6
ಬರ್ಗಿ ಗುಡ್ಡ ತೆರವು: ಹೆದ್ದಾರಿ ಸಂಚಾರ ಸುಗಮ

ಕುಮಟಾದ ಬರ್ಗಿಯಲ್ಲಿ ಗುರುವಾರ ಸಂಜೆ ಎರಡನೇ ಬಾರಿ ಗುಡ್ಡ ಕುಸಿತವಾಗಿದ್ದು, ತೆರವು ಕಾರ್ಯಾಚರಣೆ ಮುಂದುವರೆದಿದೆ. ಪ್ರಸ್ತುತ ಒಂದು ಕಡೆ ಮಣ್ಣು ತೆಗೆಯಲಾಗಿದೆ. ಆ ಭಾಗದಿಂದ ವಾಹನಗಳನ್ನು ಬಿಡಲಾಗುತ್ತಿದೆ. ಮಣ್ಣು ತೆರವು ಕಾರ್ಯಾಚರಣೆಯ ವಿಡಿಯೋ ಇಲ್ಲಿ ನೋಡಿ..

ಗುಡ್ಡ ಕುಸಿತದಲ್ಲಿ ಸಾವನಪ್ಪಿದ ಟ್ಯಾಂಕರ್ ಚಾಲಕ ಈತ..

ಶಿರೂರು ಗುಡ್ಡ ಕುಸಿತದಲ್ಲಿ ಸಾವನಪ್ಪಿದ ಗ್ಯಾಸ್ ಟ್ಯಾಂಕರ್ ಚಾಲಕನ ಗುರುತು ಪತ್ತೆಯಾಗಿದೆ. ಮಂಗಳೂರಿನಿAದ ಗೋವಾಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಅಂಕೋಲಾದ ಶಿರೂರಿನಲ್ಲಿ ಮಣ್ಣಿನ ಅಡಿ ಸಿಲುಕಿದ್ದು, ಚಿಣ್ಣನ್ ಎಂಬ ಚಾಲಕ ಸಾವನಪ್ಪಿದ್ದಾನೆ. ತಮಿಳುನಾಡಿನ ನಾಮಕ್ಕಲ್ ನಿವಾಸಿಯಾಗಿದ್ದ ಈತ ಕೆಲ ವರ್ಷಗಳಿಂದ ಈ…

ಶಿರೂರು ಗುಡ್ಡ ಕುಸಿತ: ಈವರೆಗೆ ಲೆಕ್ಕಕ್ಕೆ ಸಿಕ್ಕಿದ್ದು 10 ಶವ!

ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬoಧಿಸಿ ಈವರೆಗೆ 10 ಜನ ಸಾವನಪ್ಪಿರುವುದು ಖಚಿತವಾಗಿದೆ. ಮೊದಲು 7 ಜನ ಸಾವನಪ್ಪಿರುವ ಬಗ್ಗೆ ಶಂಕಿಸಲಾಗಿದ್ದು, ಇದೀಗ 10 ಜನ ಮಣ್ಣಿನ ಅಡಿ ಸಿಲುಕಿ ಸಾವನಪ್ಪಿರುವುದು ಖಚಿತವಾಗಿದೆ. ಇದರಲ್ಲಿ ಚಹದ ಅಂಗಡಿ…

ಶಿರಸಿ: ಗುಡ್ಡಕುಸಿತ ಕಾರ್ಯಾಚರಣೆಗೆ ಮಳೆ ಅಡ್ಡಿ

ಶಿರಸಿಯ ರಾಗಿಹೊಸಳ್ಳಿ ಬಳಿ ಗುಡ್ಡ ಕುಸಿತ ತೆರವು ಕಾರ್ಯಾಚರಣೆಗೆ ಮಳೆ ಅಡ್ಡಿಯಾಗುತ್ತಿದೆ. ಅದಾಗಿಯೂ ಪಟ್ಟು ಬಿಡದೇ ಕಾರ್ಯಾಚರಣೆ ಮುಂದುವರೆಸಲಾಗಿದೆ. ವಿವಿಧ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಬೀಡಿ ಬಿಟ್ಟಿದ್ದು, ಅವಘಡ ನಡೆಯದಂತೆ ಮುನ್ನಚ್ಚರಿಕೆವಹಿಸಿದ್ದಾರೆ. ಯಾವುದೇ ಜೀವ ಹಾನಿ ಆಗದಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಲಾಗುತ್ತಿದೆ.…

ಅಗಸೂರಿನಲ್ಲಿಯೂ ಗುಡ್ಡ ಕುಸಿತ

ಅಂಕೋಲಾ: ಶಿರೂರಿನ ಎದುರು ಭಾಗವಾದ ಅಗಸೂರಿನಲ್ಲಿ ಸಹ ಗುಡ್ಡ ಕುಸಿಯುತ್ತಿದೆ. ಅಗಸೂರು ಹಳೆಕೇರಿ ಭಾಗದಲ್ಲಿ ದೊಡ್ಡ ಪ್ರಮಾಣದ ಗುಡ್ಡ ಕುಸಿದಿದೆ. ಆದರೆ, ಇಲ್ಲಿ ಯಾವುದೇ ಮನೆಗಳಿಲ್ಲದ ಕಾರಣ ಅಪಾಯ ಆಗಿಲ್ಲ. ಮಳೆ ಮುಂದುವರೆದಲ್ಲಿ ಮನೆಗಳವರೆಗೂ ಮಣ್ಣು ಬರುವ ಸಾಧ್ಯತೆಗಳಿದೆ. ಹೊನ್ನಳ್ಳಿ ಮೇಲ್ಬಾಗದಲ್ಲಿ…

55 ವರ್ಷ ಹಳೆಯದಾದ ವಿದ್ಯುತ್ ತಂತಿ: ಈ ಮಾರ್ಗದ ಅವಾಂತರಗಳು ಒಂದೆರಡಲ್ಲ!

