ಮಾತು ತಪ್ಪಿದ ಮಂಕಾಳು ವೈದ್ಯ: ಕಡಲ ಮಗುವಿನ ಪ್ರಶ್ನೆಗೆ ಉತ್ತರಿಸುವವರಾರು?
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಂದರು ವಿರೋಧಿ ಹೋರಾಟ ಜೋರಾಗಿದೆ. ಅಂಕೋಲಾದಲ್ಲಿ ಬಂದರು ನಿರ್ಮಾಣ ಕಾಮಗಾರಿಗೆ ಮೀನುಗಾರರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೆ ಹೊನ್ನಾವರದಲ್ಲಿಯೂ ಪ್ರತಿಭಟನೆಯ ಕಾವು ಜೋರಾಗಿದೆ. ಆದರೆ, ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಮಾತ್ರ ಮೌನವಾಗಿದ್ದಾರೆ. `ಚುನಾವಣೆ ದೇವಸ್ಥಾನಕ್ಕೆ ಬಂದು ಮತ…
ಪಾದಚಾರಿಯ ಜೀವ ತೆಗೆದ ಪ್ರಯಾಗದಿಂದ ಮರಳಿದ ಕಾರು!
ಕುಂಭಮೇಳಕ್ಕೆ ತೆರಳಿ ಕುಂದಾಪುರಕ್ಕೆ ಮರಳುತ್ತಿದ್ದ ಕಾರು ಹೊನ್ನಾವರದಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಹೇಶ ಗೌಡ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಹೊನ್ನಾವರದ ಹಳದಿಪುರದ ಮಾದಿಕೊಟ್ಟಿಗೆ ಬಳಿ ಮಹೇಶ ಗೌಡ ವಾಸವಾಗಿದ್ದರು. ಗೌಂಡಿ ಕೆಲಸ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದರು.…
ಸಾಲದ ಶೂಲಕ್ಕೆ ಕಾಟಕ್ಕೆ ಬೇಸತ್ತ ಜನ: ಜಿಲ್ಲಾಡಳಿತದಿಂದ ಖಡಕ್ ವಾರ್ನಿಂಗ್!
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಜೋಯಿಡಾ, ಮುಂಡಗೋಡ, ಸಿದ್ದಾಪುರ, ಬನವಾಸಿ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಯುತ್ತಿದೆ. `ಸಾಲ ವಸೂಲಾತಿಗಾಗಿ ಫೈನಾನ್ಸ್ ಕಂಪನಿಗಳು ಬೆಳಗ್ಗೆ 9ಗಂಟೆಗೂ ಮುನ್ನ ಸಂಜೆ 6ರ ನಂತರ ಸಾಲಗಾರರ ಮನೆಗೆ ಹೋಗಬಾರದು’ ಎಂಬ ನಿಯಮವಿದೆ.…
ಶ್ರೀಮಾತಾ | ಡ್ರೈವಿಂಗ್ ಸ್ಕೂಲ್ ಮಾಲಕರ ವಾಹನಕ್ಕೆ ಬೆಂಕಿ!
ಯಲ್ಲಾಪುರ-ಶಿರಸಿ ರಸ್ತೆಯ ಶ್ರೀಮಾತಾ ಡ್ರೈವಿಂಗ್ ಸ್ಕೂಲ್ ಮಾಲಕ ಮಂಜುನಾಥ ಭಟ್ಟ ಅವರ ಕಾರಿಗೆ ಬೆಂಕಿ ತಗುಲಿದೆ. ಪರಿಣಾಮ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಮಂಜುನಾಥ ಭಟ್ಟ ಅವರು ಬುಧವಾರ ಶಿರಸಿಗೆ ಹೋಗಿದ್ದರು. ಅವರು ಆಸ್ಪತ್ರೆಗೆ ತೆರಳಿ ಹಿಂತಿರುಗುವಷ್ಟರಲ್ಲಿ ಕಾರು ಹೊತ್ತಿ ಉರಿದಿದೆ.…
ಶಿರಸಿ-ಕುಮಟಾ ರಸ್ತೆ: ಉಪಯೋಗವಿಲ್ಲದ ಯಂತ್ರಕ್ಕೆ ಕಾಸು ಕೊಟ್ಟ ಗುತ್ತಿಗೆದಾರ!
ಉತ್ತರ ಕನ್ನಡ ಜಿಲ್ಲಾಡಳಿತ ಸೂಚಿಸಿದ ದಿನದ ಒಳಗೆ ಶಿರಸಿ-ಕುಮಟಾ ಹೆದ್ದಾರಿ ಪೂರ್ಣವಾಗುವ ಲಕ್ಷಣ ಕಾಣುತ್ತಿಲ್ಲ. ಕಾರಣ ಈ ರಸ್ತೆ ಅಭಿವೃದ್ಧಿ ಕೆಲಸಕ್ಕಾಗಿ ತರಲಾಗಿದ್ದ ದೊಡ್ಡ ಯಂತ್ರ ಕಳೆದ ಒಂದು ತಿಂಗಳಿನಿoದ ಯಾವ ಕೆಲಸವನ್ನು ಮಾಡಿಲ್ಲ! ಹಾಳಾದ ಯಂತ್ರವನ್ನು ಸರಿಪಡಿಸಲು ನಾನಾ ಭಾಗದಿಂದ…
ಸಮಸ್ಯೆ ಆಲಿಸಿದ ಸಂಸದ: 12ಮೀಟರಿನ ರಸ್ತೆಗೆ ಏಳು ಮೀಟರ್ ಸೇತುವೆ!
