ಹೊಳೆಯಲ್ಲಿ ತೇಲಿದ ಶವ: ಮಾಲಕನನ್ನು ಗುರುತಿಸಿದ ಶ್ವಾನದಳ!
ಹೊನ್ನಾವರದ ಚಂದಾವರ ಹೊಳೆಯಲ್ಲಿ ಶವ ಕಂಡ ಆ ಊರಿನ ನಾಯಿಗಳು ಸಾವನಪ್ಪಿದವರ ಸಂಬoಧಿಕರಿಗೆ ವಿಷಯ ಮುಟ್ಟಿಸಿವೆ. ಊರಿನವರು ಹೋಗಿ ನೋಡಿದಾಗ ಅದೇ ಊರಿನ ಗುರುನಾಥ ದೇಶಭಂಡಾರಿ ಸಾವನಪ್ಪಿರುವುದು ಗೊತ್ತಾಗಿದೆ. ಹೊನ್ನಾವರದ ಮಲ್ಲಾಪುರ ಬಳಿಯ ಚಂದಾವರದಲ್ಲಿ ವಿದ್ಯಾಧರ ದೇಶಭಂಡಾರಿ ಹಾಗೂ ಗುರುನಾಥ ದೇಶಭಂಡಾರಿ…
ಸಿಲೆಂಟರ್ ಸ್ಪೋಟಕ್ಕೆ ಗುಜುರಿ ಗೋದಾಮು ನಾಶ!
ಶಿರಸಿ ಮಂಜುವಳ್ಳಿ ಕ್ರಾಸಿನ ಬಳಿಯಿದ್ದ ಗುಜುರಿ ಅಂಗಡಿಯಲ್ಲಿ ಅಗ್ನಿ ಅವಘಡ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಹೆಚ್ಚಿನ ಅನಾಹುತ ನಡೆಯದಂತೆ ತಡೆದಿದ್ದಾರೆ. ಶನಿವಾರ ರಾತ್ರಿ ಗುಜುರಿ ಅಂಗಡಿ ಹೊತ್ತಿ ಉರಿದಿದೆ. ಅಲ್ಲಿ ಸಂಗ್ರಹಿಸಲಾದ ರಟ್ಟು ಹಾಗೂ ಕಾಗದಗಳಿಂದ ಜ್ವಾಲೆ ಇನ್ನಷ್ಟು ದೊಡ್ಡದಾಗಿದೆ.…
ಅಕ್ರಮ ತಡೆಗೆ ಬಂದ ಅರಣ್ಯಾಧಿಕಾರಿಗೆ ಚಪ್ಪಲಿ ಏಟು!
ಅರಣ್ಯ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ತಡೆಯಲು ಬಂದ ಅರಣ್ಯಾಧಿಕಾರಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಅದಾದ ನಂತರ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಸಿದ್ದಾಪುರ ತಾಲೂಕಿನ ಇಟಗಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು. ದಂಧೆಕೋರರು ಇಲ್ಲಿನ…
ಕರಾವಳಿ ಪಡೆ: ಕರ್ತವ್ಯನಿರತ ಪೊಲೀಸ್ ಶಾಶ್ವತ ಕಣ್ಮರೆ!
ಹೊನ್ನಾವರದ ಕರಾವಳಿ ಕಾವಲು ಪಡೆಯ ಪೊಲೀಸ್ ಸಿಬ್ಬಂದಿ ರಾಜೇಶ್ ಖಾರ್ವಿ ದಿಢೀರ್ ಆಗಿ ಸಾವನಪ್ಪಿದ್ದಾರೆ. ಶೌಚಾಲಯದಲ್ಲಿ ಅವರು ಸಾವನಪ್ಪಿದ ಸ್ಥಿತಿಯಲ್ಲಿ ಸಿಕ್ಕಿದ್ದಾರೆ. ಮಂಕಿ ಗ್ರಾಮದ ಮಡಿ ಊರಿನವರಾಗಿದ್ದ ರಾಜೇಶ ಖಾರ್ವಿ ಕಳೆದ ಏಳು ವರ್ಷಗಳಿಂದ ಕರಾವಳಿ ಕಾವಲು ಪಡೆಯಲ್ಲಿದ್ದರು. ಕೆಎನ್‌ಡಿ ವಿಭಾಗದಲ್ಲಿ…
ಅಮೋಗ ಮೋಟರ್ಸ: ಮ್ಯಾನೇಜರ್ ಕಾರು ಕಳ್ಳನ ಪಾಲು!
