6

ದೀಪಾವಳಿ | ಹಬ್ಬದ ಬಲಿ ಪಡೆದ ಹೋರಿ!

ಮುಂಡಗೋಡ: ದೀಪಾವಳಿ ಅಂಗವಾಗಿ ನಡೆದ ‘ಹೋರಿ ಹಬ್ಬ’ದ ವೇಳೆ ಅವಘಡ ನಡೆದಿದೆ. ಜಾನುವಾರು ಬೆದರಿಸುವ ಸ್ಪರ್ಧೆ ನೋಡಲು ಆಗಮಿಸಿದವನ ಮೇಲೆ ಹೋರಿ ದಾಳಿ ನಡೆಸಿದ್ದು ಆ ಆಕ್ರಮಣಕ್ಕೆ 21 ವರ್ಷದ ಯುವಕ ಸಾವನಪ್ಪಿದ್ದಾನೆ.

ಚಿಗಳ್ಳಿ ಗ್ರಾಮದ ಕಲ್ಮೇಶ್ವರ ಮಠದ ಬಳಿ ದೀಪಾವಳಿ ಹಬ್ಬದ ವೇಳೆ ಸಾಂಪ್ರದಾಯಿಕ ‘ಹೋರಿ ಹಬ್ಬ’ ನಡೆಯುತ್ತದೆ. ಈ ಹಿಂದೆ ಸಹ ಹೋರಿ ಬೆದರಿಸುವ ವೇಳೆ ಸಾವು-ನೋವು ಸಂಭವಿಸಿದ್ದರಿಂದ ಈ ಸ್ಪರ್ಧೆ ನಡೆಸಲು ಸರ್ಕಾರ ಅನುಮತಿ ನೀಡುತ್ತಿಲ್ಲ. ಅದಾಗಿಯೂ ಈ ಬಾರಿ ಊರಿನವರು ಈ ಸ್ಪರ್ಧೆಗೆ ಅವಕಾಶ ಕೋರಿದ್ದು, ಪೊಲೀಸರು ಸಹಮತ ವ್ಯಕ್ತಪಡಿಸಿರಲಿಲ್ಲ.

ಆದರೂ, ಸಂಪ್ರದಾಯ ಮುಂದುವರೆಸುವ ನಿಟ್ಟಿನಲ್ಲಿ ಶನಿವಾರ ಹೋರಿ ಬೆದರಿಸುವ ಸ್ಪರ್ಧೆ ನಡೆಯಿತು. ಈ ವೇಳೆ ಆಕ್ರಮಣಾಕಾರಿ ಹೋರಿ ಜನ ನೆರೆದಿದ್ದ ಕಡೆ ನುಗ್ಗಿದ್ದು ಅಲ್ಲಿದ್ದವರು ಹೋರಿಯಿಂದ ತಪ್ಪಿಸಿಕೊಳ್ಳಲು ಓಡಲು ಶುರು‌ ಮಾಡಿದರು. ಈ ವೇಳೆ ಎದುರಿಗೆ ಸಿಕ್ಕ ಪರಮೇಶ ಹರಿಜನ ಎಂಬಾತರನ್ನು ಹೋರಿ ಇರಿದಿದೆ.

ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಪರಮೇಶ ಅವರನ್ನು ಬದುಕಿಸಿಕೊಳ್ಳುವ ಪ್ರಯತ್ನ ನಡೆಯಿತು. ಆದರೆ, ಪ್ರಯೋಜನವಾಗಲಿಲ್ಲ.

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsapp ಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsapp ಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ…

    You cannot copy content of this page