ಶಿರಸಿ – ಯಲ್ಲಾಪುರ ನಡುವಿನ ಮoಚಿಕೇರಿ ಬಳಿಯ ಯಡಳ್ಳಿಯಲ್ಲಿ 1969ರಲ್ಲಿ ಎಳೆದ ವಿದ್ಯುತ್ ತಂತಿಗಳ ಮೂಲಕವೇ ಈಗಲೂ ವಿದ್ಯುತ್ ಸರಬರಾಜು ನಡೆಯುತ್ತಿದೆ. ವಿದ್ಯುತ್ ತಂತಿ ಶಿಥಿಲಗೊಂಡಿದ್ದರೂ ಅದನ್ನು ಬದಲಿಸುವ ಕರ‍್ಯ ನಡೆದಿಲ್ಲ. ಹೀಗಾಗಿ ಪದೇ ಪದೇ ವಿದ್ಯುತ್ ತಂತಿ ತುಂಡಾಗುತ್ತಿದ್ದು, ಅನಾಹುತಗಳು…

ಸಿಗಂದೂರು ಚೌಡೇಶ್ವರಿ ಅಮ್ಮನ ಮಹಿಮೆ ಅಪಾರ..

ನಾಡಿನ ಶಕ್ತಿಶಾಲಿ ದೇವತೆಗಳಲ್ಲಿ ಸಿಗಂದೂರಿನ ಚೌಡೇಶ್ವರಿಯೂ ಒಂದು. ಇಲ್ಲಿನ ಮಹಿಮೆ ಅಪಾರ. ಹೀಗಾಗಿ ದೇಶ-ವಿದೇಶಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನವು ಶಿವಮೊಗ್ಗ ಜಿಲ್ಲೆಯ ಕಳಸವಳ್ಳಿಯಲ್ಲಿದೆ. ಈ ದೈವಿಕ ದೇವಾಲಯವು ಸಿಗಂದೂರು ಗ್ರಾಮದ ಪ್ರಮುಖ ಆಕರ್ಷಣೆಯ ಶಕ್ತಿಯಾಗಿದೆ. 300…

ಬೆಣ್ಣೆಯಷ್ಟೇ ಮುದ್ದು ಈ ಬೆಣ್ಣೆಹೊಳೆ ಜಲಪಾತ!

ದೂರದಿಂದ ನೋಡಿದಾಗ ಅದು ಬೆಣ್ಣೆಯ ಮುದ್ದೆ ಹಾಗೇ ಕಾಣುತ್ತದೆ. ಹತ್ತಿರ ಹೋದಾಗ ಅಲ್ಲಿ ಜಲಪಾತ ಇರುವುದು ಗೊತ್ತಾಗುತ್ತದೆ. ಕಾಮನಬಿಲ್ಲಿನ ನಡುವೆ ಕಂಗೊಳಿಸುವ ಶಿರಸಿಯ ಬೆಣ್ಣೆಹೊಳೆ ಜಲಪಾತದ ಸೌಂದರ್ಯದ ವಿಡಿಯೋ ಇಲ್ಲಿ ನೋಡಿ..

ಮಳೆಯಲ್ಲಿ ನೆನೆಯುತ್ತಲೇ ಅಹವಾಲು ಸಲ್ಲಿಸಿದ ಸಂತ್ರಸ್ತರು

ನೆರೆ ಹಾನಿ ಪ್ರದೇಶವಾದ ಶಿರೂರು ಬಳಿಯ ಉಳುವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಭೇಟಿ ನೀಡಿದ್ದು, ಅಲ್ಲಿದ್ದ ಸಂತ್ರಸ್ತರು ಧಾರಾಕಾರ ಮಳೆಯಲ್ಲಿ ನೆನೆಯುತ್ತಲೇ ಸಚಿವರಿಗೆ ತಮ್ಮ ಅಹವಾಲು ಸಲ್ಲಿಸಿದರು. ನೆರೆ ಪ್ರವಾಹದಿಂದ ಆದ ಸಂಕಷ್ಟಗಳ ಕುರಿತು ವಿವರಿಸಿ, ಶಾಶ್ವತ ಪರಿಹಾರ…

ನೆರೆಗೆ ಬೆದರಿದ ನೌಕಾನೆಲೆ: ಪ್ರವಾಹ ತಡೆಗೆ 12 ಮೀ ಅಗಲದ ಕಾಲುವೆ

ಭಾರತೀಯ ನೌಕಾನೆಲೆ ಹಾಗೂ ಹೊರಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ನೀರು ನಿಂತು ಮನೆಗಳಿಗೆ ನುಗ್ಗುತ್ತಿರುವುದನ್ನು ಅರಿತ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಆ ಭಾಗದಲ್ಲಿ 12 ಮೀ ಅಗಲದ ಕಾಲುವೆ ನಿರ್ಮಿಸಲು ಸೂಚಿಸಿದ್ದಾರೆ. ಅದರಂತೆ ಕಾಲುವೆ ನಿರ್ಮಾಣದ ಕೆಲಸ ಶುರುವಾಗಿದೆ.…

You cannot copy content of this page