6

ಗಾಂಜಾ ಮಾರಾಟಕ್ಕೆ ಎಪಿಎಂಸಿಗೆ ಬಂದ ಯುವಕ!

ಮುಂಡಗೋಡು: ಗಾಂಜಾ ಮಾರಾಟಕ್ಕಾಗಿ ಎಪಿಎಂಸಿ ಬಳಿ ಬಂದ್ದಿದ್ದ ಅಪರಿಚಿತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನ ಶೋಧ ನಡೆಸಿದ್ದಾರೆ.

ಅಕ್ಟೊಬರ್ 29ರಂದು 21 ವರ್ಷದ ಯುವಕನೊಬ್ಬ ಗಾಂಜಾ ಹಿಡಿದು ಓಡಾಡುತ್ತಿದ್ದ. ಅದನ್ನು ಮಾರಾಟ ಮಾಡುವ ಉದ್ದೇಶದಿಂದ ಎಪಿಎಂಸಿ ಬಳಿ ಸಂಚರಿಸುತ್ತಿದ್ದ. ಅವರಿವರನ್ನು ಮಾತನಾಡಿಸಿ ಗಾಂಜಾ ಗಿರಾಕಿಯನ್ನು ಹುಡುಕುತ್ತಿದ್ದ. ಸಂಜೆ 7 ಗಂಟೆಯಾದ ಕಾರಣ ಕತ್ತಲು ಆವರಿಸಿದ್ದು, ಆತನ ಗುರುತು ಸಿಕ್ಕುವ ಹಾಗಿರಲಿಲ್ಲ.

ಗಾಂಜಾ ವ್ಯಾಪಾರ ಮಾಡುತ್ತಿರುವ ಯುವಕನ ಬಗ್ಗೆ ಅರಿತ ಪಿಐ ರಂಗನಾಥ ನೀಲಮ್ಮನವರ್ ಅಲ್ಲಿ ತೆರಳಿ ಪರಿಶೀಲನೆ ನಡೆಸಿದ್ದರು. ಪೊಲೀಸರ ವಾಹನ ನೋಡಿ ಆತ ಅಲ್ಲಿಂದ ಪರಾರಿಯಾಗಿದ್ದ. ಅದಾಗಿಯೂ ಪೊಲೀಸರು ಎಪಿಎಂಸಿ ಬಳಿ ಗಾಂಜಾ ಮಾರಲು ಉದ್ದೇಶಿಸಿದ ಅಪರಿಚಿತ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ ಅಪರಿಚಿತನ ಹುಡುಕಾಟ ಮುಂದುವರೆದಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page