಯಾಗಿದೆ. ಅದರಲ್ಲಿ 2 ಮನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಮಂಗಳವಾರ ಮಳೆ ಪ್ರಮಾಣ ಕಡಿಮೆ ಆಗಿದ್ದು ಹೊನ್ನಾವರ ತಾಲೂಕಿನ 3 ಮತ್ತು ಕುಮಟಾದ 2 ಕಾಳಜಿ ಕೇಂದ್ರ ಕಾರ್ಯ…
ಖಾಸಗಿ ರೆಸಾರ್ಟಿನಲ್ಲಿ ಸರ್ಕಾರಿ ದಿನಾಚರಣೆ!
ಉತ್ತರ ಕನ್ನಡ ಜಿಲ್ಲಾ ಪಂಚಾಯತವೂ ಭಟ್ಕಳದ ಖಾಸಗಿ ರೆಸಾರ್ಟಿನಲ್ಲಿ `ಮೀನು ಕೃಷಿ ದಿನಾಚರಣೆ’ ಆಯೋಜಿಸಿದೆ. ಜುಲೈ 10ರಂದು ಬೆಳಗ್ಗೆ 10.30ಕ್ಕೆ ಗೊರಟೆ ಕ್ರಾಸಿನ ಎಂ ಎಂ ರೆಸಾರ್ಟಿನಲ್ಲಿ ಈ ಸಡಗರ ನಡೆಯಲಿದೆ. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ…
4 ಸಾವಿರ ಲಂಚ ಪಡೆದವರಿಗೆ ಒಂದುವರೆ ವರ್ಷ ಜೈಲು
ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿದ್ದ ಯಲ್ಲಾಪುರ ಪಟ್ಟಣ ಪಂಚಾಯತ ತೆರಿಗೆ ವಸೂಲಿ ಸಹಾಯಕ ಪ್ರತಾಪ ಸಿಂಗ್ ಭವಾನಿಸಿಂಗ್ ರಜಪೂತ್ ಎಂಬಾತರಿಗೆ ಒಂದುವರೆ ವರ್ಷ ಜೈಲು ಶಿಕ್ಷೆ ಜೊತೆ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಈತನಿಗೆ ಲಂಚ ಸ್ವೀಕರಿಸಲು ತಿಳಿಸಿದ ಪ್ರಕಾಶ…
ಜುಲೈ 10: ಕಾರವಾರ – ಕುಮಟಾದಲ್ಲಿ ಕರೆಂಟ್ ಇರಲ್ಲ
ವಿದ್ಯುತ್ ತಂತಿ ಸರಿಪಡಿಸುವ ಕೆಲಸದ ಅಂಗವಾಗಿ ಕಾರವಾರ ಹಾಗೂ ಕುಮಟಾದಲ್ಲಿ ಜುಲೈ 10ರಂದು ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ. ಬೆಳಗ್ಗೆ 10 ಗಂಟೆಯಿoದ ಮಧ್ಯಾಹ್ನ 1 ಗಂಟೆಯವರೆಗೂ ಈ ಎರಡು ತಾಲೂಕುಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.
ಪೊದೆಗಳಲ್ಲಿ ಅಡಗಿದ ಪುಸ್ತಕ ಕೇಂದ್ರ: ಗಾಳಿ ಬೆಳಕಿಗೂ ತತ್ವಾರ
ಕುಮಟಾ: ಹಳೆಯ ಮೀನು ಮಾರುಕಟ್ಟೆ ರಸ್ತೆಯಲ್ಲಿ ಪುರಸಭೆ ಗ್ರಂಥಾಲಯವಿದ್ದು, ಸುತ್ತಲಿನ ತೆರವು ಮಾಡದೇ ಇದ್ದಲ್ಲಿ ಪೂರ್ತಿಯಾಗಿ ಪೊದೆಗಳಿಂದ ಮುಚ್ಚುವ ಸಾಧ್ಯತೆಯಿದೆ. ಈ ಕೇಂದ್ರದ ಸುತ್ತ ಅಶುಚಿತ್ವ ಕಾಡುತ್ತಿದ್ದು, ಪುಸ್ತಕ ಓದಲು ಆಗಮಿಸುವ ಮಕ್ಕಳು ಹೆದರುತ್ತಿದ್ದಾರೆ. ಮೊದಲು ಇಲ್ಲಿ ನಿತ್ಯ ಸಾವಿರಾರು ಜನ…
ಸೋರುವ ಬಸ್ ನಿಲ್ದಾಣವಿದು: ಛತ್ರಿ ಹಿಡಿದು ಒಳಗೆ ಬನ್ನಿ!
