ಅರಣ್ಯವಾಸಿಗಳಿಗೆ ಕಾನೂನು ಅರಿವು: ಸಚಿವರ ಮೆಚ್ಚುಗೆ
ಭೂಮಿ ಹಕ್ಕಿನ ವಿಷಯವಾಗಿ ಅರಣ್ಯವಾಸಿಗಳಿಗೆ ಕಾನೂನು ಅರಿವು ಮೂಡಿಸುವ ನ್ಯಾಯವಾದಿ ರವೀಂದ್ರ ನಾಯ್ಕ ಅವರ ಪ್ರಯತ್ನಕ್ಕೆ ಸಚಿವ ಸತೀಶ ಜಾರಕಿಹೊಳಿ ಮೆಚ್ಚುಗೆವ್ಯಕ್ತಪಡಿಸಿದ್ದಾರೆ. ಫೆ 19ರಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಸಚಿವರನ್ನು ಭೇಟಿ ಮಾಡಿದರು. ಈ ವೇಳೆ ಕಾನೂನು ಜಾಗೃತ…
ಅಪಘಾತ: ಕಂದಮ್ಮನ ಜೊತೆ ಕೊನೆಯುಸಿರೆಳೆದ ತಾಯಿ
ಯಲ್ಲಾಪುರದಿಂದ ಅಂಕೋಲಾ ಕಡೆ ಚಲಿಸುತ್ತಿದ್ದ ಲಾರಿ ಅರಬೈಲ್ ಘಟ್ಟ ಮುಕ್ತಾಯದ ನಂತರ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ತಾಯಿ-ಮಗು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಜೊತೆಗೆ ಇನ್ನೂ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಫೆ 19ರ ನಸುಕಿನಲ್ಲಿ ಈ ಅಪಘಾತ ನಡೆದಿದೆ. ಅರಬೈಲ್ ಘಟ್ಟದ ಇಳಿಜಾರಿನಲ್ಲಿ…
ಅನಧಿಕೃತ ಆಸ್ತಿಗೂ ಇ-ಖಾತಾ!
`ಉತ್ತರ ಕನ್ನಡ ಜಿಲ್ಲೆಯ ವಿವಿಧ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ ವ್ಯಾಪ್ತಿಯ ಅನಧಿಕೃತ ಆಸ್ತಿಗಳಿಗೆ ಸಹ ಇ-ಖಾತಾ ನೀಡಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸೂಚನೆ ನೀಡಿದ್ದಾರೆ. `ಇದಕ್ಕಾಗಿ ಮೂರು ತಿಂಗಳ ಕಾಲ ಅಭಿಯಾನ ನಡೆಸಬೇಕು. ಜೊತೆಗೆ ಅರ್ಜಿ ಸಲ್ಲಿಸಿದ…
ಮಾನವ ಹಕ್ಕು ಸದಸ್ಯರಿಂದ ಮಕ್ಕಳ ರಕ್ಷಣೆಯ ಪ್ರವಚನ!
`ಶಾಲಾ ಮಕ್ಕಳ ಶುಲ್ಕ ಪಾವತಿಯ ನೆಪವೊಡ್ಡಿ ಅವರ ವರ್ಗಾವಣೆ ಪ್ರಮಾಣ ಪತ್ರ ನೀಡದೇ ಸತಾಯಿಸುವ ಬಗ್ಗೆ ಸಾಕಷ್ಟು ದೂರುಗಳಿದ್ದು, ಆರ್‌ಟಿಇ ಕಾಯ್ದೆ ಪ್ರಕಾರ ವರ್ಗಾವಣೆ ಪ್ರಮಾಣ ಪತ್ರ ತಡೆಹಿಡಿಯುವುದು ಅಪರಾಧ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ…
25 ಜನರನ್ನು ರಕ್ಷಿಸಿದ ಮಹಿಳೆಯ ಮೆಸೆಜು!
ಬೆಂಗಳೂರಿನಿoದ ಯಾಣಕ್ಕೆ ಬಂದಿದ್ದ 25 ಪ್ರವಾಸಿಗರು ಯಾಣದ ಕಾಡಿನಲ್ಲಿ ದಿಕ್ಕೆಟ್ಟಿದ್ದು, ಈ ವೇಳೆ ಮಹಿಳೆಯೊಬ್ಬರು ರವಾನಿಸಿದ ತುರ್ತು ಸಂದೇಶ ಎಲ್ಲಾ ಪ್ರವಾಸಿಗರನ್ನು ರಕ್ಷಿಸಿದೆ. ಫೆ 16ರಂದು ಬೆಂಗಳೂರಿನ 8 ಹುಡುಗಿಯರು ಹಾಗೂ 16 ಹುಡುಗರ ಜೊತೆ ಪ್ರವಾಸಿ ಮಾರ್ಗದರ್ಶಕರೊಬ್ಬರು ಉತ್ತರ ಕನ್ನಡ…
ತಂಬೂರು ಜಾತ್ರೆಗೆ ಯಲ್ಲಾಪುರದ ಚಕ್ಕಡಿ!
