6

ಮರದಡಿ ನಿಲ್ಲಿಸಿದ ಬೈಕ್ ಮಾಯ!

ಯಲ್ಲಾಪುರ: ಬೈಲಂದುರು ಗ್ರಾಮದ ಮರದ ಅಡಿ ನಿಲ್ಲಿಸಿದ ಬೈಕ್ ಕಾಣೆಯಾಗಿದೆ. ಬೈಕ್ ಕಳೆದುಕೊಂಡ ದೂಳು ಕೊಕ್ಕರೆ ಪೊಲೀಸ್ ದೂರು ನೀಡಿದ್ದಾರೆ.

ಮುಂಡಗೋಡ ಬಸನಾಳದ ದೂಳು ಕೊಕ್ಕರೆ ಜನವರಿ 4ರ ಮಧ್ಯಾಹ್ನ ಬೈಲಂದೂರಿಗೆ ಬಂದಿದ್ದರು. ಮಧ್ಯಾಹ್ನ 3 ಗಂಟೆಗೆ ಅಲ್ಲಿನ ಮರದ ಅಡಿ ತಮ್ಮ ಹಿರೋ ಕಂಪನಿಯ ಸ್ಪೆಂಡ್ಲರ್ ಪ್ಲಸ್ ಬೈಕ್ ನಿಲ್ಲಿಸಿದ್ದರು. 4 ಗಂಟೆಗೆ ಬಂದು ನೋಡಿದಾಗ ಅಲ್ಲಿ ಬೈಕ್ ಇರಲಿಲ್ಲ.

ಬೈಲಂದೂರು, ಕಿರವತ್ತಿ, ಹೊಸಳ್ಳಿ, ಕಾಗೇವಾಡ ಸೇರಿ ಸುತ್ತಮುತ್ತಲಿನ ಊರುಗಳಲ್ಲಿ ಅವರು ಬೈಕಿನ ಹುಡುಕಾಟ ನಡೆಸಿದರು. ಇಷ್ಟು ದಿನ ಹುಡುಕಿದರೂ ಕಳ್ಳರು ಸಿಗಲಿಲ್ಲ. ಬೈಕು ಪತ್ತೆಯಾಗಲಿಲ್ಲ. ಮನೆಗೆ ಹೋದ ಅವರು ಬೈಕ್ ಕಾಣೆಯಾದ ಬಗ್ಗೆ ಪತ್ನಿ ಬಳಿ ಚರ್ಚಿಸಿದ್ದು, ಪತ್ನಿ ನೀಡಿದ ಸಲಹೆ ಸ್ವೀಕರಿಸಿ ಪೊಲೀಸರ ಮೊರೆ ಹೋದರು.

`ತನ್ನ ಬೈಕ್ ಹುಡುಕಿಕೊಡಿ’ ಎಂದು ದೂಳು ಕೊಕ್ಕರೆ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಸಹ ಇದೀಗ ಬೈಕ್ ಹುಡುಕಾಟ ನಡೆಸಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page