ಗೋಕರ್ಣ: ರಾಮಮಂದಿರ ಹಿಂದಿನ ಪರ್ವತ ಕುಸಿತದ ಆತಂಕ!
ಗೋಕರ್ಣದ ರಾಮ ಮಂದಿರ ಬಳಿಯ ಹಿಂದಿನ ಗುಡ್ಡ ಕಳೆದ ವರ್ಷ ಕುಸಿದಿದ್ದು, ಈ ವರ್ಷ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ. ಹೀಗಾಗಿ ರಾಮತೀರ್ಥಕ್ಕೆ ತೆರಳುವ ಮಾರ್ಗದ ಪ್ರವೇಶ ನಿಷೇಧಿಸಲಾಗಿದೆ. ಕಳೆದ ವರ್ಷ ಮಳೆಗಾಲದಲ್ಲಿ ಮುಖ್ಯ ಕಡಲತೀರದ ಬಳಿಯ ಶ್ರೀರಾಮ ಮಂದಿರ ಪಕ್ಕದ…
ಮುಂಡಗೋಡು: ಬೈಕ್ ಕದ್ದವನ ಬಂಧನ
ಮುoಡಗೋಡು ಪಟ್ಟಣ ಪಂಚಾಯತ ಬಳಿ ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗಿದ್ದ ಯಲ್ಲಾಪುರದ ನಾಸೀರ ಸಿದ್ಧಿ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನ ಬಳಿಯಿದ್ದ ಬೈಕನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಮುತ್ತಣ್ಣ ಭೋವಿ ಎಂಬಾತರು ಪ ಪಂ ಸಮೀಪದ ನೌಕರ ಭವನದ ಎದುರು ತಮ್ಮ ಬೈಕ್…
ಯಲ್ಲಾಪುರ: ವೈದ್ಯ ದಂಪತಿ ವರ್ಗಾವಣೆಗೆ ಬಿಜೆಪಿ ವಿರೋಧ
ಯಲ್ಲಾಪುರ ತಾಲೂಕು ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ ದೀಪಕ ಭಟ್ಟ ಹಾಗೂ ಡಾ ಸೌಮ್ಯ ದಂಪತಿ ವರ್ಗಾವಣೆಯ ಸುದ್ದಿ ಅನೇಕರ ಬೇಸರಕ್ಕೆ ಕಾರಣವಾಗಿದೆ. ಬಿಜೆಪಿ ಸಹ ಈ ವೈದ್ಯ ದಂಪತಿಯ ವರ್ಗಾವಣೆಯನ್ನು ವಿರೋಧಿಸಿದೆ. ಡಾ ದೀಪಕ ಭಟ್ಟ ಹಾಗೂ ಡಾ…
ಶಿರಸಿ: ಸರ್ಕಾರಿ ಆಸ್ಪತ್ರೆಗಾಗಿ ಸಮಾನ ಮನಸ್ಕರ ಸಭೆ
ಶಿರಸಿ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸುವ ವಿಚಾರವಾಗಿ ಜೂನ್ 14ರಂದು ಸಂಜೆ 4 ಗಂಟೆಗೆ ನೆಮ್ಮದಿ ಕುಟೀರದಲ್ಲಿ ಸಮಾನ ಮನಸ್ಕರ ಸಭೆ ಕರೆಯಲಾಗಿದೆ. `2020ರಲ್ಲಿ ಶಿರಸಿಯಲ್ಲಿ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಕೆಲಸ ಶುರುವಾಗಿದ್ದು, 2023ರಲ್ಲಿ ಮುಗಿಯಬೇಕಿತ್ತು. 2025ರಲ್ಲಿಯೂ ಈ ಕೆಲಸ ಮುಗಿದಿಲ್ಲ. ಶೇ…
ಕುಮಟಾದಿಂದ ಶಿರಸಿಗೆ ಬಂದ ಮಾದಕ: ಹೆಲ್ಮೆಟ್ ಹಿಡಿಯಲು ಹೋದವರಿಗೆ ಗಾಂಜಾ ಸಿಕ್ಕಿತು!
ಶಿರಸಿಯ ನಿಲೇಕಣಿ ನಾಕಾದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರು ಗಾಂಜಾ ಸಾಗಾಟಗಾರರನ್ನು ಹಿಡಿದಿದ್ದಾರೆ. 10 ಸಾವಿರ ರೂ ಮೌಲ್ಯದ ಸ್ಕೂಟಿಯಲ್ಲಿ 5 ಸಾವಿರ ರೂ ಮೌಲ್ಯದ ಗಾಂಜಾ ಅಡಗಿಸಿಕೊಂಡಿದ್ದ ಇಬ್ಬರು ಜೈಲಿಗೆ ಹೋಗಿದ್ದಾರೆ. 23 ವರ್ಷದ ಅನುರಾಗ ಜೋಗಳೇಕರ್ ಅವರು ಹುಬ್ಬಳ್ಳಿ…
ಪ ಪಂ ಅಧಿಕಾರಿಗಳ ಪೆನ್ ಡ್ರೈವ್ ರಹಸ್ಯ: ಸಿಬ್ಬಂದಿ ಸತ್ಯ ಹೇಳಲಿಲ್ಲ.. ಸದಸ್ಯರು ಪಟ್ಟು ಬಿಡಲಿಲ್ಲ!
