6

ಪಾದಚಾರಿಗೆ ಗುದ್ದಿದ ಲಾರಿ: ಸ್ಥಳದಲ್ಲಿಯೇ ಸಾವು

ಯಲ್ಲಾಪುರ: ಹುಬ್ಬಳ್ಳಿ – ಅಂಕೋಲಾ ಹೆದ್ದಾರಿ ಅಂಚಿನಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಲಾರಿ ಗುದ್ದಿದೆ. ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.

ಯಲ್ಲಾಪುರ ತೋಟಗಾರಿಕಾ ಇಲಾಖೆ ಕಚೇರಿ ಎದುರು ಈ ಅಪಘಾತ ನಡೆದಿದೆ. ಲಾರಿ ಗುದ್ದಿದ ರಭಸಕ್ಕೆ ನೂತನ ನಗರದ ಯಲ್ಲಪ್ಪ ಗಣಾಚಾರಿ (60) ಸ್ಥಳದಲ್ಲಿಯೇ ಕೊನೆ ಉಸಿರೆಳೆದಿದ್ದಾರೆ.

ವಿಜಯಪುರದ ಶರಣಯ್ಯ ಹಿರೇಮಠ ಎಂಬಾತರು ಜನವರಿ 4ರ ಸಂಜೆ ಕಾರವಾರ ಕಡೆಯಿಂದ ಹುಬ್ಬಳ್ಳಿ ಕಡೆ ಲಾರಿ ಓಡಿಸುತ್ತಿದ್ದರು. ಯಲ್ಲಾಪುರ ತೋಟಗಾರಿಕಾ ಕಚೇರಿ ಬಳಿ ಅವರು ಲಾರಿಯ ವೇಗ ಹೆಚ್ಚಿಸಿದ್ದು, ಇನ್ನೊಂದು ವಾಹನ ಹಿಂದಿಕ್ಕುವ ಬರದಲ್ಲಿ ತೀರಾ ಬಲ ಬದಿಗೆ ಲಾರಿ ಓಡಿಸಿದರು. ಆ ವೇಳೆ ರಸ್ತೆ ಅಂಚಿನಲ್ಲಿ ನಡೆದು ಹೋಗುತ್ತಿದ್ದ ಯಲ್ಲಪ್ಪ ಗಣಾಚಾರಿ ಅವರಿಗೆ ಲಾರಿ ಡಿಕ್ಕಿಯಾಯಿತು.

ನೆಲಕ್ಕೆ ಬಿದ್ದ ಯಲ್ಲಪ್ಪ ಗಣಾಚಾರಿ ಅವರ ತಲೆಗೆ ಭಾರೀ ಪ್ರಮಾಣದಲ್ಲಿ ಪೆಟ್ಟಾಯಿತು. ಮೂಗಿನಿಂದ ರಕ್ತ ಸುರಿಯುತ್ತಿತ್ತು. ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯವು ಪ್ರಯತ್ನ ನಡೆದರೂ ಪ್ರಯೋಜನವಾಗಲಿಲ್ಲ. ಯಲ್ಲಪ್ಪ ಗಣಾಚಾರಿ ಅವರು ಹೆದ್ದಾರಿ ಅಂಚಿನಲ್ಲಿಯೇ ಹೊರಳಾಡಿ ಸಾವನಪ್ಪಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page