ಕಾಳಿ | ಹೊಸ ಸೇತುವೆಗೆ ಮುತ್ತಿಕ್ಕಿದ ಹಳೆ ಸೇತುವೆ ತುಂಡು!
ಕಾರವಾರದ ಕಾಳಿ ಸಂಗಮ ಪ್ರದೇಶದಲ್ಲಿ ಕುಸಿತ ಕಂಡಿದ್ದ ಪುರಾತನ ಸೇತುವೆಯ ಪಿಲ್ಲರಿನ ಒಂದು ಭಾಗ ಮಂಗಳವಾರ ಹೊಸ ಸೇತುವೆಯ ಮೇಲ್ಬಾಗಕ್ಕೆ ಅಪ್ಪಳಿಸಿದೆ. ಇದರಿಂದ ಸೇತುವೆ ಮೇಲೆ ಸಂಚರಿಸುವವರು ಆತಂಕವ್ಯಕ್ತಪಡಿಸಿದ್ದು, ನಂತರ ಸುರಕ್ಷಿತವಾಗಿ ತಲುಪಬೇಕಾದ ಸ್ಥಳಕ್ಕೆ ತೆರಳಿದರು. ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ…
ಕಾರವಾರ | ಸಂಸ್ಕೃತಿ ಪ್ರತಿಬಿಂಬಿಸಿದ ಗುಡಿಪಡ್ವಾ ಭವ್ಯ ಶೋಭಾ ಯಾತ್ರೆ
ಯುಗಾದಿ- ಗುಡಿಪಡ್ವಾ ಅಂಗವಾಗಿ ನರೇಂದ್ರಾಚಾರ್ಯಜಿ ಮಹಾರಾಜ್ ಭಕ್ತ ಸೇವಾ ಮಂಡಳಿ ನೇತ್ರತ್ವದಲ್ಲಿ ಕಾರವಾರ ನಗರದಲ್ಲಿ ನಡೆದ ಭವ್ಯ ಶೋಭಾ ಯಾತ್ರೆ ನೋಡುಗರ ಮನ ಗೆದ್ದಿತು. ಯುಗಾದಿಯ ಹೊಸ ವರ್ಷದ ಆರಂಭವನ್ನು ಮರಾಠ – ಕೊಂಕಣ ಸಮುದಾಯದವರು `ಗುಡಿಪಡ್ವಾ’ ಎಂಬ ಹೆಸರಿನಿಂದ ಆಚರಿಸುತ್ತಾರೆ.…
ಅದು ನಾನೇ ಮಾಡಿದ್ದು… ಇದೂ ನಾನೇ ಮಾಡಿದ್ದು!
ಶಿರಸಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದ್ದಾರೆ. `ಆ ಕೆಲಸವನ್ನು ನಾನು ಮಂಜೂರಿ ಮಾಡಿಸಿದ್ದು… ಈ ಕೆಲಸವನ್ನೂ ನಾನೇ ಮಂಜೂರಿ ಮಾಡಿಸಿದ್ದು’ ಎಂದು ಅವರು ಹೇಳಿಕೊಂಡಿದ್ದಾರೆ. ತಾನೂ ಶಾಸಕನಾಗಿದ್ದ ಅವಧಿಯಲ್ಲಿ ಚಾಲನೆ…
ನಕಲಿ ತುಪ್ಪ ಮಾರಾಟವೂ ಇದೀಗ ದೊಡ್ಡ ಉದ್ಯಮ!
