6
ಅಬ್ಬಿ ಒಲೆ.. ಅಡಿಕೆ ರಾಶಿ | ಈ ಕಾಳಿಂಗನಿಗೆ ಬೇರೆ ಜಾಗವೇ ಸಿಕ್ಕಿಲ್ಲ!

ಶಿರಸಿ: ಬಿಸಿ ನೀರಿಗೆ ಬೆಂಕಿ ಒಡ್ಡುವ ಅಬ್ಬಿ ಒಲೆ ಬೂದಿಯಲ್ಲಿ ಬೆಚ್ಚಗೆ ಮಲಗಿದ್ದ ಕಾಳಿಂಗ ಸರ್ಪವನ್ನು ಅರಣ್ಯ ಸಿಬ್ಬಂದಿ ಕಾಡಿಗೆ ಬಿಟ್ಟಿದ್ದಾರೆ. ಶಿರಸಿ ಮತ್ತಿಘಟ್ಟಾದ ಅಣ್ಣಪ್ಪ ಗೌಡರ ಮನೆಗೆ ಕಾಳಿಂಗ ಸರ್ಪ ಆಗಮಿಸಿತ್ತು. ಮೊದಲ ದಿನ ಅಡಿಕೆ ಒಣಗಿಸಿದ ಜಾಗದಲ್ಲಿ ಕಾಣಿಸಿಕೊಂಡಿದ್ದ…

ಸುತ್ತಲು ವಿಮಾನ ನಿಲ್ದಾಣ.. ನಡುವೆ ಈ ಅಜ್ಜಿಯ ಮನೆ | ಜೀವಂತ ಸಾಕ್ಷಿಗೆ ದಾಖಲೆ ಕೇಳಿದ ಸರ್ಕಾರ: ದಾಖಲೆ ಕೊಟ್ಟರೂ ಪರಿಶೀಲಿಸಿದವರದ್ದೇ ಅಧಿಕಾರ!

ಅಂಕೋಲಾ: ಅಲಗೇರಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದ್ದು, ಅಲ್ಲಿ ತೋಟ-ಮನೆ ಹೊಂದಿದವರಿಗೆ ಸರ್ಕಾರ ಪರಿಹಾರ ವಿತರಿಸುತ್ತಿದೆ. ಆದರೆ, ಒಂಟಿಯಾಗಿ ವಾಸಿಸುತ್ತಿರುವ ಸರಸ್ವತಿ ಶೇಟ್ ಅವರು ಈ ಪರಿಹಾರದಿಂದ ವಂಚಿತರಾಗಿದ್ದಾರೆ. ಸರಸ್ವತಿ ನೀಲಕಂಠ ಶೇಟ್ (85 ವರ್ಷ) ಅವರು…

ಮರಳಿ ಮನೆ ಸೇರಿದ ಚಿನ್ನದ ಪರ್ಸು!

ಯಲ್ಲಾಪುರ: ಸವಿತಾ ಭಟ್ಟ ಅವರು ಕಳೆದುಕೊಂಡಿದ್ದ ಚಿನ್ನ ಹಾಗೂ ಹಣವನ್ನು ಪೊಲೀಸರು ಹುಡುಕಿ ಅವರಿಗೆ ಮರಳಿಸಿದ್ದಾರೆ. ಯಲ್ಲಾಪುರ ಇಡಗುಂದಿಯ ಸವಿತಾ ಭಟ್ಟ ಅವರು ಡಿ 24ರಂದು ಯಲ್ಲಾಪುರ ಪಟ್ಟಣಕ್ಕೆ ಬಂದಿದ್ದರು. ಸಂಜೆ ಬಸ್ಸಿಗೆ ಮರಳುವ ಗಡಿಬಿಡಿಯಲ್ಲಿ ಅವರು ತಮ್ಮ ಪರ್ಸನ್ನು ಕಳೆದುಕೊಂಡಿದ್ದರು.…

ಹೆದ್ದಾರಿ ಅಂಚಿನಲ್ಲಿ ಸೊಳ್ಳೆ ಉತ್ಪಾದನಾ ಕೇಂದ್ರ: ಅಲೆಮಾರಿಗಳ ಬದುಕು ಅತಂತ್ರ!

