6

ಬಿಕ್ಷೆ ಬೇಡಿ ಸರಾಯಿ ಸೇವನೆ: ಗಾಳಿ-ಚಳಿಗೆ ವ್ಯಸನಿ ಸಾವು!

ಕಾರವಾರ: ನಗರದ ಎಲ್ಲಡೆ ಬಿಕ್ಷೆ ಬೇಡಿ ಅದರಿಂದ ದೊರೆತ ಹಣದಿಂದ ಸರಾಯಿ ಸೇವಿಸಿ ಬದುಕಿದ್ದ ಹನುಮಂತಪ್ಪ ಬಗರೀಗೇರ ಅತಿಯಾದ ಕುಡಿತ, ಪಾರ್ಶವಾಯು ಹಾಗೂ ಗಾಳಿ-ಚಳಿಯಿಂದ ನಡುಗಿ ಸಾವನಪ್ಪಿದ್ದಾರೆ.

ಹಾವೇರಿಯ ಹನುಮಂತಪ್ಪ ಬಗರೀಗೇರ (60) ನಂದನಗದ್ದಾದ ದೇವತಿಶೆಟ್ಟಾದಲ್ಲಿ ವಾಸವಾಗಿದ್ದರು. ಉದ್ಯೋಗವಿಲ್ಲದ ಕಾರಣ ಅವರು ಬಿಕ್ಷಾಟನೆ ಮಾಡುತ್ತಿದ್ದರು. ಬಿಕ್ಷಾಟನೆಯಿಂದ ದೊರೆತ ಹಣವನ್ನು ಪೂರ್ತಿಯಾಗಿ ಸರಾಯಿ ಅಂಗಡಿಗೆ ನೀಡುತ್ತಿದ್ದರು. ಎಲ್ಲೆಂದರಲ್ಲಿ ಮಲಗಿ ರಾತ್ರಿ ಕಳೆಯುತ್ತಿದ್ದ ಅವರು ಕಳೆದ ಎರಡು ವರ್ಷಗಳಿಂದ ಮನೆಗೂ ಹೋಗಿರಲಿಲ್ಲ. ಈ ನಡುವೆ ಪಾರ್ಶವಾಯು ರೋಗಕ್ಕೂ ತುತ್ತಾಗಿದ್ದರು.

ಜನವರಿ 2ರಂದು ಟಾಗೂರ್ ಕಡಲತೀರ ಬಳಿಯಿರುವ ಮೇಲ್ಸೆತುವೆ ಕೆಳಗೆ ಅವರು ಮಲಗಿದ್ದರು. ಅತಿಯಾದ ಕುಡಿತ, ಪಾರ್ಶವಾಯು ರೋಗ ಹಾಗೂ ಚಳಿಯಿಂದ ನಡುಗಿ ಅವರು ಸಾವನಪ್ಪಿದರು. ಅವರ ಪತ್ನಿ ಗಂಗಮ್ಮ ಅವರು ಪೊಲೀಸ್ ಪ್ರಕರಣ ದಾಖಲಿಸಿ ಶವ ಪಡೆದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page