ಯಲ್ಲಾಪುರ ಗ್ರಾಮದೇವಿ ಜಾತ್ರೆ ಅವಧಿಯಲ್ಲಿ ಪಟ್ಟಣ ಪಂಚಾಯತದಲ್ಲಿ ನಡೆದ ಅವ್ಯವಹಾರದ ಬಗ್ಗೆ ಶುಕ್ರವಾರ ನಡೆದ ಸಭೆಯಲ್ಲಿಯೂ ಚರ್ಚೆ ನಡೆದಿದದ್ದು, ಅನೇಕರ ನಡುವೆ ವಾಗ್ವಾದ-ಜಟಾಪಟಿ, ರಾಜಕೀಯ ಕಚ್ಚಾಟಕ್ಕೆ ಈ ಸಭೆಯೂ ಸೀಮಿತಗೊಂಡಿತು. ಪಟ್ಟಣದ ಮೀನು ಮಾರುಕಟ್ಟೆ ವಿಷಯವಾಗಿ ಸದಸ್ಯ ಸತೀಶ ನಾಯ್ಕ ಹಾಗೂ…
ಉತ್ತರ ಕನ್ನಡ | ಅಲ್ಲಲ್ಲಿ ಗುಡ್ಡ ಕುಸಿತ.. ಜನ ಜೀವನ ಅಸ್ತವ್ಯಸ್ಥ: ಕರಾವಳಿ ತೀರದಲ್ಲಿ ಮಾಯದಂತ ಮಳೆ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಅದರಲ್ಲಿಯೂ ಕರಾವಳಿ ಭಾಗದಲ್ಲಿ ಕೊಂಚವೂ ಬಿಡುವು ನೀಡದೇ ಮಳೆ ಸುರಿಯುತ್ತಿದೆ. ಪರಿಣಾಮ ಅಲ್ಲಲ್ಲಿ ಗುಡ್ಡ ಕುಸಿತ, ಮನೆಗಳಿಗೆ ನೀರು ನುಗ್ಗುವುದು, ರಸ್ತೆ ಮುಳುಗಡೆ ಸಾಮಾನ್ಯವಾಗಿದೆ. ನಿರಂತರವಾದ ಗಾಳಿ-ಮಳೆ-ಚಳಿಗೆ ಜನ ತತ್ತರಿಸಿದ್ದಾರೆ. ಕಾರವಾರ ಪ್ರವೇಶಿಸುವ…
ಪ್ರವಾಸಿಗರ ಆಗಮನ: ಗುಡ್ಡೆಹಳ್ಳಿಯಲ್ಲಿ ಗೌಡರ ಜಗಳ!
ಕಾರವಾರದ ಗುಡ್ಡೆಹಳ್ಳಿಗೆ ಪ್ರವಾಸಿಗರು ಬರುವ ವಿಷಯವಾಗಿ ಕೃಷ್ಣ ಗೌಡ, ತಾಕು ಗೌಡ ಹಾಗೂ ಅಜೀಪ ಗೌಡ ನಡುವೆ ಜಗಳವಾಗಿದೆ. ಅವರೆಲ್ಲರ ಕೈಯಲ್ಲಿ ಕತ್ತಿ ಹಿಡಿದು ಜೀವಬೆದರಿಕೆ ಒಡ್ಡುವಷ್ಟರ ಮಟ್ಟಿಗೆ ಕಚ್ಚಾಟ ನಡೆಸಿದ್ದಾರೆ. ಕಾರವಾರದ ಬಿಣಗಾ ವ್ಯಾಪ್ತಿಯಲ್ಲಿ ಬರುವ ಗುಡ್ಡೆಹಳ್ಳಿ ಮೂಲಭೂತ ಸೌಕರ್ಯ…
ಕುಮಟಾ: ಕಾರ್ವಿಂಗ್ ಕೆಲಸದವನಿಗೆ ಕಪಾಳಮೋಕ್ಷ!
ಕುಮಟಾದ ಸಂದೀಪ ಮಾಶಲೇಕರ್ ಹಾಗೂ ದತ್ತಾತ್ರೇಯ ನಾಯ್ಕ ಅವರ ನಡುವೆ ಹೊಡೆದಾಟ ನಡೆದಿದೆ. ಈ ಪ್ರಕರಣದಲ್ಲಿ ಮೂಗು ತೂರಿಸಿದ ಸುಬ್ರಹ್ಮಣ್ಯ ಉಡದಂಗಿ ವಿರುದ್ಧವೂ ಸಂದೀಪ ಮಾಶಲೇಕರ್ ದೂರು ನೀಡಿದ್ದಾರೆ. ಕುಮಟಾದ ದೇವರಹಕ್ಕಲದಲ್ಲಿ ಸಂದೀಪ ಮಾಶಲೇಕರ್ ಕಾರ್ವಿಂಗ್ ಕೆಲಸ ಮಾಡಿಕೊಂಡಿದ್ದರು. ಜ 11ರಂದು…
ಮರದಿಂದ ಬಿದ್ದ ಕೊನೆಗೌಡ: ಎರಡು ವಾರದ ಬಳಿಕ ಕೊನೆಯುಸಿರು!
ಶಿರಸಿಯ ಶ್ರೀಪಾದ ಹೆಗಡೆ ಅವರ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೊನೆಗೌಡ ವಿನಾಯಕ ಗೌಡ ಮರದಿಂದ ಬಿದ್ದು ಎರಡು ವಾರ ಆಸ್ಪತ್ರೆಯಲ್ಲಿ ನರಳಾಡಿ ಸಾವನಪ್ಪಿದ್ದಾರೆ. ಶಿರಸಿ ಅಜ್ಜಿಬಾಳ ಬಳಿಯ ಬಾಳೆಗದ್ದೆಯ ವಿನಾಯಕ ಗೌಡ (48) ಅವರು ಪತ್ನಿ ರೂಪಾ ಗೌಡ ಅವರ…
