ಕುಮಟಾ: ಹಳದಿಪುರದ ಸಾಲಿಕೆರಿ ಗ್ರಾಮದ ಹೆದ್ದಾರಿ ಅಂಚಿನ ಪ್ರದೇಶ ಗಬ್ಬೆದ್ದಿದೆ. ಬೇರೆ ಬೇರೆ ಊರಿನ ಅಲೆಮಾರಿಗಳು ಇಲ್ಲಿ ಗುಡಿಸಲು ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿದ್ದು, ಕೊಳಚೆ ಪ್ರದೇಶದಿಂದ ಹರಡುವ ರೋಗಗಳ ಬಗ್ಗೆ ಅವರಿಗೆ ಅರಿವಿಲ್ಲ. ತ್ಯಾಜ್ಯ ನಿರ್ವಹಣೆಗಾಗಿ ತೆರಿಗೆ ಸಂಗ್ರಹಿಸುವ ಸ್ಥಳೀಯ ಆಡಳಿತ…

ಹೆದ್ದಾರಿಯಲ್ಲಿ ಹೊತ್ತಿ ಉರಿದ ಲಾರಿ: ಸಕ್ಕರೆ ಗಾಡಿಗೆ ಅಗ್ನಿಸ್ಪರ್ಶ!

ಯಲ್ಲಾಪುರ: ಹುಬ್ಬಳ್ಳಿ – ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಲಾರಿಗೆ ಅಗ್ನಿಸ್ಪರ್ಶವಾಗಿದೆ. ಮಂಗಳವಾರ ನಸುಕಿನಲ್ಲಿ ಅರಬೈಲ್ ಘಟ್ಟದಲ್ಲಿ ಲಾರಿ ಹೊತ್ತಿ ಉರಿದಿದೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಅಲ್ಲಿಗೆ ತೆರಳಿ ಬೆಂಕಿ ಆರಿಸುವ ಪ್ರಯತ್ನ ಮಾಡಿದರು. ಆದರೆ, ಪ್ರಯೋಜನವಾಗಲಿಲ್ಲ. ಲಾರಿಯಿಂದ…

ಕ್ಯಾಮರಾ ಕಣ್ಣಿಗೆ ಕಣ್ಣು ಹೊಳಪಿಸಿದ ಕಪ್ಪು ಚಿರತೆ!

ಯಲ್ಲಾಪುರ: ಕಳೆದ ಒಂದು ವಾರದಿಂದ ಬಿಸಗೋಡು ಭಾಗದಲ್ಲಿ ಕಪ್ಪು ಚಿರತೆ ಸಂಚಾರ ನಡೆಸಿದ್ದು, ಇದೀಗ ಅದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗೇರಾಳದ ಗಣೇಶ ಹೆಗಡೆ ಅವರ ಮನೆ ಅಂಗಳಕ್ಕೆ ಬಂದ ಚಿರತೆ ಅಲ್ಲಿದ್ದ ನಾಯಿಯನ್ನು ಭಕ್ಷಿಸಿದೆ. ಗಣೇಶ ಹೆಗಡೆ ಅವರ ಮನೆಯಲ್ಲಿ…

ಮುರುಡೇಶ್ವರ | ಇನ್ಮುಂದೆ ಎಲ್ಲೆಂದರಲ್ಲಿ ನೀರಿಗಿಳಿಯುವ ಹಾಗಿಲ್ಲ!

