6

ಅಕ್ಕನ ಮನೆಗೆ ನುಗ್ಗಿ ರಂಪಾಟ: ರಾಜಿಗೆ ಬಂದವ ರಾಡಿನಿಂದ ಹೊಡೆದ!

ಯಲ್ಲಾಪುರ: ಇಡಗುಂದಿಯ ಗಣೇಶ ಸಿದ್ದಿ ಎಂಬಾತ ಆತನ ಅಕ್ಕ ಶೀಲಾ ಸಿದ್ದಿ ಅವರ ಮನೆಗೆ ನುಗ್ಗಿ ರಂಪಾಟ ನಡೆಸಿದ್ದಾನೆ. ಅಕ್ಕನ ಕೈ ಬೆರಳು ಕಚ್ಚಿದ ಆತ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಕೊಲೆ ಪ್ರಯತ್ನವನ್ನು ಮಾಡಿದ್ದಾನೆ.

ಗಣೇಶ ಪೆದ್ರು ಸಿದ್ದಿ (30) ವೃತ್ತಿಯಲ್ಲಿ ಚಾಲಕ. ಆತನಿಗೆ ಗೀತಾ ರವೀಂದ್ರ ಸಿದ್ದಿ (35) ಹಾಗೂ ಶೀಲಾ ಕೃಷ್ಣ ಸಿದ್ದಿ (36) ಎಂಬ ಇಬ್ಬರು ಅಕ್ಕಂದಿರು. ಇಬ್ಬರ ಜೊತೆಯೂ ಆತ ಪದೇ ಪದೇ ಜಗಳ ಮಾಡುತ್ತಿದ್ದ. 2022ರಲ್ಲಿ ಆತ ದೊಡ್ಡದಾಗಿ ಜಗಳ ಮಾಡಿದ ಕಾರಣ ಶೀಲಾ ಸಿದ್ದಿ ಪೊಲೀಸ್ ದೂರು ನೀಡಿದ್ದರು. ಆ ದೂರು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಆ ದೂರಿಗೆ ಸಂಬAಧಿಸಿ `ರಾಜಿ ಮಾಡಿಕೊಳ್ಳೋಣ’ ಎಂದು ಗಣೇಶ ಸಿದ್ದಿ ಅಕ್ಕನಲ್ಲಿ ಹೇಳಿಕೊಂಡಿದ್ದ. ಆದರೆ, ಶೀಲಾ ಸಿದ್ದಿ ಇದಕ್ಕೆ ಒಪ್ಪಿರಲಿಲ್ಲ.

ತನ್ನ ವಿರುದ್ಧ ಪ್ರಕರಣ ದಾಖಲಿಸಿದ ಕಾರಣ ಶೀಲಾ ಸಿದ್ದಿ ಅವರನ್ನು ಗಣೇಶ ಸಿದ್ದಿ ದುರುಗುಟ್ಟಿ ನೋಡುತ್ತಿದ್ದ. ಸಿಕ್ಕಾಗಲೆಲ್ಲ ಕೆಟ್ಟದಾಗಿ ಬಯ್ಯುತ್ತಿದ್ದ. ಅಕ್ಟೊಬರ್ 30ರ ಬೆಳಗ್ಗೆ 5 ಗಂಟೆಗೆ ಶೀಲಾ ಸಿದ್ದಿ ಅವರ ಮನೆಗೆ ಗಣೇಶ ಸಿದ್ದಿ ನುಗ್ಗಿ ರಂಪಾಟ ನಡೆಸಿದ್ದ. ಅಕ್ಕನ ಬಲಗೈ ಹೆಬ್ಬರಳನ್ನು ಕಚ್ಚಿ ಗಾಯಗೊಳಿಸಿದ್ದ. ಜೊತೆಗೆ ಕಬ್ಬಿಣದ ರಾಡಿನಿಂದ ಶೀಲಾ ಸಿದ್ದಿ ಅವರ ತಲೆ ಮೇಲೆ ಹೊಡೆದು ಕೊಲೆ ಪ್ರಯತ್ನವನ್ನು ಮಾಡಿದ್ದ.

ಗಾಯಗೊಂಡ ಶೀಲಾ ಸಿದ್ದಿ ಅವರನ್ನು ಅವರ ತಾಯಿ ಜಾನಕಿ ಸಿದ್ದಿ ಹಾಗೂ ಪತಿ ಕೃಷ್ಣ ಸಿದ್ದಿ ರಕ್ಷಿಸಿದರು. ಜೊತೆಗೆ ಕಬ್ಬಿಣದ ರಾಡ್ ಹಿಡಿದು ನಿಂತಿದ್ದ ಕೃಷ್ಣಾ ಸಿದ್ದಿಯನ್ನು ಸುಮ್ಮನಿರಿಸುವ ಪ್ರಯತ್ನ ನಡೆಸಿದ್ದರು. ಆದರೆ, ಈ ವೇಳೆ ಅಲ್ಲಿಯೇ ಇದ್ದ ಇನ್ನೊಬ್ಬ ಅಕ್ಕ ಗೀತಾ ಸಿದ್ದಿ ಅವರ ಮೇಲೆ ಕೃಷ್ಣ ಸಿದ್ದಿ ಕೈ ಮಾಡಿದ್ದ. ಜಗಳ ಬಿಡಿಸಲು ಬಂದವರನ್ನು ಸಹ ದೂಡಾಡಿದ್ದ. ಇದರೊಂದಿಗೆ ಮನೆಯ ಸಾಮಗ್ರಿಗಳನ್ನು ಸಹ ಒಡೆದು ಹಾಕಿ ಹಾನಿ ಮಾಡಿದ.

ಈ ಎಲ್ಲಾ ಹಿನ್ನಲೆ ಇಡಗುಂದಿಯ ಜನತಾ ಕಾಲೋನಿಯಲ್ಲಿ ವಾಸ ಮಾಡುವ ಗೀತಾ ರವೀಂದ್ರ ಸಿದ್ದಿ ಪೊಲೀಸ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಿಎಸ್‌ಐ ಸಿದ್ದಪ್ಪ ಗುಡಿ ತನಿಖೆ ಶುರು ಮಾಡಿದ್ದಾರೆ.

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page