6

ಪ್ಲೆವುಡ್ ಗಾಡಿಗೆ ಗುದ್ದಿದ ಲಾರಿ: ಚಾಲಕ ಸಾವು

ಜೊಯಿಡಾ: ಹುಬ್ಬಳ್ಳಿಯಿಂದ ಗೋವಾಗೆ ಸಂಚರಿಸುತ್ತಿದ್ದ ಟಾಟಾ ಇಂಟ್ರಾ ವಾಹನಕ್ಕೆ ಗೋವಾದಿಂದ ಬಂದ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಟಾಟಾ ಇಂಟ್ರಾ ಗೂಡ್ಸ ಚಲಾಯಿಸುತ್ತಿದ್ದ ಮಂಜುನಾಥ ಎಮ್ಮಿ ಸಾವನಪ್ಪಿದ್ದಾರೆ.

ಹುಬ್ಬಳ್ಳಿಯ ಮಂಜುನಾಥ ಎಮ್ಮಿ (31) ಅವರು ಟಾಟಾ ಇಂಟ್ರಾ ಗೂಡ್ಸ ಹೊಂದಿದ್ದರು. ಅದಕ್ಕೆ ಅವರೇ ಚಾಲಕರಾಗಿದ್ದರು. ಜನವರಿ 4ರ ಸಂಜೆ ಅವರು ಹುಬ್ಬಳ್ಳಿಯಿಂದ ಗೋವಾಗೆ ಪ್ಲೆವುಡ್ ತೆಗೆದುಕೊಂಡು ಹೋಗುತ್ತಿದ್ದರು. ಬೆಳಗಾವಿ ಪಣಜಿ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಅವರಿಗೆ ಆನಮೋಡ ಅಬಕಾರಿ ತಪಾಸಣಾ ಕೇಂದ್ರದ ಬಳಿ ಎದುರಿನಿಂದ ಬಂದ ಲಾರಿ ಡಿಕ್ಕಿಯಾಯಿತು.

ಗೋವಾ ಕಡೆಯಿಂದ ಲಾರಿ ಓಡಿಸಿಕೊಂಡು ಬರುತ್ತಿದ್ದ ಗದಗದ ಪ್ರವೀಣ ಪರಡ್ಡಿ ಅವರು ಮಂಜುನಾಥ ಎಮ್ಮಿ ಅವರ ವಾಹನಕ್ಕೆ ತಮ್ಮ ಲಾರಿ ಗುದ್ದಿದರು. ಅಪಘಾತದ ರಭಸಕ್ಕೆ ಮಂಜುನಾಥ ಎಮ್ಮಿ ಅವರ ಕಾಲಿನ ಪಾದ ತುಂಡಾಗಿದ್ದು, ಮುಖಕ್ಕೂ ಭಾರೀ ಪ್ರಮಾಣದಲ್ಲಿ ಪೆಟ್ಟಾಯಿತು. ತಾಸಿನ ಒಳಗೆ ಮಂಜುನಾಥ ಎಮ್ಮಿ ಅವರು ಸಾವನಪ್ಪಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page