ಹೈನುಗಾರಿಕೆಯನ್ನು ಉಪಕಸುಬನ್ನಾಗಿಸಿಕೊಂಡ ಉತ್ತರ ಕನ್ನಡ ಜಿಲ್ಲೆಗೂ ರಾಜಾರೋಷವಾಗಿ ನಕಲಿ ತುಪ್ಪ ಬರುತ್ತಿದೆ. ಬಳ್ಳಾರಿಯಲ್ಲಿ ತಯಾರಾಗುವ ನಕಲಿ ತುಪ್ಪ ಜಿಲ್ಲೆಯ ಜನರ ಆರೋಗ್ಯ ಹಾಳು ಮಾಡುತ್ತಿದೆ. ನಕಲಿ ಆಹಾರ ಪದಾರ್ಥ ಮಾರಾಟಗಾರರಿಗೆ 1 ಲಕ್ಷ ರೂ ದಂಡವಿದ್ದರೂ ಅದನ್ನು ಲೆಕ್ಕಿಸದೇ ಕೆಲವರು ಕಲಬೆರೆಕೆ…
ಹೋಳಿ ಹೊಡೆದಾಟ: ಶಾಸಕರಿಗೆ ಜೈಕಾರ.. ಪೊಲೀಸರಿಗೆ ಧಿಕ್ಕಾರ!
ಯಲ್ಲಾಪುರದ ಕಿರವತ್ತಿಯಲ್ಲಿ ಹೋಳಿ ಆಚರಣೆ ವೇಳೆ ಗಲಾಟೆ ನಡೆದಿದೆ. ಈ ಗಲಾಟೆ ಹೊಡೆದಾಟದ ಸ್ವರೂಪಪಡೆದಿದ್ದು, ಕೊನೆಗೆ ರಾಜಿ-ಸಂದಾನದ ಮೂಲಕ ಅಂತ್ಯವಾಗಿದೆ. ಲಭ್ಯವಿರುವ ಮಾಹಿತಿ ಪ್ರಕಾರ ಹೋಳಿ ಹಬ್ಬದ ವೇಳೆ ದೊಡ್ಡದಾಗಿ ಮೈಕ್ ಹಚ್ಚಲಾಗಿತ್ತು. ಮೈಕಿನ ಸದ್ದು ಕಡಿಮೆ ಮಾಡುವಂತೆ ಪೊಲೀಸರು ತಾಕೀತು…
ಬಡವರ ಮನೆ ವಿಚಾರ: ಆಡಳಿತ ಪಕ್ಷದವರನ್ನು ಮುಜುಗರಕ್ಕೆ ಸಿಲುಕಿಸಿದ ದಿನಕರ ಶೆಟ್ಟಿ!
`ಬಸವ ವಸತಿ ಯೋಜನೆ ಅಡಿ ಮಂಜೂರಾದ ಮನೆಗಳಿಗೆ ಐದು ವರ್ಷವಾದರೂ ಸರಿಯಾಗಿ ಹಣ ಬಿಡುಗಡೆಯಾಗಿಲ್ಲ. ಈ ಸರ್ಕಾರವನ್ನು ಎಲ್ಲರೂ ದಿವಾಳಿ ಸರ್ಕಾರ ಎಂದು ವ್ಯಂಗ್ಯವಾಡುತ್ತಿದ್ದಾರೆ’ ಎಂದು ಕುಮಟಾ-ಹೊನ್ನಾವರ ಕ್ಷೇತ್ರ ಶಾಸಕ ದಿನಕರ ಶೆಟ್ಟಿ ಅಧಿವೇಶನದಲ್ಲಿ ಹೇಳಿದ್ದಾರೆ. ಅವರು ಪ್ರಸ್ತಾಪಿಸಿದ ಈ ವಿಷಯ…
ಕಡಲು ಸೇರಿದ ಸಾವಿರ ಕೂರ್ಮ ಪಡೆ!
ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡೆ ಸಮುದ್ರ ತೀರದಲ್ಲಿ ಆಮೆ ಮೊಟ್ಟೆಯಿಟ್ಟಿದ್ದು, ಅದನ್ನು ಅರಣ್ಯ ಇಲಾಖೆ ಸಂರಕ್ಷಿಸಿದೆ. ಸಾವಿರಾರು ಮೊಟ್ಟೆಗಳಿಂದ ಆಮೆ ಮರಿಗಳು ಹೊರ ಬಂದಿವೆ. ಆ ಮರಿಗಳನ್ನು ಅರಬ್ಬಿ ಸಮುದ್ರದ ವಿಶಾಲ ಪ್ರಪಂಚಕ್ಕೆ ಬಿಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಕಡಲತೀರ…
ದರ್ಶನ್ ಕೊಟ್ಟ ನೋವು ಮರೆತಿಲ್ಲ.. ರೇಣುಕಾಸ್ವಾಮಿ ಪತ್ನಿಗೆ ನೌಕರಿ ಸಿಗಲಿಲ್ಲ!
ಪುಟ್ಟ ಮಗು, ವೃದ್ಧ ಅತ್ತೆ-ಮಾವ-ಅತ್ತಿಗೆ ಜೊತೆ ಚಿತ್ರದುರ್ಗದ ರೇಣುಕಾಸ್ವಾಮಿ ಪತ್ನಿ ಸಹನಾ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದಾರೆ. ಶ್ರೀಕ್ಷೇತ್ರ ಗೋಕರ್ಣದಲ್ಲಿ ಸಮುದ್ರ ಸ್ನಾನ ಮಾಡಿ ಅವರು ಭಾವುಕರಾದರು. `ಮಗನಿಗೆ ಮೋಕ್ಷ ಸಿಗಬೇಕು. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು. ತನ್ನ ಸೊಸೆಗೆ ಸಹನಾಗೆ ನೌಕರಿ…
ಕೊಂಕಣ ರೈಲ್ವೆ: ಬಹುದೊಡ್ಡ ಲಾಭದಲ್ಲಿದ್ದರೂ ಅಪಾರ ನಷ್ಟ!
`ಕೊಂಕಣ ರೈಲ್ವೆ ಲಾಭದಲ್ಲಿದೆ. ಅದಾಗಿಯೂ ಸಂಸ್ಥೆ ನಷ್ಟ ಅನುಭವಿಸುತ್ತಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಹೇಳಿದ್ದಾರೆ. ಕಾರವಾರದಲ್ಲಿ ಮಾತನಾಡಿದ ಅವರು `ಕೊಂಕಣ ರೈಲ್ವೆ ಶುರು ಮಾಡುವಾಗ ಬೇರೆ ಬೇರೆ ರಾಜ್ಯದಿಂದ ಬಾಂಡ್ ಪಡೆಯಲಾಗಿತ್ತು. ಅದರ ಬಡ್ಡಿಯನ್ನು ಕೊಂಕಣ ರೈಲ್ವೆಯಿಂದ ಪಾವತಿಸಲಾಗುತ್ತಿದೆ. ವ್ಯವಹಾರಿಕ…
ಹೋರಾಟಗಾರನ ಮನೆಗೆ ಹೊಂಚು ಹಾಕಿದ ವ್ಯಾಘ್ರ: ಈ ದಿನ ಚಿರತೆಗೆ ಸಿಕ್ಕಿದ್ದು ಬೌ ಬೌ ಬಿರಿಯಾನಿ!
ನಿರಂತರ ಹೋರಾಟದ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಎಂ ಕೆ ಭಟ್ಟ ಯಡಳ್ಳಿ ಅವರ ಮನೆ ಭದ್ರತೆಗಿದ್ದ ನಾಯಿ ಚಿರತೆಗೆ ಆಹಾರವಾಗಿದೆ. ಕಾಡಿನಲ್ಲಿರುವ ಪ್ರಾಣಿಗಳು ವಸತಿ ಪ್ರದೇಶಕ್ಕೆ ನುಗ್ಗುತ್ತಿರುವ ಬಗ್ಗೆ ಎಂ ಕೆ ಭಟ್ಟ ಯಡಳ್ಳಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಯಲ್ಲಾಪುರ…
















