ಅಧಿಕಾರಿಗಳ ಅಸಡ್ಡೆಗೆ ಅಡಿಕೆ ಬೆಳೆಗಾರರ ಆಕ್ರೋಶ: ಪ್ರತಿಭಟನೆಯೂ ನಮ್ಮ ಹಕ್ಕು.. ಸೊಪ್ಪಿನಬೆಟ್ಟವೂ ನಮ್ಮ ಹಕ್ಕು..!
ಯಲ್ಲಾಪುರ: ಅಡಿಕೆ ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಯಲ್ಲಾಪುರದಲ್ಲಿ ತೋಟಿಗರು ಬುಧವಾರ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು. ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಹೆದ್ದಾರಿಯಲ್ಲಿ ಸಂಚರಿಸಿ ತಹಶೀಲ್ದಾರ್ ಕಚೇರಿ ಮೂಲಕ ಸರ್ಕಾರಕ್ಕೆ ತಮ್ಮ…
ನಿನ್ನೆ ಮೊನ್ನೆಯವರೆಗೂ ತುಂಬಿ ಹರಿಯುತ್ತಿದ್ದ ತೊರೆಯಲ್ಲಿಯೂ ಇದೀಗ ನೀರಿಗೆ ಬರ!
ಅಂಕೋಲಾ: ನಿನ್ನೆ ಮೊನ್ನೆಯವರೆಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದೆ. ಆದರೆ, ಅಂಕೋಲಾ ತಾಲೂಕಿನ ನೆವಳಸೆಯಲ್ಲಿನ ತೊರೆಗೆ ಈಗ ನೀರಿಲ್ಲ! ಅಂಕೋಲಾ ತಾಲೂಕಿನಲ್ಲಿ ಈ ಬಾರಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗಿರುವುದಕ್ಕೆ ಶಿರೂರು ಗುಡ್ಡ ಕುಸಿತವೇ ಸಾಕ್ಷಿ. ಗಂಗಾವಳಿ ನದಿ ಉಕ್ಕಿ ಹರಿದ…
ಶಾಸಕರಿಗೆ ಇಲ್ಲ ಅಧಿಕಾರದ ವ್ಯಾಮೋಹ: ಬಿಜೆಪಿ ಶಾಸಕರಿಗೆ ಬಿಜೆಪಿಯೇ ಶತ್ರು!
ಕುಮಟಾ: `ಕೆಲ ಬಿಜೆಪಿಗರೇ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ನನಗೆ ಶಾಸಕ ಸ್ಥಾನದ ಮೇಲೆ ವ್ಯಾಮೋಹವಿಲ್ಲ’ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದ್ದಾರೆ. `ಕೆಲವು ಮಾಧ್ಯಮಗಳಲ್ಲಿ ನನ್ನ ವಿರುದ್ಧ ಅನಗತ್ಯ ವಿಷಯ ಚರ್ಚೆಯಾಗಿದೆ. ಈ ರೀತಿ ಅಪಪ್ರಚಾರ ಮಾಡಿಸಿದವರು ನಮ್ಮ ಪಕ್ಷದವರೇ…
ಗಡಿನಾಡಿನಲ್ಲಿ ಕನ್ನಡ ಕಲರವ: ಪೊಲೀಸ್ ಅಧೀಕ್ಷಕರಿಂದ ಗಾಯನ!
ಕಾರವಾರ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಮೈಕ್ ಹಿಡಿದು ಕನ್ನಡ ಗೀತೆಗಳನ್ನು ಹಾಡಿದರು. ಅವರ ಹಾಡಿಗೆ ಅಲ್ಲಿ ನೆರೆದಿದ್ದ ಅನೇಕರು ಕುಣಿದು ಕುಪ್ಪಳಿಸಿದರು. ಕಾರವಾರದ ಸಾಯಿ ಮಂದಿರ ರಸ್ತೆಯ ದೈವಜ್ಞ ಮಂಟಪದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ…
3 ಲಕ್ಷಕ್ಕೆ ಮಾರಾಟವಾದ ಪುರಸಭೆ ಅಧಿಕಾರಿ!
ಭಟ್ಕಳ: ಮೂರು ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟು 2 ಲಕ್ಷ ರೂ ಸ್ವೀಕರಿಸಿದ್ದ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ ಶುಕ್ರವಾರ 50 ಸಾವಿರ ರೂ ಹಣ ಪಡೆಯುವ ವೇಳೆ ಸಿಕ್ಕಿ ಬಿದ್ದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ನೀಲಕಂಠ ಮೇಸ್ತಾ ಅವರ ಮೇಲೆ ದಾಳಿ ನಡೆಸಿ…
ಅರಬ್ಬಿ ಅಲೆಗಳ ಜೊತೆ ಪ್ರವಾಸಿಗನ ಕಾರು-ಬಾರು!
