6

ಮದ್ಯದೊಡತಿ ಮನೆ ಮೇಲೆ ದಾಳಿ: ಪೊಲೀಸರಿಗೆ ಸಿಕ್ಕಿದ್ದು ಬಗೆ ಬಗೆಯ ಪೇಯ!

ಜೊಯಿಡಾ: ನೆರೆ ರಾಜ್ಯದಿಂದ ಕಡಿಮೆ ಬೆಲೆಗೆ ಸರಾಯಿ ಬಾಟಲಿಗಳನ್ನು ತಂದು ದುಪ್ಪಟ್ಟು ಬೆಲೆಗೆ ಮಾರುತ್ತಿದ್ದ ಮಹಿಳೆಯ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಮನೆ ಹಿಂದಿನ ಹಿತ್ತಲಿನಲ್ಲಿ ಅಡಗಿಸಿದ್ದ 48 ಮದ್ಯದ ಬಾಟಲಿಗಳು ಸಿಕ್ಕಿದೆ.

ಅಣಶಿ ಪಾಟ್ನೆ ಬಳಿಯ ಬಿಡೋಲಿ ಸುಜಾತಾ ಮಿರಾಶಿ ಗೋವಾಗೆ ಹೋದಾಗ ಭಾರೀ ಪ್ರಮಾಣದ ಸರಾಯಿ ಬಾಟಲಿಗಳನ್ನು ತಂದಿದ್ದರು. ಮನೆ ಹಿಂದಿನ ಹಿತ್ತಲಿನಲ್ಲಿ ಅದನ್ನು ಅಡಗಿಸಿಟ್ಟಿದ್ದರು. ಕಟ್ಟಿಗೆ ರಾಶಿ ಮಾಡುವ ಸ್ಥಳದಲ್ಲಿಯೂ ಒಂದಷ್ಟು ಬಾಟಲಿಗಳು ಅಡಗಿದ್ದವು.

ತರಕಾರಿ ಬೆಳೆಯುವ ಹಿತ್ತಲಿನಲ್ಲಿ ಗುಡಿಸಲು ನಿರ್ಮಿಸಿದ ಸುಜಾತಾ ಮಿರಾಶಿ ಅಲ್ಲಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದರು. ಅಗ್ಗದ ಗೋವಾ ಸರಾಯಿಗೆ ಇಲ್ಲಿ ಅವರು ದುಪ್ಪಟ್ಟು ಬೆಲೆ ಪಡೆಯುತ್ತಿದ್ದರು. ಮದ್ಯ ಮಾರಾಟ ಹಾಗೂ ದಾಸ್ತಾನಿಗೆ ಅವರ ಬಳಿ ಅನುಮತಿ ಇರಲಿಲ್ಲ. ಗೋವಾ ಮದ್ಯ ಮಾರಾಟಕ್ಕೆ ಅವಕಾಶವೂ ಇಲ್ಲ.

ರಾಜ್ಯದ ತೆರಿಗೆ ತಪ್ಪಿಸಿ ಕಾಳಸಂತೆಯಲ್ಲಿ ನಡೆಯುತ್ತಿದ್ದ ವ್ಯವಹಾರದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನಲೆ ಜನವರಿ 4ರಂದು ಪಿಎಸ್‌ಐ ಮಹಾದೇವಿ ನಾಯ್ಕೋಡಿ ಅವರು ದಾಳಿ ನಡೆಸಿದರು. ಉರುವಲು ಕಟ್ಟಿಗೆ ಇಡುವ ಜಾಗದಲ್ಲಿದ್ದ 36 ಬಾಟಲಿ ಗೋವಾದ ಫೆನ್ನಿಯನ್ನು ಅವರು ಪತ್ತೆ ಮಾಡಿದರು. ಮನೆ ಪಕ್ಕದ ಗುಡಿಸಲಿನಲ್ಲಿದ್ದ 12 ಬಾಟಲಿ ಗೋವಾ ಸ್ಪೇಶನ್ ಫೆನ್ನಿಯನ್ನು ಪೊಲೀಸ್ ಸಿಬ್ಬಂದಿ ಹುಡುಕಿದರು.

ಪೊಲೀಸರನ್ನು ಕಂಡ ಸುಜಾತಾ ಮಿರಾಶಿ ಕಾಡಿನಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿದ್ದು, ಸಾಕಷ್ಟು ಹುಡುಕಾಟ ನಡೆಸಿದರೂ ಸಿಗಲಿಲ್ಲ. ಸಿಕ್ಕಿದ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದ ಪೊಲೀಸರು ಸುಜಾತಾ ಮಿರಾಶಿ ವಿರುದ್ಧ ಪ್ರಕರಣ ದಾಖಲಿಸಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page