ಭಟ್ಕಳ: ಮುರುಡೇಶ್ವರದ ಕಡಲ ತೀರದಲ್ಲಿ ಅವಘಡ ನಡೆದ ಕಾರಣ ಕಡಲತೀರ ಪ್ರವೇಶ ನಿಷೇಧಿಸಲಾಗಿದ್ದು, ನಿಷೇಧಕ್ಕೆ ಸಡಲಿಕೆ ನೀಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಅದಕ್ಕಿಂತ ಮುಖ್ಯವಾಗಿ ಕಡಲತೀರದಲ್ಲಿ `ಸಿಮ್ಮಿಂಗ್ ಝೋನ್’ ಎಂದು ಕೆಲ ಪ್ರದೇಶ ಗುರುತಿಸಿ ಅಲ್ಲಿ ಮಾತ್ರ ನೀರಿಗಿಳಿಯಲು ಅವಕಾಶ ಕಲ್ಪಿಸುವ…

ಹೊಸ ನಿಯಮ | ಆಸ್ಪತ್ರೆ ಸೇರಿ 11 ತಾಸು ಬದುಕಿದ್ದರೆ ಮಾತ್ರ ತುರ್ತು ಚಿಕಿತ್ಸೆ!

ಕಾರವಾರ: ಸರ್ಕಾರದ ಹೊಸ ಸೂಚನೆ ಪ್ರಕಾರ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕಾನಿಂಗ್ ಮಾಡಿಸಲು ಆಯುಷ್ಮಾನ್ ಯೋಜನೆಯ ಅನುಮೋದನೆ ಕಡ್ಡಾಯ. ಆಯುಷ್ಮಾನ್ ಯೋಜನೆ ಅನುಮೋದನೆಗೆ 6 ತಾಸು ಬೇಕು. ಸ್ಕಾನಿಂಗ್ ನಂತರ ಪೂಣಾದಿಂದ ಸ್ಕಾನಿಂಗ್ ವರದಿ ಅಧಿಕೃತವಾಗಿ ವೈದ್ಯರ ಕೈ ಸೇರಲು ಕನಿಷ್ಟ 5…

ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದ ಕಳ್ಳ ಕೃಷ್ಣ!

ಶಿರಸಿ: ವ್ಯಾಪಾರಸ್ಥರ ಕಾಸು ಕದಿಯುತ್ತಿದ್ದ ಬಾಲಕನೊಬ್ಬ ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದು, ಆತನ ವಿರುದ್ದ `ಕಠಿಣ ಕ್ರಮ’ ಜಾರಿಯಾಗಿಲ್ಲ. ಊರಿನವರೆಲ್ಲ ಸೇರಿ ಆತನಿಗೆ ಬುದ್ದಿ ಹೇಳಿ ಬಿಡುಗಡೆ ಮಾಡಿದ್ದಾರೆ! ಆರು ವರ್ಷದ ಬಾಲಕನೊಬ್ಬ ಶಿರಸಿಯ ತರಕಾರಿ ಮಾರುಕಟ್ಟೆಗೆ ಪ್ರವೇಶಿಸಿದ್ದು, ಅಲ್ಲಿನ ತರಕಾರಿ…

ಶಿರಸಿಗೆ ಬಂದ ಮೈಸೂರು ಸಿಂಹ: ವಕ್ಟ್ ವಿರುದ್ಧ ಘರ್ಜನೆ!

ಶಿರಸಿ: `ವಕ್ಟ್ ಹಗರಣದಲ್ಲಿ ಮುಸ್ಲೀಂ ನಾಯಕರು ಮಾತ್ರವಲ್ಲ. ಹಿಂದು ಸಮುದಾಯದವರು ಭಾಗಿಯಾಗಿದ್ದಾರೆ’ ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪ ಸಿಂಹ ಗುಡುಗಿದ್ದಾರೆ. `ಸರ್ಕಾರದಿಂದ ಲೀಸ್ ಆಧಾರದಲ್ಲಿ ಪಡೆದ ವಕ್ಟ್ ಆಸ್ತಿಗಳನ್ನು ವಾಣಿಜ್ಯ ಉದ್ದೇಶಗಳಿಗೆ ಪರಿವರ್ತಿಸಲಾಗಿದೆ. ಇದರಿಂದ ಮುಸ್ಲೀಂ ಸಮುದಾಯದವರಿಗೂ ಯಾವುದೇ ಪ್ರಯೋಜನವಿಲ್ಲ’…

You cannot copy content of this page