ದಾಂಡೇಲಿ: ಸಮಗ್ರ ಅಭಿವೃದ್ಧಿ ಆಗುವುದು ಯಾವಾಗ?
ದಾಂಡೇಲಿಯ ಸಮಗ್ರ ಅಭಿವೃದ್ಧಿಗಾಗಿ ಅಲ್ಲಿನ ಹೋರಾಟಗಾರರು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಅದರ ಪರಿಣಾಮವಾಗಿ ಇದೀಗ ಕೆಲ ಆಶಾದಾಯಕ ಬೆಳವಣಿಗೆಗಳು ನಡೆದಿದೆ. ದಾಂಡೇಲಿಯಲ್ಲಿನ ಬಡವರಿಗೆ ಜಿ+ ಮನೆ ನಿರ್ಮಾಣವಾಗಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದರು. ಈ ಬಗ್ಗೆ ನಗರಸಭೆ ಪೌರಾಯುಕ್ತರ ಮೂಲಕ ಸರ್ಕಾರಕ್ಕೆ ಮನವಿ…
OLX ಜಾಹೀರಾತು: ಕಾರು ಇಲ್ಲ.. ಕಾಸೂ ಇಲ್ಲ!
OLX ಜಾಹೀರಾತು ನೋಡಿ ಕಾರು ಖರೀದಿಗೆ ಆಸಕ್ತಿವಹಿಸಿದ ಶಿರಸಿಯ ಮಹಾದೇವ ಕೋಚರೇಕರ್ ಅವರು 4.50 ಲಕ್ಷ ರೂ ಕಳೆದುಕೊಂಡಿದ್ದಾರೆ! ಶಿರಸಿಯ ಕೆಳಗಿನ ಎಸಳೆಯಲ್ಲಿ ವಾಸವಾಗಿರುವ ಮಹಾದೇವ ಕೋಚರೇಕರ್ ಅವರು ನೆಟ್‌ವರ್ಕ ಇಂಜೀನಿಯರ್ ಆಗಿ ಕೆಲಸ ಮಾಡುತ್ತಾರೆ. ಕುಟುಂಬದ ಬಳಕೆಗಾಗಿ ಅವರು ಕಾರು…
ಮಂಗನ ಕಾಟ: ಮಣಿಪಾಲಿಗೆ ಹೋದರೂ ಬದುಕದ ನಾಣಿ ಗೌಡ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಶನಿವಾರ ಮತ್ತೊಂದು ಜೀವ ಬಲಿಯಾಗಿದೆ. ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಹೊನ್ನಾವರದ ನಾಣಿ ಗೌಡ ಈ ದಿನ ಸಾವನಪ್ಪಿದ್ದಾರೆ. ಹೊನ್ನಾವರದ ಹಳದಿಪುರ ಮೀನು ಮಾರುಕಟ್ಟೆ ಬಳಿ ನಾಣಿ ಗೌಡ (75) ವಾಸವಾಗಿದ್ದರು. ಕಾಡಿನಲ್ಲಿರುವ ಒಣ…
ಡಕೋಟಾ ಎಕ್ಸಪ್ರೆಸ್ ಬಸ್ಸು.. ದುರ್ಗಾಂಬೆಗೆ ನೋಟಿಸ್ಸು!
ಮಳೆಗಾಲದಲ್ಲಿ ಸೋರುವ ದುರ್ಗಾಂಬಾ ಬಸ್ಸಿನಲ್ಲಿ 2 ವರ್ಷದ ಮಗುವಿನ ಜೊತೆ ಪ್ರಯಾಣ ಬೆಳಸಿದ ಮಹಿಳೆಯೊಬ್ಬರು ತಮಗೆ ಆದ ಕೆಟ್ಟ ಅನುಭವಗಳ ಬಗ್ಗೆ ಫೇಸ್ಬುಕ್ ಖಾತೆಯಲ್ಲಿ ಧೈರ್ಯದಿಂದ ಬರೆದುಕೊಂಡಿದ್ದಾರೆ. ಆ ಬಸ್ಸಿನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹೊನ್ನಾವರದ ಸಾರಿಗೆ ಅಧಿಕಾರಿಗಳಿಗೆ ಪೊಲೀಸ್…
ಕನ್ನಡವಾಣಿ: ಪೊಲೀಸ್ ತನಿಖೆಗೆ ನ್ಯಾಯಾಲಯದ ತಡೆ!
ಕುಮಟಾ ಶಾಸಕ ದಿನಕರ ಶೆಟ್ಟಿ ಅವರ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಆ ಬಗ್ಗೆ ವರದಿ ಪ್ರಕಟಿಸಿದ್ದ `ಕನ್ನಡವಾಣಿ’ ವಿರುದ್ಧ ದಾಖಲಾದ ಪೊಲೀಸ್ ಪ್ರಕರಣದ ತನಿಖೆಗೆ ಧಾರವಾಡ ಹೈಕೋರ್ಟ ತಡೆಯಾಜ್ಞೆ ನೀಡಿದೆ. ಶಾಸಕ ದಿನಕರ ಶೆಟ್ಟಿ ಅವರ ಮನೆಯಲ್ಲಿ…
ರಸ್ತೆ ಹೊಂಡ ಮುಚ್ಚಲು ಕೋರ್ಟಿನ ಮೊರೆ!
