ದಾರಿಗಾಗಿ ದಾಯಾದಿ ಕಲಹ: ನ್ಯಾಯಕ್ಕಾಗಿ ಅಂಗಲಾಚಿದ ವೃದ್ಧ ದಂಪತಿ!
ಅoಕೋಲಾದ ಕೊಡ್ಲಗದ್ದೆಯಲ್ಲಿ ಅನಾಧಿಕಾಲದಿಂದಲೂ ಸಂಚರಿಸುತ್ತಿದ್ದ ಕಾಲುದಾರಿಯ ಓಡಾಟದ ವಿಷಯವಾಗಿ ಅಕ್ಕ-ಪಕ್ಕದಮನೆಯವರ ನಡುವೆ ಗಲಾಟೆ ನಡೆದಿದ್ದು, ಈ ಗಲಾಟೆಯಲ್ಲಿ ಸುಬ್ರಾಯ ಗಾಂವ್ಕರ್ ಗಾಯಗೊಂಡಿದ್ದಾರೆ. ಕೊಡ್ಲಗದ್ದೆಯ ಸುಬ್ರಾಯ ಗಾಂವ್ಕರ್ ಅವರು ಅನಾರೋಗ್ಯಕ್ಕೀಡಾಗಿದ್ದಾರೆ. ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಗ್ಗೆ ಅರಿವಿದ್ದರೂ ಪಕ್ಕದಮನೆಯ ರಾಜೇಶ ಗಾಂವ್ಕರ್…
ಹೊಟ್ಟೆನೋವು: ಆಸ್ಪತ್ರೆಗೆ ದಾಖಲಿಸಿದ್ದ ರೋಗಿ ಪರಾರಿ!
ಹೊಟ್ಟೆನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅಂಕೋಲಾದ ನಾಗಪ್ಪ ಗೌಡ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿಗೆ ಯಾಮಾರಿಸಿ ಪರಾರಿಯಾಗಿದ್ದಾರೆ. ಗೌಡರ ಕುಟುಂಬದವರು ಇದೀಗ ಅವರ ಹುಡುಕಾಟ ನಡೆಸಿದ್ದಾರೆ. ಅಂಕೋಲಾದ ಅಲಗೇರಿ ಬಳಿಯ ಬಡಗೇರಿಯಲ್ಲಿ ನಾಗಪ್ಪ ಗೌಡ (41) ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು…
ನೀರಿಗೆ ಹೋದ ನಾರಿ.. ಕೆರೆಗೆ ಬಿದ್ದು ಜಲಸಮಾಧಿ!
ಶಿರಸಿಯ ಬನವಾಸಿ ಬಳಿಯ ಬೆಂಗಳೆ ಬಳಿಯ ಮಂಟಗಾಲ ಕೆರೆಯಲ್ಲಿ ಮಹಿಳೆಯೊಬ್ಬರು ಸಾವನಪ್ಪಿದ್ದಾರೆ. ಮಗಳ ಸಾವು ಕಂಡ 70 ವರ್ಷದ ವೃದ್ಧರು ಕಣ್ಣೀರಾಗಿದ್ದಾರೆ. ಬನವಾಸಿಯ ಬೆಂಗಳೆ ಬಳಿ ವಾಸವಾಗಿದ್ದ ರೇಖಾ ಗಂಗಾಮತ (39) ಅವರು ಭಾನುವಾರ ಅಲ್ಲಿನ ಮಂಟಗಾಲ ಕೆರೆಗೆ ಹೋಗಿದ್ದರು. ಅವರಿವರ…
ಕಸ ತೆಗೆಸಿ.. ಕೆರೆ ರಕ್ಷಿಸಿ!
ಕಾರವಾರದ ಕಾಕರತಳೆ ಕೆರೆ ಅಂಚಿನಲ್ಲಿ ತ್ಯಾಜ್ಯ ವಿಲೆವಾರಿ ನಡೆದಿದ್ದು, ಇದರಿಂದ ಕೆರೆ ಅಪಾಯಕ್ಕೆ ಸಿಲುಕಿದೆ. `ಕಸ ತೆಗೆಸಿ.. ಕೆರೆ ರಕ್ಷಿಸಿ’ ಎಂಬ ಬೇಡಿಕೆ ಮುಂದಿಟ್ಟು ಆ ಭಾಗದ ಜನ ಪ್ರತಿಭಟನೆ ನಡೆಸಿದ್ದಾರೆ. ಚಿತ್ತಾಕುಲ ಗ್ರಾಮ ಪಂಚಾಯಿತಿಯ ಘನ ತ್ಯಾಜ್ಯ ವಿಲೇವಾರಿ ಘಟಕದ…
ಫೇಸ್ಬುಕ್: ಫೇಕ್ ಖಾತೆ ಪತ್ತೆ ಹಚ್ಚಿದ ಪೊಲೀಸರು!