ಕರ್ನಾಟಕ ಮತ್ತು ಗೋವಾ ರಾಷ್ಟ್ರೀಯ ಹೆದ್ದಾರಿಯ ಅನಮೋಡ – ರಾಮನಗರ ಮಾರ್ಗದ ಕ್ಯಾಸರ್‌ಲಾಕ್ ರಸ್ತೆ 12 ಮೀಟರ್ ಅಗಲವಿದೆ. ಆದರೆ, 71ನೇ ಸಂಖ್ಯೆಯ ಸೇತುವೆಯನ್ನು ಮಾತ್ರ ಏಳು ಮೀಟರ್ ಅಗಲಕ್ಕೆ ನಿರ್ಮಿಸಲಾಗುತ್ತದೆ! ಇದಲ್ಲದೇ, ಸೇತುವೆ ಪ್ರದೇಶ ತಿರುವಿನಿಂದ ಕೂಡಿದ್ದು, 6 ಮೀಟರ್…
19ನೇ ವರ್ಷಕ್ಕೆ ಅದೇಂಥಹ ಆವೇಶ: ನಾಲ್ವರು ಪೊಲೀಸರಿಗೆ ಹೊಡೆದುರುಳಿಸಿದ ಗೋ ಭಕ್ಷಕ!
ಗೋ ಪ್ರೇಮಿ ಪೊಲೀಸರು ಹಾಗೂ ಗೊ ಭಕ್ಷಕ ಫೈಜಾನ್ ನಡುವೆ ನಡೆದ ಕಾಳಗದಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಫೈಜಾನ್ ಕಾಲಿಗೆ ಪೆಟ್ಟಾಗಿದ್ದು, ಆತನಿಗೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಹೊನ್ನಾವರ ತಾಲೂಕಿನ ಸಾಲ್ಕೊಡು ಕೊಂಡಾಕುಳಿ ಬಳಿ…
ಸಾವಿನ ಊರಾದ ಸವಣೂರು: ಸಾವನಪ್ಪಿದ ಕುಟುಂಬದವರಿಗೆ 3 ಲಕ್ಷ ರೂ ತುರ್ತು ಪರಿಹಾರ!
ತರಕಾರಿ ಹೊತ್ತು ಸಾಗುತ್ತಿದ್ದ ಲಾರಿ ಪಲ್ಟಿಯಾಗಿ 10 ಜನ ಸಾವನಪ್ಪಿದ್ದು, ಸಾವನಪ್ಪಿದವರ ಕುಟುಂಬಕ್ಕೆ ಸರ್ಕಾರ ಸಾಂತ್ವಾನ ಹೇಳಿದೆ. ಸಾವನಪ್ಪಿದವರ ಕುಟುಂಬಕ್ಕೆ 8 ತಾಸಿನೊಳಗೆ ಸರ್ಕಾರ ತಲಾ 3 ಲಕ್ಷ ರೂ ಪರಿಹಾರ ವಿತರಿಸಿದೆ. ಇನ್ನೂ ಹೆಚ್ಚಿನ ಪರಿಹಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ…
ಲಾರಿ ಪಲ್ಟಿ: ತರಕಾರಿ ಗಾಡಿಯಲ್ಲಿದ್ದ 23 ಜನ ಬದುಕಿರುವುದೇ ಪವಾಡ!
ಯಲ್ಲಾಪುರದ ಅರಬೈಲ್ ಬಳಿ ಬುಧವಾರ ನಸುಕಿನಲ್ಲಿ ಲಾರಿ ಪಲ್ಟಿಯಾಗಿದ್ದರಿಂದ 10 ಜನ ಸಾವನಪ್ಪಿದ್ದಾರೆ. 19 ಜನ ಗಾಯಗೊಂಡಿದ್ದಾರೆ. ಮತ್ತೆ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ತರಕಾರಿ ಮೂಟೆಗಳ ಮೇಲೆ ಮಲಗಿದ್ದ ಅನೇಕರು ನಿದ್ರೆಯ ಮಂಪರಿನಲ್ಲಿಯೇ ಕೊನೆ ಉಸಿರೆಳೆದಿದ್ದಾರೆ. ಮೈಮೇಲೆ ಮೂಟೆಗಳು ಬಿದ್ದಿದ್ದರಿಂದ ಉಸಿರಾಡಲು…
ರಾಜಕಾರಣಕ್ಕೂ ಜೈ.. ಯಕ್ಷಗಾನಕ್ಕೂ ಸೈ: ಮಂಥರೆಯಾಗಿ ಮನಗೆದ್ದ ಆ ಕಾಲದ ಮನ್ಮಥೆ!
ಚಿತ್ರನಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ಸಚಿವೆ ಉಮಾಶ್ರೀ ಅವರು ತಮ್ಮ 67ನೇ ವಯಸ್ಸಿನಲ್ಲಿ ಯಕ್ಷಗಾನ ರಂಗ ಪ್ರವೇಶ ಮಾಡಿದ್ದು, ಶುಕ್ರವಾರ ರಾತ್ರಿ ಹೊನ್ನಾವರದಲ್ಲಿ ನಡೆದ ಈ ಆಟಕ್ಕೆ ಸಾವಿರಾರು ಜನ ಸಾಕ್ಷಿಯಾದರು. ಶುಕ್ರವಾರ ಬೆಳಗ್ಗೆ 6.30ಕ್ಕೆ ರೈಲಿನ ಮೂಲಕ…