ಶಿರಸಿಯ ಅಮೋಗ ಮೋಟರ್ಸ ಮ್ಯಾನೇಜರ್ ಆಗಿರುವ ಯಲ್ಲಾಪುರದ ಹರೀಶ ಹೆಗಡೆ ಅವರ ಕಾರು ಕಳ್ಳರ ಪಾಲಾಗಿದೆ. ಯಲ್ಲಾಪುರದ ಕುಂದರಗಿಯ ಜಕ್ಕೊಳ್ಳಿ ದೊಡ್ಡಬೇಣದ ಹರೀಶ ಹೆಗಡೆ ಅವರು ಶಿರಸಿ ಕುರ್ಸೆ ಕಪೌಂಡ್ ಬಳಿ ವಾಸವಾಗಿದ್ದರು. ಅಲ್ಲಿನ 3ನೇ ಕ್ರಾಸಿನ ಬಳಿ ಮನೆ ಮಾಡಿಕೊಂಡಿದ್ದ…
ಶಿರಸಿ ಸುತ್ತ ಕಬ್ಬಿಣ್ಣ ಕಳ್ಳರ ಕಾಟ!
ಶಿರಸಿ ನಗರಸಭೆಗೆ ಸೇರಿದ ಕಬ್ಬಿಣದ ಪೈಪು ಕಳ್ಳತನ ಬೆನ್ನಲ್ಲೆ ಇನ್ನೊಂದು ಕಬ್ಬಿಣದ ಹಗರಣ ಹೊರ ಬಂದಿದೆ. ಬನವಾಸಿ ಬಳಿ ಹರಿಯುವ ನೀರಿಗೆ ಸರ್ಕಾರ ಅಡ್ಡಲಾಗಿ ಅಳವಡಿಸಿದ್ದ ಕಬ್ಬಿಣದ ಗೇಟುಗಳು ಕಳ್ಳರ ಪಾಲಾಗಿದೆ. ಕಲ್ಕರಡಿ ಗ್ರಾಮದ ಬಾಂದಾರಿಗೆ ಅಳವಡಿಸಿದ್ದ ಕಬ್ಬಿಣದ ಗೇಟುಗಳನ್ನು ಕಳ್ಳರು…
ತಲೆ ಮೇಲೆ ಬಿದ್ದ ತೆಂಗಿನ ಕಾಯಿ: ನೀರು ತರಲು ಹೋದವ ಬರಲೇ ಇಲ್ಲ!
ಹೊನ್ನಾವರದಲ್ಲಿ ತೋಟಕ್ಕೆ ಹೋಗಿದ್ದ ಕೃಷಿಕರೊಬ್ಬರ ಮೇಲೆ ತೆಂಗಿನಕಾಯಿ ಬಿದ್ದಿದೆ. ಪರಿಣಾಮ ಅವರು ಅಲ್ಲಿಯೇ ಸಾವನಪ್ಪಿದ್ದಾರೆ. ಹೊನ್ನಾವರದ ಹಳದಿಪುರ ಬಳಿಯ ಹಬ್ಬುಗದ್ದೆಯಲ್ಲಿ ಗೊಯ್ದು ಗೌಡ ಅವರು ವಾಸವಾಗಿದ್ದರು. ತಮಗೆ 80 ವರ್ಷವಾಗಿದ್ದರೂ ಅವರು ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಜೊತೆಗೆ ಕೂಲಿ ಕೆಲಸವನ್ನು…
ತಡರಾತ್ರಿ ಒಂಟಿ ಸಂಚಾರ: ಆಟೋ ಚಾಲಕನ ಜೀವಕ್ಕೆ ಅಪಾಯ!
