ರೈತರ ಖಾತೆಗೆ ಪರಿಹಾರದ ಹಣ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ನೈಋತ್ಯ ಮುಂಗಾರಿನ ಹಂಗಾಮಿನಲ್ಲಿ ಮಳೆ ಕೊರತೆಯಿಂದ ಆದ ಬರಕ್ಕೆ ಸಂಬoಧಿಸಿ ಹಾಗೂ ಆ ವೇಳೆಯಲ್ಲಿನ ಬೆಳೆಹಾನಿ ಆಗಿರುವ ರೈತರಿಗೆ ಸರ್ಕಾರದಿಂದ ನೆರವು ಸಿಗಲಿದೆ. ಮಳೆಯಾಶ್ರಿತ/ಒಣಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬ…
ರಾಮಾವತರಣ ಕೃತಿಯಲ್ಲಿ ಅಂಥದ್ದೇನಿದೆ? ಇಲ್ಲಿ ಓದಿ
`ಭಾವರಾಮಾಯಣದ `ರಾಮಾವತರಣ’ ಕೃತಿ ಸರಳ ಭಾಷೆ, ಸನ್ನಿವೇಷಗಳ ಸಹಜ ವರ್ಣನೆಯಿಂದ ಮನವನ್ನು ಗೆಲ್ಲುತ್ತದೆ’ ಎಂದು ಸಿದ್ದಾಪುರ ಭಾರತ ಸೇವಾದಳದ ಅಧ್ಯಕ್ಷ ಕೆಕ್ಕಾರ ನಾಗರಾಜ ಭಟ್ಟ ಹೇಳಿದ್ದಾರೆ. `ಕೃತಿಯಲ್ಲಿ ದಶರಥ ಮಹಾರಾಜನ ರಾಜ್ಯ ಕೋಸಲನಾಡಿನ ಸುಭಿಕ್ಷದ ಕುರಿತು ವರ್ಣನೆ ಓದಿದಾಗ ಸೂರ್ಯವಂಶದ ಮಹತಿ,…
ಅಪಘಾತದಿಂದ ನೊಂದವರಿಗೆ ಇಲ್ಲಿದೆ ತುಸು ಸಮಾಧಾನದ ಸುದ್ದಿ…
ನಿಮ್ಮ ಪರಿಚಯದಲ್ಲಿ ಯಾರಾದರೂ ರಸ್ತೆ ಅಪಘಾತದಿಂದ ನೊಂದಿದ್ದಾರಾ? ಹಾಗಾದರೆ, ಅಂಥವರ ಕುಟುಂಬಕ್ಕೆ ಸರ್ಕಾರದಿಂದ ಸಿಗಲಿದೆ ಸೂಕ್ತ ಪರಿಹಾರ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮೋಟಾರು ವಾಹನಗಳ ಕಾಯಿದೆ ಪ್ರಕಾರ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡವರಿಗೆ 50 ಸಾವಿರ…
ನಾಯ್ಕನಕೆರೆ ತಪೋಭೂಮಿಯಲ್ಲಿ ಕಂಗೊಳಿಸಲಿದೆ ಭವ್ಯ ದತ್ತಮಂದಿರ
ಸ್ವಾತಂತ್ರ್ಯ ಪೂರ್ವ ದಲ್ಲಿ ಹಿತ್ಲಳ್ಳಿ ಗ್ರಾಮದ ಬ್ರಹ್ಮಾನಂದ ಗಣೇಶ ಯೋಗಿಗಳು ಸ್ಥಾಪಿಸಿದ ದತ್ತ ಮಂದಿರ ಯಲ್ಲಾಪುರದ ನಾಯ್ಕನಕೆರೆ ಬಳಿಯಿದ್ದು, ನಿತ್ಯ ನೂರಾರು ಭಕ್ತರ ಪಾಲಿಗೆ ಶೃದ್ಧೆಯ ಕೇಂದ್ರವಾಗಿದೆ. ನೂರಾರು ವರ್ಷ ಹಿಂದಿನ ಪುರಾತನ ದತ್ತಾತ್ರೇಯ ದೇವಸ್ಥಾನ ಹೆದ್ದಾರಿ ಪಕ್ಕದಲ್ಲಿಯೇ ಇದೆ. ದೇವಾಲಯದ…
ವೈದ್ಯಕೀಯ ಸೇವೆಯಲ್ಲಿ ಸಾಧನೆ: ಡಾ ನೀರಜ್’ಗೆ ಪ್ರಶಸ್ತಿ
ಕಾರವಾರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ನೀರಜ್ ಬಿ.ವಿ. ಅವರ ಸಾಧನೆ ಪರಿಗಣಿಸಿ ಸರ್ಕಾರ ಅವರಿಗೆ `ರಾಜ್ಯಮಟ್ಟದ ಉತ್ತಮ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ’ ಎಂಬ ಪ್ರಶಸ್ತಿ ನೀಡಿದೆ. ಅವರು ಆರೋಗ್ಯ ಅಭಿಯಾನದ ಕಾರ್ಯಕ್ರಮಗಳನ್ನು…
ವರಸೆ ಬದಲಿಸಿದ ಅರಣ್ಯಾಧಿಕಾರಿ: ಕಾನೂನಿಗೂ ಇಲ್ಲ ಕಿಮ್ಮತ್ತು
ಅನಾಧಿಕಾಲದಿoದಲೂ ಅರಣ್ಯಭೂಮಿ ಸಾಗುವಳಿ ಮಾಡಿಕೊಂಡು ಬಂದಿರುವ ಅತಿಕ್ರಮಣದಾರರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸುವ ಕೆಲಸ ಮುಂದುವರೆಸಿದೆ. `ಅತಿಕ್ರಮಣದಾರರಿಗೆ ತೊಂದರೆ ಕೊಡುವುದಿಲ್ಲ’ ಎಂದು ಭರವಸೆ ನೀಡಿದ ಅಧಿಕಾರಿಗಳು ಇದೀಗ ತಮ್ಮ ವರಸೆ ಬದಲಿಸಿದ್ದಾರೆ. ಮೊನ್ನೆ ಶಿರಸಿಯಲ್ಲಿ ನಡೆದ ಸಭೆಯಲ್ಲಿ ಅರಣ್ಯಾಧಿಕಾರಿಗಳು `ಹಳೆಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವುದಿಲ್ಲ’…
ಅಡಿಕೆ – ಕಾಳುಮೆಣಸು ಬೆಳೆಗಾರರಿಗೆ ಇದು ಮುಖ್ಯ ಮಾಹಿತಿ..
