6

ಬೈಕಿನಿಂದ ಬಿದ್ದ ಕಟ್ಟಡ ಕಾರ್ಮಿಕ: ಪರಿಸ್ಥಿತಿ ಗಂಭೀರ!

ಕಾರವಾರ: ಹಬ್ಬುವಾಡ ಬಳಿಯ ಕುಂಠಿ ಮಹಾಮಾಯಾ ದೇವಾಲಯ ತಿರುವಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಯಲ್ಲಪ್ಪ ಕನಸಾವಿ ಗಾಯಗೊಂಡಿದ್ದಾರೆ. ಬೈಕಿನಿಂದ ಬಿದ್ದ ರಭಸಕ್ಕೆ ತಲೆಗೆ ಗಂಭೀರ ಪೆಟ್ಟಾಗಿದ್ದು, ಕಿವಿಯಿಂದ ರಕ್ತ ಬಂದಿದೆ.

ದೇವಳಿವಾಡ ದುರ್ಗಾದೇವಿ ದೇವಾಲಯದ ಬಳಿ ವಾಸವಾಗಿದ್ದ ಯಲ್ಲಪ್ಪ ಕನಸಾವಿ ಅವರು ಸೆಂಟ್ರಿoಗ್ ಕೆಲಸ ಮಾಡಿಕೊಂಡಿದ್ದರು. ಜ 2ರ ಮಧ್ಯಾಹ್ನ ಅವರು ಕಾರವಾರ ಕೈಗಾ ರಸ್ತೆಯಲ್ಲಿ ವೇಗವಾಗಿ ಬೈಕ್ ಓಡಿಸುತ್ತಿದ್ದರು. ದೇವಳಿವಾಡದ ತಮ್ಮ ಮನೆ ಕಡೆ ತಲುಪಬೇಕಿದ್ದ ಅವರು ಕುಂಠಿ ಮಹಾಮಾಯಾ ದೇವಾಲಯದ ತಿರುವಿನಲ್ಲಿ ಬೈಕಿನ ಮೇಲಿನ ನಿಯಂತ್ರಣ ಕಳೆದುಕೊಂಡರು.

ಬೈಕಿನಿoದ ಬಿದ್ದ ರಭಸಕ್ಕೆ ತಲೆ ಹಿಂಭಾಗ ಗಾಯವಾಗಿದೆ. ತಲೆ ಒಳಭಾಗದಲ್ಲಿ ಸಹ ಅವರಿಗೆ ಪೆಟ್ಟಾಗಿದ್ದು, ಬಲ ಕಿವಿಯಿಂದ ರಕ್ತ ಸೋರಲು ಶುರುವಾಗಿದೆ. ಇದನ್ನು ನೋಡಿದ ಸ್ಥಳೀಯರು ಯಲ್ಲಪ್ಪ ಕನಸಾವಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸೆಂಟ್ರಿoಗ್ ಕೆಲಸ ಮಾಡುವ ಸೋನಾರವಾಡದ ಪರಶುರಾಮ ಕನಸಾವಿ ಈ ಬಗ್ಗೆ ಪೊಲೀಸರಿಗೆ ವರದಿ ಒಪ್ಪಿಸಿದ್ದು, ಪ್ರಕರಣ ದಾಖಲಾಗಿದೆ.

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page