6

ನಗೆ ಶಾಲೆ ಮಕ್ಕಳ ಮೊಗದಲ್ಲಿ ಸಂತಸದ ನಗೆ!

ಕಾರವಾರ: ಹಿಂದುಳಿದ ಪ್ರದೇಶವಾದ ನಗೆ ಗ್ರಾಮಕ್ಕೆ ಕೈಗಾ ಅಣು ಘಟಕದಿಂದ ಹೊಸ ಶಾಲಾ ಕಟ್ಟಡ ಮಂಜೂರಾಗಿದೆ. ಶೀಘ್ರದಲ್ಲಿಯೇ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯಲಿದೆ.

ಮಂಗಳವಾರ ನಡೆದ ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಮಕ್ಕಳ ಪಾಲಕರಿಗೆ ಮುಖ್ಯ ಶಿಕ್ಷಕ ಅಖ್ತರ ಸೈಯದ್ ಈ ಬಗ್ಗೆ ಮಾಹಿತಿ ನೀಡಿದರು. `ಈ ಹಿಂದೆ ಹೊಸ ಕಟ್ಟಡ ಅಗತ್ಯವಿರುವ ಬಗ್ಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅದಕ್ಕೆ ಮಂಜೂರಿ ಸಿಕ್ಕಿದೆ’ ಎಂದವರು ವಿವರಿಸಿದರು. ಪಾಲಕರ ಜೊತೆ ಮಕ್ಕಳು ಸಂತಸ ಹಂಚಿಕೊoಡರು.

ಶಾಲೆಯಲ್ಲಿ ಮಕ್ಕಳು ನಿರ್ಮಿಸಿದ ಕೈ ತೋಟ, ಇಕೋ ಕ್ಲಬ್ ಚಟುವಟಿಕೆ, ನಲಿ-ಕಲಿ ಕೋಣೆ ಮತ್ತು ಪೀಠೋಪಕರಣಗಳನ್ನು ನೋಡಿ ಮಾರ್ಗದರ್ಶಕ ರಾಜೇಂದ್ರ ಕೆರೆಮನೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಹಶಿಕ್ಷಕಿ ರೂಪಾ ನಾಯ್ಕ, ಅತಿಥಿ ಶಿಕ್ಷಕಿ ರೇಷ್ಮಾ ಹುಲಸ್ವಾರ, ಕೈಗಾ ಯೋಜನೆ ಶಿಕ್ಷಕಿ ಪ್ರಿಯಾ ಲಾಂಜೇಕರ, ಅಡುಗೆ ಸಿಬ್ಬಂದಿ ಶೋಭಾ ಗೌಡ, ಕಾಂಚನಾ ಗೌಡ ಈ ವೇಳೆ ಹಾಜರಿದ್ದು ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page