6

ಬೋರ್‌ವೆಲ್ ಫಿಲ್ಟರ್ ಸ್ಪೋಟ: ದುಡಿಯುವ ರೈತನ ದುರ್ಮರಣ

ಹಳಿಯಾಳ: ಹೊಲಕ್ಕೆ ನೀರುಣಿಸುತ್ತಿದ್ದ ಬೋರ್‌ವೆಲ್ ಫಿಲ್ಟರ್ ಸ್ಪೋಟದಿಂದ ಖರಪ್ಪ ಹಟ್ಟಿಹೊಳಿ (64) ಎಂಬಾತರು ಸಾವನಪ್ಪಿದ್ದಾರೆ.

ಅರ್ಲವಾಡ ಖರಪ್ಪ ರುದ್ರಪ್ಪ ಹಟ್ಟಿಹೊಳಿ (64) ಅಕ್ಟೊಬರ್ 18ರಂದು ಹೊಲಕ್ಕೆ ಹೋಗಿದ್ದರು. ಫಸಲಿಗೆ ನೀರುಣಿಸುವುದಕ್ಕಾಗಿ ಅವರು ಬೋರ್‌ವೆಲ್ ಚಾಲು ಮಾಡಿದ್ದರು. ಫಿಲ್ಟರ್ ವಾಲ್ ತಿರುಗಿಸುವಾಗ ಫಿಲ್ಟರ್ ಸ್ಪೋಟವಾಗಿದೆ. ಪರಿಣಾಮ ಖರಪ್ಪ ಹಟ್ಟಿಹೊಳಿ ಅವರ ಮುಖಕ್ಕೆ ಗಾಯವಾಗಿದ್ದು, ಪರಿಸ್ಥಿತಿ ಗಂಭೀರವಾಗಿತ್ತು.

ಈ ವಿಷಯ ಗೊತ್ತಾದ ತಕ್ಷಣ ಆಂಬುಲೆನ್ಸ ಮೂಲಕ ಅವರನ್ನು ಹುಬ್ಬಳ್ಳಿಗೆ ಕರೆದೊಯ್ಯಲಾಯಿತು. ಅಲ್ಲಿನ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಯಿತು. ಏಳು ದಿನಗಳ ಕಾಲ ವೈದ್ಯರು ಆರೈಕೆ ಮಾಡಿದರು. ಮುಖದ ಮೇಲೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದ್ದರಿಂದ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ. ಅಕ್ಟೊಬರ್ 25ರಂದು ಅವರು ಕೊನೆ ಉಸಿರೆಳೆದರು.

ಖರಪ್ಪ ಹಟ್ಟಿಹೊಳಿ ಅವರ ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದು, ಅವರ ಸಂಬ0ಧಿಕರು ಪೊಲೀಸ್ ಪ್ರಕರಣ ದಾಖಲಿಸಿ ಶವ ಬಿಡಿಸಿಕೊಂಡರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page