6

ನೆಂಟರ ಮನೆಗೆ ಹೋಗಿ ಮರಳಿದವರಿಗೆ ಆಘಾತ: ಪೂಜೆ ಮುಗಿಸಿ ಬಂದವವರ ಮನೆಯೇ ನಾಪತ್ತೆ!

ಕುಮಟಾ: ಹೋಟೆಲ್ ವ್ಯವಹಾರ ನಡೆಸುವ ಸಂತೋಷ ಪ್ರಭು ಅವರು ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಂಬoಧಿಕರ ಮನೆಗೆ ಹೋಗಿದ್ದರು. ಪೂಜೆ ಮುಗಿಸಿ ಅವರು ಊರಿಗೆ ಮರಳಿದಾಗ ಅವರ ಮನೆಯೇ ಇರಲಿಲ್ಲ!

ಹಳೆ ಹೆರವಟ್ಟಾ ಸಂತೋಷ ದಾಮೋದರ ಪ್ರಭು ಅವರಯ ಅಕ್ಟೊಬರ್ 22ರಂದು ತಮ್ಮ ಕುಟುಂಬದವರ ಜೊತೆ ಮಂಕಿ ಗ್ರಾಮಕ್ಕೆ ತೆರಳಿದ್ದರು. ಅ 24ರಂದು ಅವರು ಎಲ್ಲಾ ಧಾರ್ಮಿಕ ಕಾರ್ಯಕ್ರಮ ಮುಗಿಸಿ ಹಳೆ ಹೆರವಟ್ಟಾಗೆ ಆಗಮಿಸಿದ್ದರು. ಆದರೆ, ಅಲ್ಲಿದ್ದ ಅವರ ಮನೆಯನ್ನು ಅವರ ದಾಯಾದಿ ಸುಂದರ ಗಣಪತಿ ಪ್ರಭು ನಾಶ ಮಾಡಿದ್ದರು. `ಆಸ್ತಿ ವಿಷಯವಾಗಿ ದ್ವೇಷ ಸಾಧಿಸುತ್ತಿದ್ದ ಸುಂದರ ಪ್ರಭು ತಮ್ಮ ಸುಂದರ ಮನೆಯನ್ನು ಕೆಡವಿದ್ದಾರೆ’ ಎಂದು ಸಂತೋಷ ಪ್ರಭು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ.

`ತಾವು ಇಲ್ಲದಿರುವಾಗ ಮನೆಯೊಗೆ ಅಕ್ರಮ ಪ್ರವೇಶ ಮಾಡಿದ ಸಂತೋಷ ಪ್ರಭು ಕಲ್ಲಿನ ಗೋಡೆ ಕೆಡವಿದ್ದು, ಮೇಲ್ಚಾವಣಿಯನ್ನು ಬೀಳಿಸಿ ಹಾನಿ ಮಾಡಿದ್ದಾರೆ. ಮನೆಯೊಳಗಿದ್ದ ಗೃಹ ಬಳಕೆ ವಸ್ತುಗಳನ್ನು ನಾಶ ಮಾಡಿದ್ದು, ಲಕ್ಷಾಂತರ ರೂ ನಷ್ಟವಾಗಿದೆ’ ಎಂದು ಸಂತೋಷ ಪ್ರಭು ಪೊಲೀಸ್ ದೂರು ನೀಡಿದ್ದಾರೆ.

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page