ಧಾರವಾಡ ಜಿಲ್ಲೆಯ ದೇವಿಕೊಪ್ಪ ಅರಣ್ಯದ ಕೊನೆ ಗ್ರಾಮ ತಂಬೂರ ಜಾತ್ರೆಗೆ ಸಂಪ್ರದಾಯದ0ತೆ ಯಲ್ಲಾಪುರದಿಂದಲೂ ಚಕ್ಕಡಿ ಗಾಡಿಗಳು ತೆರಳುತ್ತಿವೆ. ಸೋಮವಾರ ಆರು ಚಕ್ಕಡಿ ಗಾಡಿಗಳು ಕಿರವತ್ತಿ ಮಾರ್ಗವಾಗಿ ತಂಬೂರಿಗೆ ಚಲಿಸಿದವು. ತಂಬೂರಿನ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಜನ ಬರುತ್ತಾರೆ. ಹೆಚ್ಚಿನ ಸಂಖ್ಯೆಯ…
ಅಘನಾಶಿನಿಗೆ ಆರತಿ ಗೌರವ!
ಕುಮಟಾದ ದಿವಗಿಯಲ್ಲಿ ಯುವಾ ಬ್ರಿಗ್ರೆಡ್ ನಡೆಸಿದ ಅಘನಾಶಿನಿ ಆರತಿ ಕಾರ್ಯಕ್ರಮ ಅತ್ಯಂತ ಶೃದ್ದಾ-ಭಕ್ತಿಯಿಂದ ನಡೆದಿದ್ದು, ಭಾನುವಾರ ರಾತ್ರಿಯ ಈ ಕಾರ್ಯಕ್ರಮಕ್ಕೆ ಸಾವಿರಾರು ಜನ ಸಾಕ್ಷಿಯಾಗಿದ್ದಾರೆ. `ನದಿ ಪಾತ್ರದಲ್ಲಿ ಅನೇಕ ನಾಗರಿಕತೆ ಹಾಗೂ ವೇದಗಳ ಜನನವಾಗಿದೆ. ಇಂಥ ನದಿಗಳ ಉಳುವಿಗಾಗಿ ಯುವಾ ಬ್ರಿಗೇಡ್…
ಪ್ರಮೋದ ಹೆಗಡೆರಿಗೆ ಸುವರ್ಣ ಕಿರೀಟ!
ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ರಾಯಬಾರಿ ಪ್ರಮೋದ ಹೆಗಡೆ ಅವರಿಗೆ `ಸುವರ್ಣ ವಾಹಿನಿ’ ನೀಡುವ `ಸುವರ್ಣ ಕನ್ನಡಿಗ’ ಪ್ರಶಸ್ತಿ ದೊರೆತಿದೆ. ಪ್ರಮೋದ ಹೆಗಡೆ ಅವರು ಕಳೆದ 50 ವರ್ಷಗಳಲ್ಲಿ ಸಾಂಸ್ಕೃತಿಕ, ಸಹಕಾರಿ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಪರಿಗಣಿಸಿ ಈ…
ಭಟ್ಕಳದ ಚೆಲುವಿಗೆ ಬೆಂಗಳೂರಿಗರು ಫೀದಾ!
ಬೆಂಗಳೂರಿನ ಕಲಾ ನವೀನ್ ಫೀಲಂ ಅಕಾಡೆಮಿ ಆಯೋಜಿಸಿದ `ಮಿಸ್ ಗ್ರಾಂಡ್ ಸೌತ್ ಇಂಡಿಯಾ 2024-25 ಫ್ಯಾಷನ್ ಶೋ’ ಸ್ಪರ್ಧೆಯಲ್ಲಿ ಭಟ್ಕಳದ ಸಂಜನಾ ನಾಯ್ಕ ಪ್ರಥಮ ಸ್ಥಾನ ಪಡೆದಿದ್ದಾರೆ. ಆ ಮೂಲಕ ಸ್ಪರ್ಧೆಯ ಚಾಂಪಿಯನ್‌ಶಿಫ್’ನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಬೆoಗಳೂರಿನ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ…
ಉಳುವಿ ಜಾತ್ರೆಯಲ್ಲಿ ಮಾರಾಮಾರಿ!
ಉಳುವಿ ಜಾತ್ರೆಗೆ ಬಂದಿದ್ದ ಭಕ್ತರ ಮೇಲೆ ಇನ್ನೊಂದು ಭಕ್ತರ ಗುಂಪು ದಾಳಿ ಮಾಡಿದೆ. ಈ ವೇಳೆ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಎಂಟು ಜನ ಉಳುವಿ ಜಾತ್ರೆಗೆ ಬಂದಿದ್ದರು. ಅವರು ಕುಳಗಿ ರಸ್ತೆ ಮೂಲಕ ಹಿಂತಿರುಗುತ್ತಿದ್ದರು.…