ಭಟ್ಕಳ: ಮುರುಡೇಶ್ವರ ಕಡಲತೀರದಲ್ಲಿ ಕಾರು ಚಲಾಯಿಸಿದ ವ್ಯಕ್ತಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಪ್ರವಾಸಿ ಕಾರು ಚಾಲಕನೊಬ್ಬ ಅರಬ್ಬಿ ಸಮುದ್ರಕ್ಕೆ ಕಾರು ಇಳಿಸಿದ್ದು, ಮರಳಿನಲ್ಲಿ ವೇಗವಾಗಿ ವಾಹನ ಚಲಾಯಿಸಿದ್ದಾನೆ. ಜೊತೆಗೆ ಇದರ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಅತ್ಯಂತ ಅಪಾಯಕಾರಿ ರೀತಿಯಲ್ಲಿ ಈತ ದಂಡೆ…
ಅಡಿಕೆ ವ್ಯಾಪಾರಿಗೆ ಆತಂಕ | ಫಸಲು ಕೊಯ್ಲಿಗೆ ರಾತ್ರಿ ಬಂದ ಕೊನೆಗೌಡ ಯಾರು ಗೊತ್ತಾ?
ಶಿರಸಿ: ತಿಲಕನಗರದ ಅಡಿಕೆ ವ್ಯಾಪಾರಿ ಲೋಕೇಶ ಹೆಗಡೆ ಅವರ ಮನೆ ಮುಂದೆ ಬೆಳೆದಿದ್ದ ಅಡಿಕೆ ಫಸಲು ಕಳ್ಳನ ಪಾಲಾಗಿದೆ! ನ 30ರ ರಾತ್ರಿ ಅವರ ಮನೆ ಕಪೌಂಡ್ ಹಾರಿದ ಕಳ್ಳ ಯಾವುದೇ ಅಳುಕಿಲ್ಲದೇ ಅಲ್ಲಿದ್ದ ಫಸಲು ಕದ್ದಿದ್ದಾನೆ. ಎಂಟು ವರ್ಷದ ಹಿಂದೆ…
ಒಂದೆರಡಲ್ಲ.. ಇದು ಐದಾರು ಆನೆಗಳ ಗುಂಪು | ರಾತ್ರಿಯಿಡಿ ಕಾಡಿದ ಕಾಡಾನೆ: ಶಿರಸಿ ಜನರ ಆತಂಕ ಇದೀಗ ದೂರ!
ಶಿರಸಿ: ಶಿರಸಿ ನಗರ ಸುತ್ತಲಿನ ಪ್ರದೇಶದಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಸಂಜೆಯವರೆಗೆ ಕಾಡಾನೆಗಳ ಸಂಚಾರ ನಡೆದಿದ್ದು, ಸಂಜೆ ವೇಳೆಗೆ ಎಲ್ಲಾ ಆನೆಗಳು ಬನವಾಸಿ ಕಡೆ ಮುಖ ಮಾಡಿವೆ. ಹೀಗಾಗಿ ತಾತ್ಕಾಲಿಕವಾಗಿ ಅರಣ್ಯಾಧಿಕಾರಿಗಳು ನಿಟ್ಟುಸುರು ಬಿಟ್ಟಿದ್ದಾರೆ. ಶನಿವಾರ ರಾತ್ರಿಯಿಂದ ಆನೆ ನಗರ ಪ್ರವೇಶಿಸದಂತೆ…
ವಾರದ ಸಂತೆ | ಈತ ಮಾರಿದ್ದು ಹಲಾಲ್ ತರಕಾರಿ!
ಕಾರವಾರ: ಭಾನುವಾರದ ಸಂತೆಗೆ ಆಗಮಿಸಿದ್ದ ವ್ಯಾಪಾರಿಯೊಬ್ಬ ತರಕಾರಿ ಮೇಲೆ ಎಂಜಿಲು ಉಗಿದು ನೀರು ಚುಮುಕಿಸಿದ ದೃಶ್ಯವಾಳಿಗಳನ್ನು ಗ್ರಾಹಕ ಮುರುಳಿದರ್ ಗೋವೆಕರ್ ತಮ್ಮ ಮೊಬೈಲ್’ನಲ್ಲಿ ಸೆರೆ ಹಿಡಿದಿದ್ದಾರೆ. ಮುರುಳಿದರ್ ಅವರ ದೂರಿನ ಮೇರೆ ಪೊಲೀಸರು ತರಕಾರಿ ವ್ಯಾಪಾರಿ ಅಬ್ದುಲ್ ಹಸನ್ ಸಾಬ್ ರಜಾಕ್’ನನ್ನು…
ಸತ್ತವರ ಕುಟುಂಬಕ್ಕೆ ಸಾಂತ್ವಾನ: ವೈದ್ಯರಿಗೆ ಬೆಂಬಲ | ಬಾಣಂತಿ ಶವದ ಮುಂದೆ ರಾಜಕೀಯ!
ಸಿದ್ದಾಪುರ: `ಬಾಣಂತಿ ಸಾವಿನ ನೋವು ಎಲ್ಲರಿಗೂ ಇದೆ. ಆದರೆ, ಹೆಣದ ಮುಂದೆ ರಾಜಕೀಯ ಮಾಡುವುದು ಸರಿಯಲ್ಲ’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. `ಮಂಗನ ಕಾಯಿಲೆಯಿಂದ ಅನೇಕರು ಸಾವನಪ್ಪಿದ್ದಾರೆ. ಆ ವೇಳೆ ಪ್ರತಿಭಟನಾಕಾರರು ಎಲ್ಲಿದ್ದರು?’ ಎಂದು ಸಹ ಭೀಮಣ್ಣ ನಾಯ್ಕ ಪ್ರಶ್ನಿಸಿದ್ದಾರೆ.…