ನಕಲಿ ಫೇಸ್ಬುಕ್ ಖಾತೆ ರಚಿಸಿ ಅಲ್ಲಿ ಅಸಂಬದ್ಧ ಫೋಟೋ-ಮಾಹಿತಿ ಹಂಚಿಕೊಳ್ಳುತ್ತಿದ್ದ ದಾಂಡೇಲಿಯ ದಾಂಡಿಗನಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿರುವ ಪೊಲೀಸರು ಅಲ್ಲಿಯೂ ಕಾನೂನು ಪಾಠ ಮಾಡಿದ್ದಾರೆ. ದಾಂಡೇಲಿಯ ಆಜಾದ್ ನಗರದಮಹಮ್ಮದ ಅನೀಸ್ ಅಬ್ದುಲ್ ಕರೀಂ ಹುಲುಗೂರು(46) ಹಣ್ಣಿನ…
ಶಿವ ಭಕ್ತರಿಗೆ ಸುಯೋಗ: ಕದಂಬರು ಸ್ಥಾಪಿಸಿದ ದೇಗುಲದ ಜೀರ್ಣೋದ್ಧಾರ!
ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾದ ಯಲ್ಲಾಪುರ ಪಟ್ಟಣದ ಈಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವದ ಸಿದ್ಧತೆ ಜೋರಾಗಿದೆ. ಮೇ 8ರಿಂದ 10ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪುನರ್ ಪ್ರತಿಷ್ಠಾ ಮಹೋತ್ಸವ ನಡೆಸಲು ನಿರ್ಧರಿಸಲಾಗಿದೆ. ಕದಂಬರ ಕಾಲದಲ್ಲಿ ರಾಜರಿಂದ ಉಪಚಾರ ಪೂಜೆ ನಡೆಯುತ್ತಿದ್ದ…
ಅಂದರ್ ಬಾಹರ್: ಅಕ್ರಮ ತಡೆದ ಮಹಿಳಾ ಅಧಿಕಾರಿ!
ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸುತ್ತಿರುವ ಡಿವೈಎಸ್ಪಿ ಅಶ್ವಿನಿ ಬಿ ಅವರು ಮುರುಡೇಶ್ವರದ ಇಸ್ಪಿಟ್ ಅಡ್ಡೆಯ ಮೇಲೆಯೂ ಕಾರ್ಯಾಚರಣೆ ನಡೆಸಿದ್ದಾರೆ. ಅಂದರ್ ಬಾಹರ್ ಆಡುತ್ತಿದ್ದ ಏಳು ಜನರ ವಿರುದ್ಧ ಅವರು ಪ್ರಕರಣ ದಾಖಲಿಸಿದ್ದಾರೆ. ಬಿ ಅಶ್ವಿನಿ ಅವರು ಕಾರವಾರದ…
ಅಂಕೋಲಾ: ಮಿತಿ ಮೀರಿದ ಮಟ್ಕಾ!
ಅಂಕೋಲಾದಲ್ಲಿ ಮಟ್ಕಾ ಆಡಿಸುವವರನ್ನು ಪತ್ತೆ ಮಾಡಿದ ಪೊಲೀಸರು ಒಂದೇ ದಿನ ಹಲವು ಕಡೆ ದಾಳಿ ನಡೆಸಿ ಅವರ ಹೆಡೆಮುರಿ ಕಟ್ಟಿದ್ದಾರೆ. ಏಪ್ರಿಲ್ 23ರಂದು ಶಿರೂರಿನ ನಾಗಪ್ಪ ಗೌಡ ಅವರು ಗೂಡಂಗಡಿಯಲ್ಲಿ ಮಟ್ಕಾ ಆಡಿಸುವಾಗ ಪಿಎಸ್ಐ ಉದ್ದಪ್ಪ ದರಪ್ಪನವರ್ ಅವರ ಬಳಿ ಸಿಕ್ಕಿ…
ಕೈಗಾ: ಅಡುಗೆ ಕೆಲಸದವನ ಆಕಸ್ಮಿಕ ಮರಣ!
ಕಾರವಾರದ ಕೈಗಾ ಅಣು ವಿದ್ಯುತ್ ಘಟಕದ 5 ಮತ್ತು 6ನೇ ಕ್ಯಾಂಟಿನ್’ನಲ್ಲಿ ಅಡುಗೆ ಕೆಲಸ ಮಾಡುವ ವಿಜ್ರೇಶ್ ಅವದ್ ಏಕಾಏಕಿ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಉತ್ತರ ಪ್ರದೇಶದ ವಿಜ್ರೇಶ್ ಅವದ್ ಅವರು 15 ಕಾರ್ಮಿಕರ ಜೊತೆ ಶುಕ್ರವಾರ ಕೆಲಸ ಮಾಡುತ್ತಿದ್ದರು. ಬೆಳಗ್ಗೆ…
ಅಕ್ರಮ ಮಾಂಸ ಮಾರಾಟ: ಸಿಕ್ಕಿಬಿದ್ದವನಿಗೆ ಜೈಲು ಊಟ!
ಜಾನುವಾರು ಹತ್ಯೆ ಮಾಡುವುದನ್ನು ಕಾಯಕವನ್ನಾಗಿಸಿಕೊಂಡಿದ್ದ ಮುಂಡಗೋಡದ ಜಾಹೀರ ಬೇಪಾರಿ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ. ಯಲ್ಲಾಪುರ ರಸ್ತೆಯಲ್ಲಿರುವ ರಜಾಕೀಯ ಮಸೀದಿ ಹಿಂದೆ ಜಾನುವಾರುಗಳನ್ನು ಕೊಂದು ಅದರ ಮಾಂಸವನ್ನು ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಪಿಐ ರಂಗನಾಥ ನೀಲಮ್ಮನವರ್ ಅವರು ದೇಶಪಾಂಡೆ ನಗರದ…















