6

ಮೀನು ಒಣಗಿಸುವ ಕೇಂದ್ರವಾದ ಹೆದ್ದಾರಿ ಅಂಚಿನ ರಸ್ತೆ!

ಕುಮಟಾ: ದಿವಗಿ ಬಸ್ ನಿಲ್ದಾಣದ ಎದುರಿನ ಸರ್ವೀಸ್ ರಸ್ತೆಯಲ್ಲಿ ಒಳ್ಳೆಯ ಬಿಸಿಲಿದೆ. ಹೀಗಾಗಿ ಅನೇಕರು ಅಲ್ಲಿ ಮೀನು ಒಣಗಿಸುತ್ತಾರೆ!

ಈ ರಸ್ತೆಯಲ್ಲಿ ಸ್ಥಳೀಯ ಬಸ್ಸುಗಳ ಓಡಾಟವಿದೆ. ರಸ್ತೆ ಮೇಲೆ ಮೀನು ಒಣಗಿಸುವುದರಿಂದ ಬಸ್ ಓಡಾಟಕ್ಕೆ ಸಮಸ್ಯೆಯಾಗಿದೆ. ಹೆದ್ದಾರಿಯಲ್ಲಿ ಸಂಚರಿಸುವ ಸ್ಥಳೀಯ ಬಸ್ಸಿನವರು ಮೊದಲು ಸರ್ವೀಸ್ ರಸ್ತೆಗೆ ಬಂದು ಅಲ್ಲಿನ ನಿಲ್ದಾಣದ ಬಳಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದರು. ಆದರೆ, ಇದೀಗ ಅಲ್ಲಿ ಮೀನು ಒಣಗಿಸುತ್ತಿರುವುದರಿಂದ ಯಾವ ಬಸ್ಸಿನವರು ಸರ್ವಿಸ್ ರಸ್ತೆಗೆ ಇಳಿಯುತ್ತಿಲ್ಲ. ಹೆದ್ದಾರಿ ಮೇಲೆಯೂ ಬಸ್ಸು ನಿಲ್ಲಿಸುತ್ತಿಲ್ಲ.

ಎಲ್ಲಾ ಬಸ್ಸಿನವರು ಹೆದ್ದಾರಿ ಮೂಲಕ ನೇರವಾಗಿ ಮುಂದೆ ಸಾಗುವುದರಿಂದ ದಿವಿಗಿ ಬಸ್ ನಿಲ್ದಾಣದಲ್ಲಿನ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿದೆ. ಈ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವವರಿಗೆ ಖಾಸಗಿ ವಾಹನ ಹಿಡಿದು ಸಂಚರಿಸುವುದು ಅನಿವಾರ್ಯವಾಗಿದೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page