6

ಕಾಲುದಾರಿಯಲ್ಲಿ ಒಂಟಿ ಪಯಣ: ಸಂತೋಷನ ಮೇಲೆ ಸತೀಶನ ಆಕ್ರಮಣ!

ಹೊನ್ನಾವರ: ಜಳವಳವರ್ಕಿ ಹುಂಬಾಹಿತ್ಲಕೇರಿಯ ಸಂತೋಷ ಹಾಗೂ ಸತೀಶನ ನಡುವೆ ಮೊದಲಿನಿಂದಲೂ ವೈಮನಸ್ಸು ಇದ್ದು ಈ ಇಬ್ಬರ ನಡುವೆ ಮತ್ತೆ ಹೊಡೆದಾಟ ನಡೆದಿದೆ. ಸಂತೋಷ ನಾರಾಯಣ ಗೌಡರ ಮೇಲೆ ಸತೀಶ ಗಜಾನನ ನಾಯ್ಕ ಹಾಗೂ ಇನ್ನಿಬ್ಬರು ಸೇರಿ ಹೊಡೆದಿದ್ದಾರೆ. ಈ ಹೊಡೆದಾಟಕ್ಕೆ ನಿರ್ದಿಷ್ಟ ಕಾರಣ ಇಲ್ಲ.

ಅಕ್ಟೊಬರ್ 28ರ ರಾತ್ರಿ 8.30ರ ವೇಳೆಗೆ ಸಂತೋಷ ಗೌಡ ತಮ್ಮ ಮನೆಯ ಕಾಲು ದಾರಿಯಲ್ಲಿ ಒಂಟಿಯಾಗಿ ನಡೆದು ಹೋಗುತ್ತಿದ್ದರು. ಇದನ್ನು ನೋಡಿದ ಸತೀಶ ನಾಯ್ಕ ತನ್ನ ಸಹಚರರಾದ ಉದಯ ಮಾದವ ನಾಯ್ಕ, ಸೀತಾರಾಮ ಹನುಮಂತ ನಾಯ್ಕ ಜೊತೆ ಆಗಮಿಸಿ ಆಕ್ರಮಣ ನಡೆಸಿದ್ದಾರೆ.

ಮೊದಲಿನಿಂದಲೂ ಅನಗತ್ಯ ಕಿರಿಕಿರಿ ಮಾಡುತ್ತಿದ್ದ ಸತೀಶ ನಾಯ್ಕ ಈ ವೇಳೆ ಕುಟಾರೆ ಕಾವಿನಿಂದ ಕಾಲಿಗೆ ಹೊಡೆದಿದ್ದು, ಸಂತೋಷ ಗೌಡ ಗಾಯಗೊಂಡಿದ್ದಾರೆ. ಅದಾದ ನಂತರ ಸತೀಶ ನಾಯ್ಕರ ಜೊತೆ ಬಂದಿದ್ದ ಸಹಚರರು ಮೈಮೇಲೆ ಗುದ್ದಿ ನೋವು ಮಾಡಿದ್ದಾರೆ.

ಸಂತೋಷರ ತಂದೆ ನಾರಾಯಣ ಗೌಡ ಅಲ್ಲಿಗೆ ಬಂದು ಹೊಡೆದಾಟ ತಪ್ಪಿಸಿದ್ದಾರೆ. ಅದಾದ ನಂತರ ಸತೀಶ, ಉದಯ ಹಾಗೂ ಸೀತಾರಾಮ ಸೇರಿ ಜೀವ ಬೆದರಿಕೆ ಹಾಕಿದ ಬಗ್ಗೆ ಸಂತೋಷ ಗೌಡ ಪೊಲೀಸ್ ದೂರು ನೀಡಿದ್ದಾರೆ.

ಗಾಯಗೊಂಡ ಸಂತೋಷ ಗೌಡರನ್ನು ರಿಕ್ಷಾ ಮೇಲೆ ಕರೆದೊಯ್ದು ಹೊನ್ನಾವರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page