ಶಿರಸಿ-ಕುಮಟಾ ರಸ್ತೆಯ ನೀಲೇಕಣಿ ಬಳಿಯ ಹೊಂಡಗಳನ್ನು ಮೂರು ದಿನದ ಒಳಗೆ ಮುಚ್ಚದೇ ಇದ್ದರೆ ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಎಚ್ಚರಿಸಿದ್ದಾರೆ. `ನಿಲೇಕಣಿ ಶಿರಸಿ ನಗರದ ಮುಖ್ಯದ್ವಾರ. ಇಲ್ಲಿನ ರಸ್ತೆ ಹದಗೆಟ್ಟಿದ್ದರಿಂದ ಜನ ತೊಂದರೆ…
ಕೆನರಾ ಎಕ್ಸಲೆನ್ಸ್ ಕಾಲೇಜು: ಕೆಸಿಇಟಿ ಪರೀಕ್ಷೆಯಲ್ಲಿ ಮಕ್ಕಳ ಸಾಧನೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕೆಸಿಇಟಿ ಪರೀಕ್ಷೆಯಲ್ಲಿ ಕುಮಟಾದ ಕೆನರಾ ಎಕ್ಸಲೆನ್ಸ್ ಪ ಪೂ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಕಾಲೇಜಿನ ಒಟ್ಟು 73 ವಿದ್ಯಾರ್ಥಿಗಳು ಈ ಪರೀಕ್ಷೆ ಎದುರಿಸಿದ್ದರು. ಅದರಲ್ಲಿ ಒಬ್ಬರು ಸಾವಿರದೊಳಗಿನ ರ‍್ಯಾಂಕ್ ಪಡೆದು ಅಗ್ರಶ್ರೇಣಿಯ…
ಯಾವ ಊರಲ್ಲಿ ಎಷ್ಟು ಮಳೆ? ಈ ಲೆಕ್ಕಾಚಾರ ಮಾಡುವವರು ಯಾರು?
ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಆದರೆ, ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಪುರಾತನ ಕಾಲದಿಂದಲೂ ಇದ್ದ ಮಳೆ ಮಾಪನ ಕೇಂದ್ರಗಳಲ್ಲಿ ಮಾತ್ರ ಮಳೆ ಪ್ರಮಾಣ ಸರಿಯಾಗಿ ದಾಖಲಾಗುತ್ತಿಲ್ಲ! ಮೊದಲು ಅಂಕಿ-ಸoಖ್ಯೆ ಇಲಾಖೆ ಮೂಲಕ ಈ ಮಳೆ ಮಾಪನದ ನಿರ್ವಹಣೆ…
ಒಂದೇ ದಾರಿ.. ಒಂದೇ ಸಂಸ್ಥೆ.. ದರ ಮಾತ್ರ ದುಬಾರಿ: ಜನರ ಹಣ ಉಳಿಸಿದ ಜನಶಕ್ತಿ!
ಕಾರವಾರ-ಅಂಕೋಲಾ-ಕುಮಟಾ ಮಾರ್ಗವಾಗಿ ನಿತ್ಯ ಓಡಾಡುವ ಸರ್ಕಾರಿ ಬಸ್ಸುಗಳಲ್ಲಿ ದರ ವ್ಯತ್ಯಾಸ ಕಾಣಿಸಿದೆ. ಒಂದೊAದು ಡಿಪೋ ಬಸ್ಸಿನಲ್ಲಿ ಒಂದೊAದು ರೀತಿ ಹಣ ಪಡೆಯಲಾಗುತ್ತಿದ್ದು, ಜನಶಕ್ತಿ ವೇದಿಕೆ ಈ ಬಗ್ಗೆ ಹೋರಾಟ ನಡೆಸಿ 6 ತಾಸಿನಲ್ಲಿ ಸಮಸ್ಯೆ ಬಗೆಹರಿಸಿದೆ. ಅಂಕೋಲಾದ ಬೇಲೇಕೇರಿ ತಿರುವಿನಿಂದ ಕಾರವಾರಕ್ಕೆ…
ಮಳೆಗಾಲದಲ್ಲಿಯೂ ಜಲಕ್ರೀಡೆಯ ಬಯಕೆ: ಕಾರಿನಲ್ಲಿ ಹೋಗುತ್ತಿದ್ದವರಿಗೆ ಗುದ್ದಿದ ಟಿಪ್ಪರ್
ಮೈಸೂರಿನಿಂದ ದಾಂಡೇಲಿಗೆ ಪ್ರವಾಸಕ್ಕೆ ಬಂದಿದ್ದ ಐದು ಜನ ಜಲಕ್ರೀಡೆಗಾಗಿ ತೆರಳುತ್ತಿದ್ದು, ಅವರ ಕಾರಿಗೆ ಟಿಪ್ಪರ್ ಗುದ್ದಿದೆ. ಹೀಗಾಗಿ ಮಳೆಗಾಲದ ಜಲಕ್ರೀಡೆ ಮೊಟಕುಗೊಳಿಸಿದ ಆ ಐವರು ಪ್ರವಾಸಿಗರು ಊರಿಗೆ ಮರಳಿದ್ದಾರೆ. ಮೇ 18ರಂದು ಮೈಸೂರಿನ ರವಿಚಂದ್ರ ವನಗಿರಿಗೌಡ ಅವರು ತಮ್ಮ ಕುಟುಂಬದ ಸ್ನೇಹಿತರ…
