ಅಂಕೋಲಾದಲ್ಲಿ ಆಟೋ ಓಡಿಸಿಕೊಂಡಿರುವ ಪ್ರವೀಣ ಬೋವಿ ಅವರ ಮೇಲೆ ಮಾರಕಾಸ್ತçಗಳಿಂದ ಹಲ್ಲೆ ನಡೆದಿದೆ. ಕತ್ತಿ ಬೀಸಿದಾಗ ತಪ್ಪಿಸಿಕೊಂಡಿದ್ದರಿAದ ಅವರು ಜೀವಾಪಾಯದಿಂದ ಪಾರಾಗಿದ್ದಾರೆ. 26 ವರ್ಷದ ಪ್ರವೀಣ ಬೋವಿ ಅಂಕೋಲಾದ ಬೊಬ್ರುವಾಡದವರು. ಆಟೋ ಚಾಲಕರಾಗಿ ಬದುಕು ಕಟ್ಟಿಕೊಂಡಿರುವ ಅವರು ರಾತ್ರಿ ವೇಳೆಯೂ ಸಂಚಾರದಲ್ಲಿರುತ್ತಾರೆ.…
ಬೈಕುಗಳ ನಡುವೆ ಮುಖಾಮುಖಿ: ಯುವಕನ ದುರ್ಮರಣ!
ಶಿರಸಿಯಲ್ಲಿ ಎರಡು ಬೈಕುಗಳ ನಡುವೆ ನಡೆದ ಅಪಘಾತದಲ್ಲಿ ಯುವಕನೊಬ್ಬ ಸಾವನಪ್ಪಿದ್ದು, ಮತ್ತೊಬ್ಬರಿಗೆ ಗಾಯವಾಗಿದೆ. ಬನವಾಸಿಯ ಮದುರವಳ್ಳಿಯಲ್ಲಿ ಗುರುವಾರ ಬೈಕುಗಳ ನಡುವೆ ಅಪಘಾತವಾಗಿದೆ. ಬೆಂಗಳೆ ಬಳಿಯ ಮಂಟಲಗಾನದ ತಿಮ್ಮಪ್ಪ ದೇವಾಡಿಗ (30) ಅಪಘಾತದಲ್ಲಿ ಸಾವನಪ್ಪಿದ್ದಾರೆ. ಸೊರಬಾ ಮೂಗೂರಿನ ಕುಮಾರ ಅಂಬಿಗೇರಿ ಗಾಯಗೊಂಡಿದ್ದಾರೆ. ಬೆoಗಳೆಯಿoದ…
ಪುಣ್ಯಕ್ಷೇತ್ರದಲ್ಲಿ ಅಮಲಿನ ಘಾಟು: ಮಾದಕ ವ್ಯಸನದ ತಾಣವಾದ ಗೋಕರ್ಣ!
ಪ್ರಸಿದ್ಧ ಪುಣ್ಯ ಹಾಗೂ ಪ್ರವಾಸಿ ತಾಣ ಗೋಕರ್ಣದಲ್ಲಿ ಎಲ್ಲೆಂದರಲ್ಲಿ ಮಾದಕ ವ್ಯಸನಗಳ ಮಾರಾಟ ನಡೆಯುತ್ತಿದೆ. ಮಾದಕ ವ್ಯಸನ ಸೇವಿಸುವವರ ವಿರುದ್ಧ ಪೊಲೀಸರು ನಿರಂತರ ಪ್ರಕರಣ ದಾಖಲಿಸುತ್ತಿದ್ದು, ಅದನ್ನು ಸರಬರಾಜು ಮಾಡುವವರನ್ನು ಮಾತ್ರ ಪತ್ತೆ ಮಾಡಲು ಸಾಧ್ಯವಾಗಿಲ್ಲ! ಬೀಡಿ-ಸಿಗರೇಟಿನ ಚಟಕ್ಕೆ ಅಂಟಿಕೊAಡಿದ್ದ ಅನೇಕರು…