ಕುಮಟಾ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಸಂಪೂರ್ಣ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಎಲ್ಲಾ ಕಡೆಯಿಂದ ನೀರು ನುಗ್ಗುತ್ತಿದೆ. ಇಲ್ಲಿಗೆ ಆಗಮಿಸುವವರು ಛತ್ರಿ ಹಿಡಿದು ಒಳಗೆ ಪ್ರವೇಶಿಸುವ ಸನ್ನಿವೇಶ ಎದುರಾಗಿದೆ. ಈ ಬಸ್ ನಿಲ್ದಾಣ ನಿರ್ಮಿಸಿ 30 ವರ್ಷ ಕಳೆದಿದ್ದು,…
ಪ್ರಕೃತಿ ವಿಕೋಪ ನಿರ್ವಹಣೆ ಕುರಿತು ತರಬೇತಿ
ಉತ್ತರ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆoಟ್ ಡಾ ಸಂಜು ನಾಯಕ ಅವರು ಪ್ರಕೃತಿ ವಿಕೋಪ ನಿರ್ವಹಣೆ ಕುರಿತು ತರಬೇತಿ ಪಡೆದಿದ್ದು, ಆಸಕ್ತರಿಗೆ ಅವರು ತರಬೇತಿ ನೀಡಲು ಸಿದ್ಧವಾಗಿದ್ದಾರೆ. ಆಡಳಿತ ತರಬೇತಿ ಸಂಸ್ಥೆಯಲ್ಲಿ 5 ದಿನಗಳ ಕಾಲ ತರಬೇತಿಯನ್ನು ಅವರು…
ಮೈನಳ್ಳಿಗೆ ಬಂತು ಹೊಸ ಬ್ಯಾಂಕು..
ಮುoಡಗೋಡ: ಮೈನಳ್ಳಿಯಲ್ಲಿ `ಜನಶಕ್ತಿ ಧನಗರ ಸಹಕಾರಿ ಸಂಘ’ಕ್ಕೆ ಚಾಲನೆ ದೊರೆತಿದೆ. ಶಾಸಕ ಶಿವರಾಮ ಹೆಬ್ಬಾರ್ ಇದನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ‘ಸಹಕಾರಿ ಸಂಘಗಳಿAದ ಬಡವರ ಹಾಗೂ ಜನಸಾಮಾನ್ಯರ ಕಲ್ಯಾಣಕ್ಕೆ ಅನೂಕುಲವಾಗಲಿದೆ’ ಎಂದರು. ಮಾಜಿ ಶಾಸಕ ವಿ ಎಸ್ ಪಾಟೀಲ, ಪ್ರಮುಖರಾದ…
ಟಿ ಎಸ್ ಎಸ್ ಅಂಗಳದಲ್ಲಿ ಆಣೆ – ಪ್ರಮಾಣದ ಹೋರಾಟ!
ಶಿರಸಿ: ಅಕ್ರಮ, ಅವ್ಯವಹಾರಗಳ ಜೊತೆ `ಕೊಳೆತ ಉಪ್ಪಿನಕಾಯಿ’ ಮಾರಾಟ ವಿಷಯದಿಂದಲೂ ವಿವಾದ ಅಂಟಿಸಿಕೊoಡಿದ್ದ ಶಿರಸಿಯ ಟಿ ಎಸ್ ಎಸ್ ಸಂಸ್ಥೆಯಲ್ಲಿ ಇದೀಗ `ಆಣೆ – ಪ್ರಮಾಣ’ದ ವೇದಿಕೆ ಸೃಷ್ಟಿಯಾಗಿದೆ. `ನಾನು ಭ್ರಷ್ಟನಲ್ಲ’ ಎಂದು ಸಾರಿರುವ ಟಿಎಸ್‌ಎಸ್ ಮಾಜಿ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ…
`ಸಮಾಜದ ಮೌಲ್ಯ ಹೆಚ್ಚಿಸುವಲ್ಲಿ ತಾಳಮದ್ದಲೆ ಪಾತ್ರ ದೊಡ್ಡದು’
`ಸಂಬoಧಕ್ಕೆ ಸಂಪತ್ತಿನ ತ್ಯಾಗ ಆಗಬೇಕೇ ವಿನ: ಸಂಪತ್ತಿಗೆ ಸಂಬoಧಗಳ ತ್ಯಾಗ ಆಗಬಾರದು’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಗೋಕರ್ಣ ಅಶೋಕೆಯಲ್ಲಿ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ ಬೆಳ್ಳಿ ಹಬ್ಬದಲ್ಲಿ ಮಾತನಾಡಿದ ಅವರು `ಈಗ ಭಾವ ಹಾಗೂ ಭಾಷೆ ಸಂಕರ…