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಬಂದಿದ್ದು ವಿಮಾ ಕಂತು ಪಾವತಿಸಲು ಜು 31 ಕೊನೆ ದಿನ. ಜಿಲ್ಲೆಯಲ್ಲಿ ಅಡಿಕೆ, ಮಾವು, ಶುಂಠಿ ಮತ್ತು ಕರಿಮೆಣಸು ಬೆಳೆಗಳಿಗೆ ಬೆಳೆ ವಿಮಾ ಸೌಲಭ್ಯವಿದೆ. ವಿಮಾ ಚಂದಾದಾರರಾಗಲು ರೈತರು ಎಫ್‌ಐಡಿ ಹೊಂದಿರುವುದು…
ಪ್ರವಾಸಿ ಮಾರ್ಗದರ್ಶಕರು ಬೇಕಾಗಿದ್ದಾರೆ: ಆಸಕ್ತರು ಇಂದೇ ಅರ್ಜಿ ಸಲ್ಲಿಸಿ..
ಉತ್ತರ ಕನ್ನಡ ಜಿಲ್ಲೆಗೆ ಬರುವ ಪ್ರವಾಸಿಗರನ್ನು ಸ್ವಾಗತಿಸಿ ಇಲ್ಲಿನ ತಾಣಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸುವ ಪ್ರವಾಸಿ ಮಾರ್ಗದರ್ಶಿಗಳನ್ನು ಆಯ್ಕೆ ಮಾಡಲು ಜಿಲ್ಲಾಡಳಿತ ತಯಾರಿ ನಡೆಸಿದೆ. ಪ್ರವಾಸೋದ್ಯಮ ಇಲಾಖೆಯ ಮೂಲಕ ಪ್ರವಾಸಿ ಮಾರ್ಗದರ್ಶಿಗಳ ನೇಮಕಾತಿ ನಡೆಯಲಿದ್ದು ಐತಿಹಾಸಿಕ, ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ…
ಈ ಶಿಕ್ಷಕರು ಕಾಲಿಗೆ ಬೂಟು ಧರಿಸುವ ಹಾಗಿಲ್ಲ!
ಜೂ 30ರಂದು ಕಾರವಾರದ 7 ಕಡೆ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದ್ದು, ಮೊಬೈಲ್, ಬ್ಲೂಟೂತ್ ಜೊತೆ ಕಾಲಿಗೆ ಶೂ ಧರಿಸುವುದನ್ನು ಸಹ ಇಲ್ಲಿ ನಿಷೇಧಿಸಲಾಗಿದೆ! ಇಲ್ಲಿ ಒಟ್ಟೂ 984 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ದಿನದಂದು ಸಂಬAಧಿಸಿದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ…
ಮಾತು ತಪ್ಪಿದ ಸೊಸೈಟಿಗೆ ದಂಡದ ಬಿಸಿ!
ಕಾರವಾರ: ಸಹಕಾರಿ ಸೊಸೈಟಿನಲ್ಲಿ ಇರಿಸಿದ ಠೇವಣಿ ಅವಧಿ ಮುಗಿದರೂ ಹಣ ಮರಳಿಸದ ಕಾರವಾರದ ಆಶ್ರಯ ಪತ್ತಿನ ಸಹಕಾರಿ ಸಂಘಕ್ಕೆ ಗ್ರಾಹಕ ವ್ಯಾಜ್ಯಗಳ ಆಯೋಗ ದಂಡ ವಿಧಿಸಿ, ಗ್ರಾಹಕರಿಗೆ ನ್ಯಾಯ ನೀಡಿದೆ. ರಾಜ್ಯ ಸರ್ಕಾರದ ನಿವೃತ್ತ ನೌಕರ ಕೃಷ್ಣ ಪಾಂಡುರAಗ ಗಾಂವ್ಕರ್ ಅವರು…








