6

ಯಲ್ಲಾಪುರ ಬಸ್ ನಿಲ್ದಾಣ | ರಾಜ್ಯೋತ್ಸವವೂ ಇಲ್ಲ… ದೀಪಾವಳಿ ಸಡಗರವೂ ಇಲ್ಲ!

ಯಲ್ಲಾಪುರ: ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬವನ್ನು ರಾಜ್ಯದ ಎಲ್ಲಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಯಲ್ಲಾಪುರ ಬಸ್ ನಿಲ್ದಾಣದಲ್ಲಿ ಹಬ್ಬದ ಸಡಗರವೇ ಕಾಣುತ್ತಿಲ್ಲ. ಹೊಸ ದೀಪಗಳ ಅಲಂಕಾರ ಮಾಡಿಲ್ಲ. ಹಾಳಾದ ದೀಪಗಳನ್ನು ಸಹ ಸರಿಪಡಿಸಿಲ್ಲ!

ಕನ್ನಡ ರಾಜ್ಯೋತ್ಸವದಂದು ಎರಡು ಬಸ್’ನ್ನು ಅಲಂಕರಿಸಿದ್ದು ಬಿಟ್ಟು K S R T C ಬೇರೆನೂ ಮಾಡಿಲ್ಲ. ದೀಪಾವಳಿಗೆ ಸಹ ಎಲ್ಲಾ ದೀಪಗಳನ್ನು ಬೆಳಗಿಲ್ಲ. K S R T C ಬಸ್ ನಿಲ್ದಾಣದಲ್ಲಿ ಹಲವು ಮಳಿಗೆಗಳನ್ನು ನಿರ್ಮಿಸಲಾಗಿದೆ. ಆ ಮಳಿಗೆಗಳಿಂದ ಬಾಡಿಗೆ ರೂಪದಲ್ಲಿ ಲಕ್ಷಾಂತರ ರೂ ಬಾಡಿಗೆ ನಿಗಮಕ್ಕೆ ಬರುತ್ತಿದೆ. ಆದರೆ, ನಿಲ್ದಾಣದ ಒಳಗಿನ ಸ್ವಚ್ಛತೆ ಕಾಪಾಡುವಿಕೆ ಹಾಗೂ ದೀಪಗಳ ಬೆಳಗುವುದುಕ್ಕೆ ಸಹ ಮೀನಾಮೇಷ ಎಣಿಸುತ್ತಿದೆ.‘

ಬಸ್ ನಿಲ್ದಾಣದಲ್ಲಿನ ಬಹುತೇಕ ಲೈಟುಗಳು ಹಾಳಾಗಿದೆ. ಹಬ್ಬದ ಅವಧಿಯಲ್ಲಿ ಬಸ್ ನಿಲ್ದಾಣವನ್ನು ತೊಳೆಯುವ ಕೆಲಸ ಸಹ ನಡೆದಿಲ್ಲ. ಬೇರೆ ಬೇರೆ ಊರುಗಳಿಂದ ಇಲ್ಲಿ ಜನ ಬರುತ್ತಿದ್ದು, ನಿಗಮದ ಅಶುಚಿತ್ವ ಹಾಗೂ ಬೇಜವಬ್ದಾರಿಯಿಂದ ನಿಗಮದ ಮಾನ ಹರಾಜಾಗುತ್ತಿದೆ’ ಎಂದು ಪಟ್ಟಣ ಪಂಚಾಯತ ಸದಸ್ಯ ಸೋಮು ನಾಯ್ಕ ಅಭಿಪ್ರಾಯಪಟ್ಟರು.

K S R T C ನಿಗಮದ ಈ ನಡೆಗೆ ದಲಿತ ಸಂಘಟನಾ ಸಮಿತಿಯ ಜಿಲ್ಲಾಧ್ಯಕ್ಷ ಮಾರುತಿ ಬೋವಿ ವಡ್ಡರ, ಲಾರಿ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಸುಜಯ ಮರಾಠಿ, ಪ್ರಮುಖರಾದ ಪ್ರತಾಪ ಶಿವಯೋಗಿ, ಸುರೇಶ್ ಕಟ್ಟದಮನಿ, ತೊಳಾರಾಮಜಿ ಅತ್ತರವಾಲ, ಸಂಜೀವ್ ಜಾಧವ್ ಹಾಗೂ ಬಸವರಾಜ್ ಬೋವಿ ಅಸಮಧಾನ ವ್ಯಕ್ತಪಡಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page