6

ಬಸ್ ನಿಲ್ದಾಣದಲ್ಲಿದ್ದ ಬೈಕ್ ಅಪಹರಣ: ನಾಲ್ವರು ಅಪರಿಚಿತರಿಗಾಗಿ ಹುಡುಕಾಟ

ಭಟ್ಕಳ: ಇಲ್ಲಿನ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಬೈಕ್ ಕಳ್ಳತನವಾಗಿದೆ.

ಅನಪಾಲ ಸೂಪರ್ ಮಾರ್ಕೇಟಿನಲ್ಲಿ ಕೆಲಸ ಮಾಡುವ ತಿರುಮಲ ಮಂಜುನಾಥ ಮೊಗೇರ ಬೈಕ್ ಕಳೆದುಕೊಂಡವರು. ಹೆಬ್ಳೆಯ ಗೌಡನಮನೆ ಹರ‍್ತಾರಿನವರಾದ ತಿರುಮಲ ಅವರು ಅಕ್ಟೊಬರ್ 30ರಂದು ಬೆಳಗ್ಗೆ 8.20ಕ್ಕೆ ಬಸ್ ನಿಲ್ದಾಣದಲ್ಲಿ ತಮ್ಮ ಹಿರೋ ಸ್ಪಾಂಡರ್ ಬೈಕ್ ನಿಲ್ಲಿಸಿದ್ದರು. ರಾತ್ರಿ 10.30ಕ್ಕೆ ಅವರು ಬಸ್ ನಿಲ್ದಾಣಕ್ಕೆ ಮರಳಿ ಬಂದಾಗ ಬೈಕ್ ಇರಲಿಲ್ಲ.

ಪರಿಶೀಲನೆ ನಡೆಸಿದಾಗ ನಾಲ್ವರು ಆಗಮಿಸಿ ಬೈಕ್ ಅಪಹರಿಸಿರುವುದು ಅವರಿಗೆ ಖಚಿತವಾಗಿದೆ. 40 ಸಾವಿರ ರೂ ಮೌಲ್ಯದ ಬೈಕ್ ಕದ್ದವರನ್ನು ಪತ್ತೆ ಮಾಡುವಂತೆ ಅವರು ಪೊಲೀಸ್ ದೂರು ನೀಡಿದ್ದಾರೆ.

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page